Breaking News

ಗೋಕಾಕ್ ಸರ್ಕಾರಿ ಆಸ್ಪತ್ರೆಯಲ್ಲಿ ಮೂವರು ಮಕ್ಕಳಿಗೆ ಜನ್ಮಕೊಟ್ಟ ಮಹಾತಾಯಿ

Spread the love

ಬೆಳಗಾವಿ: ಮಹಿಳೆಯೊಬ್ಬರು ಮೂವರು ಮಕ್ಕಳಿಗೆ ಜನ್ಮ ನೀಡಿರುವ ಅಪರೂಪದ ಘಟನೆಗೆ ಗೋಕಾಕ್ ತಾಲೂಕು ಸರ್ಕಾರಿ ಆಸ್ಪತ್ರೆ ಸಾಕ್ಷಿಯಾಗಿದೆ. ಇಲ್ಲಿನ ವೈದ್ಯರು ಯಶಸ್ವಿಯಾಗಿ ಹೆರಿಗೆ ಮಾಡಿಸಿದ್ದಾರೆ.

ಮೂಡಲಗಿ ತಾಲೂಕಿನ ಸಂಗನಕೇರಿ ಗ್ರಾಮದ 20 ವರ್ಷದ ರೇಣುಕಾ ರವಿ ಗಣಾಚಾರಿ ಎಂಬವರು ತ್ರಿವಳಿ ಮಕ್ಕಳಿಗೆ ಜನ್ಮ ಕೊಟ್ಟ ಮಹಾತಾಯಿ. ಇವರಿಗೆ ಎರಡು ಗಂಡು, ಒಂದು ಹೆಣ್ಣು ಮಗು ಜನಿಸಿದೆ.

ಅವಧಿಪೂರ್ವ ಜನಿಸಿದ್ದರೂ ನವಜಾತ ಶಿಶುಗಳಲ್ಲಿ ಯಾವುದೇ ಆರೋಗ್ಯ ಸಮಸ್ಯೆ ಕಂಡುಬಂದಿಲ್ಲ. ಆದರೂ ಶಿಶುಗಳನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದೆ. ತಾಯಿ ರೇಣುಕಾ ಆರೋಗ್ಯವಾಗಿದ್ದು, ವಾರ್ಡ್​ನಲ್ಲಿ ಆರೈಕೆ ಪಡೆಯುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಸೋಮವಾರ ಬೆಳಿಗ್ಗೆ ಹೆರಿಗೆ ನೋವು ಕಾಣಿಸಿಕೊಳ್ಳುತ್ತಿದ್ದಂತೆ ಗೋಕಾಕ್ ಸರ್ಕಾರಿ ಆಸ್ಪತ್ರೆಗೆ ರೇಣುಕಾ ಅವರನ್ನು ದಾಖಲಿಸಲಾಗಿತ್ತು.

ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞೆ ಡಾ.ಶ್ವೇತಾ ನಾಯಿಕ ಅವರ ನೇತೃತ್ವದ ತಂಡ ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆಯ ಮೂಲಕ ಹೆರಿಗೆ ಮಾಡಿಸಿದ್ದಾರೆ.

ಡಾ.ಶ್ವೇತಾ ನಾಯಿಕ ಅವರಿಗೆ ವೈದ್ಯರಾದ ಡಾ.ಪವಿತ್ರಾ ದಂಡಿನ, ಡಾ.ಪ್ರಿಯಾ ಪೂಜಾರಿ ಹಾಗು ಅರವಳಿಕೆ ತಜ್ಞ ಡಾ.ಅಮಿತ್ ಸಾಥ್ ಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಮಾತನಾಡಿದ ಡಾ.ಶ್ವೇತಾ ನಾಯಿಕ ಅವರು, “ರೇಣುಕಾ ಗರ್ಭಿಣಿಯಾದ ಒಂದೂವರೆ ತಿಂಗಳಲ್ಲಿ ಮೂವರು ಮಕ್ಕಳು ಇರುವುದು ಗೊತ್ತಾಗಿತ್ತು. ಈ ಬಗ್ಗೆ ಅವರಿಗೆ ತಿಳಿಸಿದಾಗ ಆರಂಭದಲ್ಲಿ ಗಾಬರಿಯಾಗಿದ್ದರು.

ನಾವು ಧೈರ್ಯ ತುಂಬಿದೆವು. ನಿಯಮಿತ ತಪಾಸಣೆ, ಔಷಧಿ ತೆಗೆದುಕೊಳ್ಳುವುದು, ಉತ್ತಮ ಆಹಾರ, ವ್ಯಾಯಾಮ ಮಾಡಿದ ಪರಿಣಾಮ ಯಶಸ್ವಿಯಾಗಿ ಹೆರಿಗೆ ಮಾಡಿಸಲಾಗಿದೆ. 1 ಕೆಜಿ 600 ಗ್ರಾಂ, 1 ಕೆಜಿ 400 ಗ್ರಾಂ, 1 ಕೆಜಿ 500 ಗ್ರಾಂ ತೂಕವನ್ನು ಮೂವರು ಮಕ್ಕಳು ಹೊಂದಿದ್ದಾರೆ.

32 ವಾರ 3 ದಿನದಲ್ಲಿ ಹೆರಿಗೆ ಆಗಿದ್ದರಿಂದ ಮೂರು ಶಿಶುಗಳಿಗೆ ಐಸಿಯು ಘಟಕದಲ್ಲಿ ಇರಿಸಿ ನಿಗಾ ವಹಿಸಿದ್ದೇವೆ. ತಾಯಿ ಆರೋಗ್ಯವಾಗಿದ್ದಾರೆ” ಎಂದು ತಿಳಿಸಿದರು.


Spread the love

About Laxminews 24x7

Check Also

ತುಂಗಾಭದ್ರಾ ಜಲಾಶಯದಿಂದ ಕಾಲುವೆಗೆ ನೀರು ಹರಿಸುವ ಕುರಿತು ಸಚಿವ ತಂಗಡಗಿ ಹೇಳಿದ್ದೇನು?

Spread the loveಕೊಪ್ಪಳ: ತುಂಗಾಭದ್ರಾ ಜಲಾಶಯದಿಂದ ಕಾಲುವೆಗೆ ನೀರು ಬಿಡುವ ವಿಚಾರವಾಗಿ ರೈತರು ಹಾಗೂ ಮುಖಂಡರೊಂದಿಗೆ ಸಭೆ ನಡೆಸಲಾಗುತ್ತಿದೆ. ರೈತರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ