Breaking News

ಹೊತ್ತಿ ಉರಿದ ಕೊಟ್ಟಿಗೆ – 12 ಜಾನುವಾರುಗಳು ಸಜೀವ ದಹನ

Spread the love

ಧಾರವಾಡ: ಕೊಟ್ಟಿಗೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ  ಹೊತ್ತಿ ಉರಿದ ಪರಿಣಾಮ 12 ಜಾನುವಾರುಗಳು ಸಜೀವ ದಹನಗೊಂಡ ಘಟನೆ ತಾಲೂಕಿನ  ಮುಮ್ಮಿಗಟ್ಟಿ ಗ್ರಾಮದಲ್ಲಿ ನಡೆದಿದೆ.

ಬೆಂಕಿಗೆ ಆಹುತಿಯಾದ ಜಾನುವಾರುಗಳು ಸಾಗರ ಅಸುಂಡಿ, ಧರಣೇಂದ್ರ ಅಸುಂಡಿ ಎಂಬ ರೈತರಿಗೆ ಸೇರಿದ್ದು ಎಂದು ತಿಳಿದು ಬಂದಿದೆ. ಅವಘಡದಲ್ಲಿ ಧರಣೇಂದ್ರ ಅಸುಂಡಿಯವರ ಎರಡು ಆಕಳು, ಮೂರು ಎಮ್ಮೆ, ಎರಡು ಆಕಳ ಕರು ಸಾವನ್ನಪ್ಪಿವೆ. ಸಾಗರ ಅಸುಂಡಿಯವರ ಮೂರು ಎಮ್ಮೆ, ಎರಡು ಎಮ್ಮೆ ಕರುಗಳು ಸಾವನ್ನಪ್ಪಿವೆ. ಅಲ್ಲದೇ ನಾಲ್ಕು ಲೋಡ್‌ ಎರಡು ಕೊಟ್ಟಿಗೆಗಳು ಸಂಪೂರ್ಣವಾಗಿ ಭಸ್ಮವಾಗಿವೆ.

ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಘಟನಾ ಸ್ಥಳಕ್ಕೆ ತಹಶೀಲ್ದಾರ್‌ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


Spread the love

About Laxminews 24x7

Check Also

ವಂದೇ ಮಾತರಂನ ಮೊದಲ 2 ಚರಣ ಮಾತ್ರ ಹಾಡಬೇಕು – ಸರ್ಕಾರದ ಆದೇಶ ಪ್ರಶ್ನಿಸಿ ಹೈಕೋರ್ಟ್‌ಗೆ PIL

Spread the loveಬೆಂಗಳೂರು: ವಂದೇ ಮಾತರಂ  ಹಾಡಿನ ವಿವಾದ ರಾಜ್ಯ ಹೈಕೋರ್ಟ್  ಮೆಟ್ಟಿಲೇರಿದೆ. ಮೊದಲ 2 ಚರಣ ಮಾತ್ರ ಹಾಡಬೇಕು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ