ದಾವಣಗೆರೆ: ಸೈಬರ್ ವಂಚಕರು ಹಾಕಿದ ಗಾಳಕ್ಕೆ ಜಗಳೂರ ತಾಲೂಕಿನ ಗೌರಿಪುರ ಗ್ರಾಮದ ಯುವಕನೊಬ್ಬ 75 ಲಕ್ಷ ರೂ. ಹಣ ಕಳೆದುಕೊಂಡಿದ್ದಾನೆ.
ಸೈಬರ್ ವಂಚಕರು ಯವುವಕನ ಬಳಿ ಹಣ ಹೂಡಿಕೆ ಮಾಡಿದರೆ ಅಧಿಕ ಬಡ್ಡಿ ನೀಡುವುದಾಗಿ ನಂಬಿಸಿದ್ದಾರೆ. ಅದರಂತೆ 5,000 ರೂ. ಹಣ ಹೂಡಿಕೆ ಮಾಡಿಸಿಕೊಂಡಿದ್ದಾರೆ. ಬಳಿಕ 15,000 ರೂ. ಲಾಭ ನೀಡಿದ್ದಾರೆ. ಇದರಿಂದ ಖುಷಿಯಾದ ಯುವಕ 75 ಲಕ್ಷ ರೂ. ಹಣ ಹೂಡಿಕೆ ಮಾಡಿದ್ದಾನೆ. ಆದರೆ ಯಾವುದೇ ಲಾಭ ಬಂದಿಲ್ಲ. ವಂಚಕರು ಸಂಪರ್ಕಕ್ಕೂ ಸಿಕ್ಕಿಲ್ಲ. ಬಳಿಕ ಆತನಿಗೆ ವಂಚನೆಗೊಳಗಾಗಿರುವುದು ಅರಿವಾಗಿದೆ. ಈ ಸಂಬಂಧ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಂಚನೆಗೊಳಗಾದ ಯುವಕ ಆನ್ಲೈನ್ ಗೇಮ್ ವ್ಯಾಮೋಹಿಯಾಗಿದ್ದ. ಸಾಮಾಜಿಕ ಜಾಲತಾಣಗಳ ಜಾಹೀರಾತಿನ ಆಕರ್ಷಣೆಗೆ ಒಳಗಾಗಿ ಹಣ ಹೂಡಿಕೆ ಮಾಡಿದ್ದ ಎಂದು ತಿಳಿದು ಬಂದಿದೆ.
Laxmi News 24×7