Breaking News

ಮತಾಂತರಕ್ಕೆ ಒತ್ತಾಯಿಸಿ ಚಿತ್ರಹಿಂಸೆ, ಹಲ್ಲೆ ನಡೆಸಿ ಉಜ್ಬೇಕಿಸ್ತಾನದಲ್ಲಿ ಕೇರಳ ಮೂಲದ ವಿದ್ಯಾರ್ಥಿನಿ ಹತ್ಯೆ

Spread the love

ತಾಷ್ಕೆಂಟ್: ಉಜ್ಬೇಕಿಸ್ತಾನ್‌ನಲ್ಲಿ 22 ವರ್ಷದ ಭಾರತೀಯ ವೈದ್ಯಕೀಯ ವಿದ್ಯಾರ್ಥಿನಿ  ಹತ್ಯೆ ಮಾಡಲಾಗಿದೆ. ಮತಾಂತರಕ್ಕೆ ಒತ್ತಾಯಿಸಿ ಆಕೆಗೆ ಚಿತ್ರಹಿಂಸೆ ನೀಡಿ, ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆಂದು ವಿದ್ಯಾರ್ಥಿನಿ ಪೋಷಕರು ದೂರು ನೀಡಿದ್ದಾರೆ.

ಸವಾರಿಯಾ ಬಸಂತ್ ಕೊಲೆಯಾದ ವಿದ್ಯಾರ್ಥಿನಿ. ಆಕೆಯ ಕುಟುಂಬದವರು ನೀಡಿದ ದೂರಿನ ಮೇರೆಗೆ ಕೇರಳ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಾವಿಗೂ ಮುನ್ನ ಆಕೆಯ ಮೇಲೆ ಕ್ರೂರವಾಗಿ ಹಲ್ಲೆ ನಡೆಸಲಾಗಿತ್ತೆಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಅಪರಾಧವು ಉಜ್ಬೇಕಿಸ್ತಾನ್‌ನಲ್ಲಿ ನಡೆದಿದ್ದರೂ, ಇಲ್ಲಿ ಪ್ರಕರಣ ದಾಖಲಿಸಲು ನಿಬಂಧನೆಗಳಿವೆ. ಅಲ್ಲಿನ ಪೊಲೀಸರು ಆರೋಪಿಗಳ ಮೇಲೆ ಕಾನೂನು ಕ್ರಮ ಜರುಗಿಸಿದರೆ, ನಾವು ಪ್ರಕರಣವನ್ನು ಮುಕ್ತಾಯಗೊಳಿಸುತ್ತೇವೆ. ಅಲ್ಲಿ ಯಾವುದೇ ಕಾನೂನು ಕ್ರಮ ಕೈಗೊಳ್ಳದಿದ್ದರೆ, ನಾವು ಪ್ರಕರಣವನ್ನು ಮುಂದುವರಿಸುತ್ತೇವೆಂದು ಕಾಯಂಕುಲಂ ಡಿವೈಎಸ್ಪಿ ಬಿನುಕುಮಾರ್ ತಿಳಿಸಿದ್ದಾರೆ.

ಭಾರತೀಯ ರಾಯಭಾರ ಕಚೇರಿ ಮತ್ತು ವಿದೇಶಾಂಗ ಸಚಿವಾಲಯದ ಮೂಲಕ ಉಜ್ಬೇಕಿಸ್ತಾನ್‌ನಲ್ಲಿರುವ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಅಲ್ಲಿನ ತನಿಖೆಯ ಸ್ಥಿತಿಯನ್ನು ತಿಳಿಯುವುದಾಗಿ ಪೊಲೀಸರು ತಿಳಿಸಿದ್ದಾರೆ.

ಉಜ್ಬೇಕಿಸ್ತಾನ್‌ನಲ್ಲಿ ಸವಾರಿಯಾ ಜೊತೆ ಅಧ್ಯಯನ ಮಾಡುತ್ತಿದ್ದ ಮಲಪ್ಪುರಂನ ಸಹ ವೈದ್ಯಕೀಯ ವಿದ್ಯಾರ್ಥಿ ಪ್ರಕರಣದ ಆರೋಪಿಯಾಗಿದ್ದಾನೆ. ಜಗಳದಲ್ಲಿ ಆಕೆಯ ತಲೆಗೆ ಹೊಡೆದು ನಂತರ ಆಕೆಯನ್ನು ಕೊಂದಿದ್ದಾನೆ ಎಂದು ಆರೋಪಿಸಲಾಗಿದೆ.

ಆಕೆಯ ಶವವನ್ನು ಮನೆಗೆ ತರಲು ಉಜ್ಬೇಕಿಸ್ತಾನ್‌ಗೆ ಪ್ರಯಾಣ ಬೆಳೆಸಿದ ಕುಟುಂಬದ ಸದಸ್ಯರೊಬ್ಬರು, ಸಾಯುವ ಮೊದಲು ಆಕೆಗೆ ಚಿತ್ರಹಿಂಸೆ ನೀಡಲಾಗಿದೆ ಎಂದು ಅಲ್ಲಿನ ತನಿಖಾಧಿಕಾರಿಗಳು ತಿಳಿಸಿದ್ದರೆಂದು ಹೇಳಿದ್ದಾರೆ. ಆರೋಪಿಯು ವಿದ್ಯಾರ್ಥಿನಿಗೆ ಮತಾಂತರಗೊಳ್ಳುವಂತೆ ನಿರಂತರವಾಗಿ ಹಿಂಸೆ ನೀಡುತ್ತಿದ್ದ ಎಂದು ಇತರೆ ವಿದ್ಯಾರ್ಥಿಗಳು ತಿಳಿಸಿರುವುದಾಗಿ ತನಿಖಾಧಿಕಾರಿಗಳು ನಮಗೆ ಮಾಹಿತಿ ನೀಡಿದರೆಂದು ಕುಟುಂಬಸ್ಥರು ತಿಳಿಸಿದ್ದಾರೆ.


Spread the love

About Laxminews 24x7

Check Also

ವಿಜಯಪುರ | ಭೂತನಾಳ ಕೆರೆಯಲ್ಲಿ 6 ಶವ ಪತ್ತೆ – ಕೌಟುಂಬಿಕ ಕಲಹಕ್ಕೆ ಆತ್ಮಹತ್ಯೆ ಶಂಕೆ

Spread the loveವಿಜಯಪುರ: ನಗರದ ಹೊರವಲಯದಲ್ಲಿರುವ ಭೂತನಾಳ ಕೆರೆಯಲ್ಲಿ  6 ಜನರ ಶವಗಳು ಪತ್ತೆಯಾಗಿದ್ದು, ಕೌಟುಂಬಿಕ ಕಲಹಕ್ಕೆ ಕುಟುಂಬವೇ ಆತ್ಮಹತ್ಯೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ