Breaking News

ಧಾರವಾಡ ಕೃಷಿ ವಿವಿ ಗೋಧಿ‌ ಬೀಜ ಈಗ ಇಂಡೋನೇಷಿಯಾದಲ್ಲಿ ಬಿತ್ತನೆ

Spread the love

ಧಾರವಾಡ: ಇತ್ತೀಚೆಗೆ ಧಾರವಾಡ ಕೃಷಿ ವಿಶ್ವವಿದ್ಯಾಲಯದಿಂದ  ಬಾಹ್ಯಾಕಾಶಕ್ಕೆ ಮೆಂತೆ ಮತ್ತು ಹೆಸರು ಕಾಳುಗಳನ್ನ ತೆಗೆದುಕೊಂಡು ಹೋಗಿ ಪ್ರಯೋಗ ಮಾಡಲಾಗಿತ್ತು. ಈಗ ಇದೇ ಧಾರವಾಡದ ಕೃಷಿ ವಿಶ್ವವಿದ್ಯಾಲಯ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ಈ ಬಾರಿ ಮತ್ತೊಂದು ದೇಶಕ್ಕೆ ಗೋಧಿ ತಳಿಯ ಬೀಜ ಕಳಿಸಲಾಗುತ್ತಿದೆ.‌ ಇದಕ್ಕೆ ಸ್ವತಃ ಪ್ರಧಾನಿ ಮೋದಿಯವರೇ ಆ ದೇಶದ ಜೊತೆ ಒಡಂಬಡಿಕೆ ಮಾಡಿಕೊಂಡು ಬಂದಿದ್ದಾರೆ.

ಇತ್ತೀಚೆಗೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಇಂಡೋನೇಷಿಯಾಗೆ ಭೇಟಿ ನೀಡಿದ್ದರು. ಈ ವೇಳೆ ಅವರು ಮಹತ್ವದ ಒಪ್ಪಂದ ಮಾಡಿಕೊಂಡು ಬಂದಿದ್ದಾರೆ. ಧಾರವಾಡ ಕೃಷಿ ವಿಶ್ವವಿದ್ಯಾಲಯದ DWR-162 ಹೆಸರಿನ ಗೋಧಿ ತಳಿಯ 100 ಟನ್ ಬೀಜ ಇಂಡೊನೇಷಿಯಾಗೆ ಕೊಡುವ ಒಪ್ಪಂದ ಅದಾಗಿದೆ.

ಏನಿದು DWR-162 ಗೋಧಿ ತಳಿ?
ಧಾರವಾಡ ಕೃಷಿ ವಿವಿ ಬಹಳ ವರ್ಷಗಳ ಹಿಂದೆ ಈ ಒಂದು ಗೋಧಿ ತಳಿಯನ್ನ ಕಂಡು ಹಿಡಿದಿತ್ತು. 1925ರಲ್ಲೇ ಇದರ ಸಂಶೋಧನೆ ಆರಂಭ ಮಾಡಿದ್ದರು. ನಂತರ 1993 ರಲ್ಲಿ ಸಂಶೋಧನೆ ಮುಗಿದು ಈ ಗೋಧಿ ತಳಿಗೆ DWR-162 ಎಂದು ಹೆಸರು ಕೊಡಲಾಯಿತು. ಈ‌ ಗೋಧಿ ಹೆಚ್ಚು ಪ್ರೋಟೀನ್ ಇರುವಂತದ್ದಾಗಿದೆ. ಅಲ್ಲದೇ ಹೆಚ್ಚು ಇಳುವರಿ ಕೊಡುವ ಗೋಧಿ ಇದಾಗಿದೆ. ಈ ಗೋದಿ ಕೇವಲ ಚಪಾತಿ ಮಾಡಲು ಅಷ್ಟೇ ಅಲ್ಲ, ಬ್ರೆಡ್ ಕೂಡಾ ಮಾಡಲು ಉತ್ತಮವಾಗಿದೆ.

ಈ ಗೋಧಿಯ ಇನ್ನೊಂದು ವಿಶೇಷತೆ ಏನೆಂದರೆ ಉಷ್ಣತೆ ಮತ್ತು ಬರ ಎರಡು ತಡೆದುಕೊಳ್ಳಬೇಕು. ಈ ಅ ರೀತಿಯ ಈ DWR-162 ಗೋಧಿ ತಳಿ‌ ಇದೆ. ಅಲ್ಲದೇ ಹೆಕ್ಟೇರ್‌ಗೆ 75 ಕ್ವಿಂಟಲ್ ಗೋಧಿ ಉತ್ಪಾದನೆ ಕೊಡಲಿದೆ. ಇದು ದೇಶದ ಹಲವು ಕಡೆ ಬೆಳೆದು ಪ್ರಯೋಗ ಮಾಡಲಾಗಿದೆ. ಉಷ್ಣ ಹೆಚ್ಚು ಇರುವ ಕಡೆ ಮತ್ತು ಕಡಿಮೆ ಇರುವ ಕಡೆ ಹೇಗೆ ಇಳುವರಿ‌ ಕೊಡಲಿದೆ ಎಂದು ಪ್ರಯೋಗ ಮಾಡಲಾಗಿದೆ. ಹೀಗಾಗಿ ಇದೇ ತಳಿಯ ಗೋಧಿ ಈಗ ಇಂಡೊನೇಷಿಯಾಗೆ ಕೊಡಲಾಗುತ್ತಿದೆ. ಅಲ್ಲಿ‌ಯ ವಾತಾವರಣಕ್ಕೆ ಸುಲಭವಾಗಿ ಹೊಂದಿಕೊಳ್ಳಲಿದೆ.

ದನಕ್ಕೆ ಇದರ ಹುಲ್ಲು ಹಾಕಬಹುದು. ಯಾಕಂದರೆ ಹೆಚ್ಚು ಪ್ರೋಟೀನ್ ಇರುವ ಗೋಧಿ‌‌ ಹುಲ್ಲಾಗಿದೆ. ಕೃಷಿ ವಿವಿಯಲ್ಲಿ ಇದನ್ನ ರೈತರ ಸಹಭಾಗಿತ್ವದಲ್ಲೇ‌ ಬೆಳೆದಿದೆ. ಈ‌ ಗೋಧಿ ಈಗ ಕೇವಲ ಭಾರತ ದೇಶದ ಆಹಾರ ಭದ್ರತೆ ಅಷ್ಟೇ ಅಲ್ಲ, ಇಂಡೊನೇಷಿಯಾದ ಆಹಾರ ಭದ್ರತೆ ಕುಡಾ ಆಗಲಿದೆ ಎಂದು ಕೃಷಿ ವಿಜ್ಞಾನಿ‌ ಅಭಿಪ್ರಾಯಪಟ್ಟಿದ್ದಾರೆ.

ದೇಶದಲ್ಲಿ ಅಷ್ಟೇ ಅಲ್ಲದೇ ವಿಶ್ವದಲ್ಲೇ‌ ಈಗ ಧಾರವಾಡ ಕೃಷಿ‌ ವಿವಿ ಹೆಸರು ಮಾಡುತ್ತಿದೆ.‌ ಹಲವು ವಿಜ್ಞಾನಿಗಳ ಶ್ರಮ ಈ ಸಂಶೋಧನೆಯ ಹಿಂದಿದೆ. ಈಗ ಪ್ರಧಾನಿ ಮೋದಿಯವರು ಇದರ ಒಪ್ಪಂದ ಮಾಡಿದ್ದಕ್ಕೆ ಕೃಷಿ ವಿವಿಗೆ ಒಂದು ದೊಡ್ಡ‌ ಕಿರಿಟ ಸಿಕ್ಕಂತೆ ಆಗಿದೆ.


Spread the love

About Laxminews 24x7

Check Also

ಎಸ್.ಆರ್ ವಿಶ್ವನಾಥ್ ಜೊತೆ ಜಟಾಪಟಿ ಮುಗಿದ ವಿಚಾರ – ಪಕ್ಷದ ಹಿತದೃಷ್ಟಿಯಿಂದ ಒಟ್ಟಿಗೆ ಕಾರ್ಯನಿರ್ವಹಣೆ: ಡಾ.ಸುಧಾಕರ್

Spread the loveಬೆಂಗಳೂರು: ಎಸ್.ಆರ್ ವಿಶ್ವನಾಥ್  ಜೊತೆ ಜಟಾಪಟಿ ಮುಗಿದ ವಿಚಾರ. ಹೀಗಾಗಿ ಪಕ್ಷದ ಹಿತದೃಷ್ಟಿಯಿಂದ ಒಟ್ಟಿಗೆ ಕಾರ್ಯನಿರ್ವಹಿಸುತ್ತಿದ್ದೇವೆ ಎಂದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ