Breaking News

ಮಳೆಗಾಲದ ಅಧಿವೇಶನ ಮುಗಿಯೋವರೆಗೆ ಮೋದಿ ಸಂಪುಟ ಪುನಾರಚನೆ ಇಲ್ಲ?

Spread the love

ನವದೆಹಲಿ: ಜುಲೈ 21 ರಿಂದ ಆಗಸ್ಟ್ 21 ರ ವರೆಗೆ ನಡೆಯಲಿರುವ ಮಳೆಗಾಲದ ಸಂಸತ್‌ ಅಧಿವೇಶನ ಅಂತ್ಯದ ವರೆಗೆ ಪ್ರಧಾನಿ ನರೇಂದ್ರ ಮೋದಿ  ಸರ್ಕಾರದಲ್ಲಿ ಸಂಪುಟ ಪುನಾರಚನೆ ಅಸಾಧ್ಯ ಎಂದು ಉನ್ನತ ಮೂಲಗಳನ್ನಾಧರಿಸಿ ಮಾಧ್ಯಮಗಳು ವರದಿ ಮಾಡಿವೆ.

ಸಂಪುಟ ಪುನಾರಚನೆ ಸೇರಿದಂತೆ ಯಾವುದೇ ಕೆಲಸಗಳಿದ್ದರೂ, ಅದು ಅಧಿವೇಶನ ಮುಗಿದ ನಂತರ ಕೈಗೊಳ್ಳಲು ಪಕ್ಷ ನಿರ್ಧರಿಸಿದೆ ಎಂದು ವಿಶ್ವಾಸಾರ್ಹ ಮೂಲಗಳು ತಿಳಿಸಿವೆ.

ಮುಂದಿನವಾರದಲ್ಲಿ ಪ್ರಧಾನಿ ಮೋದಿ ಒಂದು ವಾರಗಳ ಕಾಲ ವಿದೇಶಿ ಪ್ರವಾಸಕ್ಕೆ ತೆರಳುತ್ತಿದ್ದಾರೆ. ಇದಾದ ಒಂದು ವಾರದ ಬಳಿಕ (ಜುಲೈ 20 ರಿಂದ) ಸಂಸತ್ತಿನ ಮಳೆಗಾಲದ ಅಧಿವೇಶನ ಶುರುವಾಗಲಿದೆ. ಹಾಗಾಗಿ ಸದ್ಯಕ್ಕೆ ಸರ್ಕಾರದ ಆದ್ಯತೆ ಈ ಅಧಿವೇಶನದಲ್ಲಿ ಕೆಲ ನಿರ್ಣಾಯಕ ಶಾಸನಗಳನ್ನ ಮಂಡಿಸುವುದಾಗಿದೆ. ಆದ್ದರಿಂದ ಮಳೆಗಾಲದ ಅಧಿವೇಶನ ಮುಗಿದ ಬಳಿಕ, ಕೆಲದಿನಗಳ ಕಾಲ ಸಮಯ ತೆಗೆದುಕೊಂಡು ಸಂಪುಟ ಪುನಾರಚನೆ ಮಾಡಲಾಗುತ್ತದೆ ಎಂದು ವರದಿಗಳು ತಿಳಿಸಿವೆ.


Spread the love

About Laxminews 24x7

Check Also

ರಾಜ್ಯದಲ್ಲಿ ಬರ – 177 ತಾಲೂಕುಗಳಲ್ಲಿ 46,324 ಕೋಟಿ ಬೆಳೆ ನಷ್ಟ , 7,142 ಕೋಟಿ ನೆರವಿಗೆ ಮನವಿ

Spread the loveಬೆಂಗಳೂರು: ರಾಜ್ಯದ 240 ತಾಲೂಕುಗಳ ಪೈಕಿ 217 ತಾಲೂಕುಗಳನ್ನ ಬರಪೀಡಿತ  ಎಂದು ಘೋಷಿಸಲಾಗಿದ್ದು, ಬರ ಪರಿಸ್ಥಿತಿ ಹಿನ್ನೆಲೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ