Breaking News

ವಿದ್ಯುತ್ ಖಾಸಗೀಕರಣಕ್ಕೆ ರಾಜ್ಯ ಸರ್ಕಾರ ವಿರೋಧ – ಸಿಎಂ ಡಿಕೆಶಿ ಹೇಳಿದ್ದೇನು?

Spread the love

ಬೆಂಗಳೂರು: ವಿದ್ಯುತ್ ಖಾಸಗೀಕರಣಕ್ಕೆ ರಾಜ್ಯ ಸರ್ಕಾರ ವಿರೋಧಿಸಿದ್ದು, ಈ ಬಗ್ಗೆ ಶುಕ್ರವಾರ (ಜು.3) ಕೆಇಆರ್‌ಸಿ ಸಭೆಯಲ್ಲಿ ನಿರ್ಧಾರ ಮಾಡುತ್ತೇವೆ ಅಂತಾ ಸಿಎಂ ಡಿಕೆ ಶಿವಕುಮಾರ್  ಹೇಳಿದರು.

ಇಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಿಎಂ, ವಿದ್ಯುತ್ ಖಾಸಗೀಕರಣಕ್ಕೆ ಟಾಟಾ ಸಂಸ್ಥೆಯವರು ಅರ್ಜಿ ಹಾಕಿದ್ದಾರೆ. ಎಲ್ಲಾ ಎಸ್ಕಾಂಗಳು ಆಕ್ಷೇಪಣೆ ಸಲ್ಲಿಸಬೇಕು ಅಂತ ಹೇಳಿದ್ದೀನಿ. ಎಲ್ಲ ಆಕ್ಷೇಪಣೆ ಸಲ್ಲಿಸಲಿದ್ದಾರೆ. ಸರ್ಕಾರದ ನಿಲುವು ಸ್ಪಷ್ಟಪಡಿಸಿದ್ದೇನೆ. ಖಾಸಗೀಕರಣಕ್ಕೆ ಒಪ್ಪಬೇಡಿ ಎಂದಿದ್ದೇವೆ ಅಂತಾ ತಿಳಿಸಿದರು.

ಇನ್ನು ಈ ಬಗ್ಗೆ ಶುಕ್ರವಾರದ ಕೆಇಆರ್‌ಸಿ ಸಭೆಯಲ್ಲಿ ತೀರ್ಮಾನ ಮಾಡುತ್ತೇವೆ ಅಂತಾ ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದರು.

ಜನರ ಸಮಸ್ಯೆ ಅಲಿಸಲು ʻಪ್ರಜಾಸೇವಾ ಇಲಾಖೆʼ
ಮುಂದುವರಿದು ಮಾತನಾಡಿದ ಸಿಎಂ, ಜನರ ಸಮಸ್ಯೆ ಅಲಿಸಲು ಪ್ರಜಾಸೇವಾ ಇಲಾಖೆಯನ್ನ ಆರಂಭಿಸುತ್ತಿದ್ದೇವೆ ಎಂದರು.

ಪ್ರಜಾಸೇವೆ ಇಲಾಖೆಯ ಜವಾಬ್ದಾರಿಯನ್ನ ಮಂತ್ರಿಗೆ ವಹಿಸುತ್ತಿದ್ದೇವೆ. ಪ್ರಜಾಸೇವಾ ಅಭಿಯಾನ ಕಡ್ಡಾಯವಾಗಿ ಸಭೆ ನಡೆಸಬೇಕು. ಪ್ರತಿ ಜಿಲ್ಲಾ ಉಸ್ತುವಾರಿ ಸಚಿವರು ಕಡ್ಡಾಯವಾಗಿ ತಿಂಗಳಿಗೆ 2 ದಿನ, ಎರಡು ವಿಧಾನಸಭಾ ಕ್ಷೇತ್ರಗಳಿಗೆ ಭೇಟಿ ನೀಡಬೇಕು. ಎಲ್ಲ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಇರಬೇಕು. ಮುಂಚಿತವಾಗಿಯೇ ದಿನ ತಿಳಿಸುತ್ತೇವೆ. ಒಂದು ದಿನ ಮುಂಚೆಯೇ ಅರ್ಜಿಯನ್ನ ಕೊಡುತ್ತೇವೆ. ಸರ್ಕಾರವೇ ಅವರ ಮನೆ ಬಾಗಿಲಿಗೆ ಹೋಗಬೇಕು. ನಾನು ಕೂಡ ಕೆಲ ತಾಲ್ಲೂಕುಗಳಿಗೆ ಹೋಗಿ ಸಭೆ ಮಾಡ್ತೀನಿ ಎಂದು ಹೇಳಿದ್ರು .


Spread the love

About Laxminews 24x7

Check Also

ರಾಜ್ಯದಲ್ಲಿ ಬರ – 177 ತಾಲೂಕುಗಳಲ್ಲಿ 46,324 ಕೋಟಿ ಬೆಳೆ ನಷ್ಟ , 7,142 ಕೋಟಿ ನೆರವಿಗೆ ಮನವಿ

Spread the loveಬೆಂಗಳೂರು: ರಾಜ್ಯದ 240 ತಾಲೂಕುಗಳ ಪೈಕಿ 217 ತಾಲೂಕುಗಳನ್ನ ಬರಪೀಡಿತ  ಎಂದು ಘೋಷಿಸಲಾಗಿದ್ದು, ಬರ ಪರಿಸ್ಥಿತಿ ಹಿನ್ನೆಲೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ