Breaking News

ವರದಕ್ಷಿಣೆಗೆ ಬೆಳಗಾವಿ ಬಂಜಾರ ಸಮಾಜ ಬ್ರೇಕ್: ನಿಯಮ ಮೀರಿದರೆ 11 ಲಕ್ಷ ದಂಡ

Spread the love

ಬೆಳಗಾವಿ: ವರದಕ್ಷಿಣೆ ಎಂಬ ಸಾಮಾಜಿಕ ಪಿಡುಗಿನ ವಿರುದ್ಧ ಗಟ್ಟಿ ನಿರ್ಧಾರ ಕೈಗೊಳ್ಳುವ ಮೂಲಕ ಬೆಳಗಾವಿ ಜಿಲ್ಲೆಯ ಬಂಜಾರ ಸಮಾಜಇಡೀ ಸಮಾಜಕ್ಕೆ ಮಾದರಿಯಾಗಿದೆ.

ವರದಕ್ಷಿಣೆ ಪಡೆಯುವುದು ಮತ್ತು ನೀಡುವುದನ್ನು ಸಂಪೂರ್ಣವಾಗಿ ನಿಷೇಧಿಸಿರುವ ಸಮಾಜದ ಮುಖಂಡರು, ನಿಯಮ ಉಲ್ಲಂಘಿಸಿದವರಿಗೆ ಭಾರಿ ಮೊತ್ತದ ದಂಡ ವಿಧಿಸುವ ದಿಟ್ಟ ನಿರ್ಣಯವನ್ನು ಕೈಗೊಂಡಿದ್ದಾರೆ.

ಸಮಾಜ ರೂಪಿಸಿರುವ ವರದಕ್ಷಿಣೆ ನಿಷೇಧ ನಿಯಮವನ್ನು ಯಾರಾದರೂ ಉಲ್ಲಂಘಿಸಿ ವರದಕ್ಷಿಣೆ ಪಡೆದರೆ ಅಥವಾ ನೀಡಿದರೆ ಅವರಿಗೆ 11 ಲಕ್ಷ ದಂಡ ರೂ. ವಿಧಿಸಲು ಕಟ್ಟುನಿಟ್ಟಿನ ಠರಾವು ಪಾಸು ಮಾಡಲಾಗಿದೆ.

ಸಮಾಜದ ಪ್ರಮುಖರ ಸಭೆಯಲ್ಲಿ ಈ ಮಹತ್ವದ ನಿರ್ಣಯ ಕೈಗೊಳ್ಳಲಾಗಿದ್ದು, ಬೆಳಗಾವಿ ಜಿಲ್ಲೆಯ ವ್ಯಾಪ್ತಿಗೆ ಬರುವ 35 ತಾಂಡಾಗಳು ಈ ನಿಯಮದ ಅಡಿಗೆ ಬರಲಿವೆ. “ವರದಕ್ಷಿಣೆ ಕೊಡುವುದೂ ಇಲ್ಲ, ಪಡೆಯುವುದೂ ಇಲ್ಲ” ಎಂದು ಸಮಾಜದ ಮುಖಂಡರು ಒಕ್ಕೊರಲಿನಿಂದ ಸಂಕಲ್ಪ ಮಾಡಿದ್ದಾರೆ.

ಈ ಕ್ರಾಂತಿಕಾರಿ ಬದಲಾವಣೆಯನ್ನು ಪ್ರತಿಯೊಂದು ಮನೆಗೂ ತಲುಪಿಸಲು “ವರದಕ್ಷಿಣೆ ಹಠಾವೋ, ತಾಂಡಾ ಬಚಾವೋ” ಎಂಬ ಪ್ರಬಲ ಘೋಷವಾಕ್ಯದೊಂದಿಗೆ ಜನಜಾಗೃತಿ ಮೂಡಿಸಲು ಸಮಾಜ ಮುಂದಾಗಿದೆ.

ವರದಕ್ಷಿಣೆ ನಿಷೇಧದ ಜೊತೆಗೆ ಸಮಾಜದಲ್ಲಿನ ಇತರ ಅನಗತ್ಯ ಆಚರಣೆಗಳಿಗೂ ಕಡಿವಾಣ ಹಾಕಲು ಹಲವು ಮಹತ್ವದ ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿದೆ. ತಾಂಡಾಗಳಲ್ಲಿ ಬಾಲ್ಯ ವಿವಾಹ ನಡೆಯದಂತೆ ಕಟ್ಟುನಿಟ್ಟಿನ ನಿಗಾ ವಹಿಸಲು ಸಂಕಲ್ಪ ಮಾಡಲಾಗಿದೆ.

ಆಡಂಬರದ ಮದುವೆಗಳು ಹಾಗೂ ದುಬಾರಿ ನಿಶ್ಚಿತಾರ್ಥ ಸಮಾರಂಭಗಳಿಗೆ ಸಂಪೂರ್ಣ ಕಡಿವಾಣ ಹಾಕಲಾಗಿದೆ. ಮದುವೆ ಹಾಗೂ ಸಮಾರಂಭಗಳ ನಂತರ ನಡೆಯುವ ಮೆರವಣಿಗೆಗಳಲ್ಲಿ ಅತಿಯಾದ ಶಬ್ದದ ಡಿಜೆ ಸೌಂಡ್ ಸಿಸ್ಟಮ್ ಬಳಸುವುದನ್ನು ನಿಷೇಧಿಸಲಾಗಿದೆ. ಬಂಜಾರ ಸಮಾಜದ ಈ ಪ್ರಗತಿಪರ ಹೆಜ್ಜೆಯು ಸಾಮಾಜಿಕ ಪಿಡುಗುಗಳನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಇತರ ಸಮುದಾಯಗಳಿಗೂ ದೊಡ್ಡ ಮಟ್ಟದ ಪ್ರೇರಣೆಯಾಗಿದೆ.


Spread the love

About Laxminews 24x7

Check Also

ಬೆಂಗಳೂರಿನ ಪ್ರತಿಷ್ಠಿತ ಕ್ಲಬ್‌ನಲ್ಲಿ ಕರ್ಮಕಾಂಡ – ಡ್ರೆಸ್ಸಿಂಗ್‌ ರೂಂ, ಲೇಡಿಸ್ ಟಾಯ್ಲೆಟ್‌ನಲ್ಲಿ ಸಿಸಿಟಿವಿ ಪತ್ತೆ

Spread the loveಬೆಂಗಳೂರು: ಇಲ್ಲಿನ ಬಾಣಸವಾಡಿಯ  ಕ್ಲಬ್‌ನಲ್ಲಿ ಕರ್ಮಕಾಂಡ ಬೆಳಕಿಗೆ ಬಂದಿದ್ದು, ಕ್ಲಬ್‌ನ ಲೇಡಿಸ್ ಟಾಯ್ಲೆಟ್ ಹಾಗೂ ಡ್ರೆಸ್ಸಿಂಗ್‌ ರೂಮ್‌ನಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ