Breaking News

ವೈದ್ಯಕೀಯ ಸೀಟು ಕೊಡಿಸುವುದಾಗಿ ವಂಚನೆ; ಮಾಜಿ ಸಚಿವ ಜಾಲಪ್ಪ ಸೊಸೆಗೆ 5 ವರ್ಷ ಜೈಲು ಶಿಕ್ಷೆ

Spread the love

ಬೆಂಗಳೂರು: ವೈದ್ಯಕೀಯ ಸೀಟು ಕೊಡಿಸುವುದಾಗಿ ಹಣ ಪಡೆದು ವಂಚನೆ ಮಾಡಿದ ಪ್ರಕರಣದಲ್ಲಿ ಮಾಜಿ ಸಚಿವ ಜಾಲಪ್ಪ ಅವರ ಸೊಸೆ ನಾಗವೇಣಿ ದೋಷಿ ಎಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ. ದೋಷಿಗೆ 5 ವರ್ಷ ಜೈಲು ಶಿಕ್ಷೆ ವಿಧಿಸಿ ಕೋರ್ಟ್ ತೀರ್ಪು ನೀಡಿದೆ.

ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕಾಶ್ ಕುಮಾರ್ ಯಾರಪ್ಪ ದೂರು ದಾಖಲಿಸಿದ್ದರು. ವೈದ್ಯಕೀಯ ಕಾಲೇಜಿನಲ್ಲಿ ಮ್ಯಾನೇಜ್ಮೆಂಟ್ ಕೋಟಾದಡಿ ಸೀಟು ಕೊಡಿಸುವುದಾಗಿ 45 ಲಕ್ಷ ರೂ. ಹಣ ಪಡೆದು ವಂಚಿಸಲಾಗಿದೆ ಎಂದು ಆರೋಪಿಸಿದ್ದರು. ಜಾಲಪ್ಪ ಪುತ್ರ ಜೆ.ನರಸಿಂಹಸ್ವಾಮಿ ಮತ್ತು ಸೊಸೆ ನಾಗವೇಣಿ ವಿರುದ್ಧ ಆರೋಪ ಹೊರಿಸಿದ್ದರು.

ಸೀಟು ಕೊಡಿಸಲು 45 ಲಕ್ಷ ರೂ. ಹಣ ಪಡೆದಿದ್ದರು. ಸೀಟ್ ದೊರೆಯದ ಕಾರಣ ಹಣ ಹಿಂತಿರುಗಿಸಲು ನರಸಿಂಹಸ್ವಾಮಿ ಅವರು 2 ಚೆಕ್ ನೀಡಿದ್ದರು. 25 ಲಕ್ಷ, 20 ಲಕ್ಷ ಮೊತ್ತದ ಎರಡು ಚೆಕ್ ಕೊಟ್ಟಿದ್ದರು. ಆದರೆ, ಎರಡು ಚೆಕ್‌ಗಳ ಬೌನ್ಸ್ ಆಗಿದ್ದವು. ಬಳಿಕ ಪ್ರಕಾಶ್ ಕುಮಾರ್ ಯಾರಪ್ಪ ಕೋರ್ಟ್ ಮೆಟ್ಟಿಲೇರಿದ್ದರು.

45 ಲಕ್ಷ ಕೊಟ್ಟಿರುವುದಾಗಿ ಕೋರ್ಟ್‌ನಲ್ಲಿ ನರಸಿಂಹಸ್ವಾಮಿ ಅವರು ಒಪ್ಪಿಕೊಂಡಿದ್ದರು. ದೋಷಿ ಎಂದು ಆದೇಶಿಸಿದ್ದ ನ್ಯಾಯಲಾಯವು ಆರೋಪಿಗೆ ದಂಡ ವಿಧಿಸಿತ್ತು. 65,00,000 ರೂ. ಗಳ ದಂಡ ವಿಧಿಸಲಾಯಿತು. ಅದರಲ್ಲಿ 64,95,000 ರೂ. ಅನ್ನು ದೂರುದಾರರಿಗೆ ಪರಿಹಾರವಾಗಿ ನೀಡಲು ಆದೇಶಿಸಲಾಯಿತು. ದಂಡ ಪಾವತಿಸದಿದ್ದರೆ 6 ತಿಂಗಳ ಸರಳ ಕಾರಾಗೃಹ ಶಿಕ್ಷೆ ವಿಧಿಸಲಾಯಿತು.

ಈ ಆದೇಶವನ್ನು ಪ್ರಶ್ನಿಸಿ ಆರೋಪಿಯು 82 ನೇ ವಿಶೇಷ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಆದರೆ, ಕೋರ್ಟ್ ಆದೇಶವನ್ನ ಎತ್ತಿಹಿಡಿದಿತ್ತು. ಆದರೆ, ವಿಚಾರಣೆ ಬಾಕಿ ಇರುವಾಗಲೇ ನರಸಿಂಹಸ್ವಾಮಿ ಅವರು ಮೃತಪಟ್ಟರು. ಈಗ ಅವರ ಪತ್ನಿ ನಾಗವೇಣಿ ಎರಡನೇ ಆರೋಪಿ ಆಗಿರುವುದರಿಂದ ಅವರಿಗೆ ಕೋರ್ಟ್ ಶಿಕ್ಷೆ ವಿಧಿಸಿದೆ.


Spread the love

About Laxminews 24x7

Check Also

15 ದಿನದ ಹಿಂದಷ್ಟೇ ಉದ್ಘಾಟನೆಯಾದ ಕೃಷ್ಣಪಥ ಹೆದ್ದಾರಿ ಈಗ ಸಾವಿನ ಹೈವೇ

Spread the loveಬೆಂಗಳೂರು: ಕಳೆದ 15 ದಿನದ ಹಿಂದಷ್ಟೇ ಉದ್ಘಾಟನೆಯಾದ ಬೆಂಗಳೂರಿನ ಕೃಷ್ಣಪಥ ಹೆದ್ದಾರಿ ಈಗ ಸಾವಿನ ಹೈವೇ ಆಗ್ತಿದೆ. ಬಹುಕೋಟಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ