Breaking News

ಚನ್ನಮ್ಮನ ಕಿತ್ತೂರು: ಟೆಂಪೊ ಪಲ್ಟಿ, ಮೂವರು ಸ್ಥಳದಲ್ಲೇ ಸಾವು, ಆರು ಮಂದಿಗೆ ಗಾಯ

Spread the love

ಚನ್ನಮ್ಮನ ಕಿತ್ತೂರು: ಇಲ್ಲಿನ ಪುಣೆ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ನಸುಕಿನಲ್ಲಿ, ಸಿಮೆಂಟ್‌ ಕಂಬಗಳನ್ನು ಸಾಗಣೆ ಮಾಡುತ್ತಿದ್ದ ವಾಹನ ಪಲ್ಟಿಯಾಗಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಆರು ಮಂದಿ ಗಾಯಗೊಂಡಿದ್ದಾರೆ.

ಉತ್ತರ ಪ್ರದೇಶದವರಾದ ಆದಿಲ್ ಖಾನ್ ವಯಸ್ಸು (26), ಪವನ್ (26) ಮತ್ತು ನಜೀರ್ ಖಾನ್ (25) ಮೃತರು.

ಎಲ್ಲರೂ ಉತ್ತರ ಪ್ರದೇಶದ ಉನ್ನವ್ ಜಿಲ್ಲೆಯ ಕುರಸಟ್ ಗ್ರಾಮದವರು ಎಂದು ಪ್ರಾಥಮಿಕ ಮಾಹಿತಿ ಸಿಕ್ಕಿದೆ. ಇನ್ನಷ್ಟು ವಿವರಗಳು ಗೊತ್ತಾಗಬೇಕಿದೆ. |

ವಾಹನ ಚಾಲಕ ವಿಜಯಪುರ ಜಿಲ್ಲೆಯ ಚಡಚಣದ ದುರ್ಗಪ್ಪ ಗಾಡಿವಡ್ಡರ ಸೇರಿ 6 ಜನರಿಗೆ ಗಾಯಗಳಾಗಿದ್ದು, ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

ಚನ್ನಮ್ಮನ ಕಿತ್ತೂರು ಪಟ್ಟಣದಲ್ಲಿ ರಾಣಿ ಚನ್ನಮ್ಮನ ಬೃಹತ್ ಪ್ರತಿಮೆ ಇರುವ ಹತ್ತಿರದಲ್ಲೇ ರಾಷ್ಟ್ರೀಯ ಹೆದ್ದಾರಿಯ ಸೇತುವೆ ಮೇಲೆ ಅವಘಡ ಸಂಭವಿಸಿದೆ.

ಸಿಮೆಂಟ್‌ ಕಂಬಗಳನ್ನು ಹೇರಿಕೊಂಡು ವೇಗವಾಗಿ ಹೊರಟಿದ್ದ 407 ಗೂಡ್ಸ್‌ ಟೆಂಪೊ ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ಮಧ್ಯದ ವಿಭಜಕಕ್ಕೆ ಡಿಕ್ಕಿ ಹೊಡೆಯಿತು. ಅತಿಯಾದ ಭಾರವಿದ್ದ ಕಾರಣ ಟೆಂಪೊ ಹೊರಳಿಬಿದ್ದಿತು ಎಂದು ಸಬ್‌ಇನ್‌ಸ್ಪೆಕ್ಟರ್‌ ಭರತ್ ತಿಳಿಸಿದ್ದಾರೆ.


Spread the love

About Laxminews 24x7

Check Also

ಕೆಆರ್ ಪುರಂ ತ್ರಿವಳಿ ಹತ್ಯೆ ಕೇಸ್ – ಪುದುಚೇರಿಯಲ್ಲಿ ಹಂತಕಿ ಶ್ವೇತಾ ಬಂಧನ

Spread the loveಬೆಂಗಳೂರು: ಕೆಆರ್ ಪುರಂ ತ್ರಿಬಲ್ ಮರ್ಡರ್ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಆರೋಪಿ ಶ್ವೇತಾಳನ್ನು ಪುದುಚೇರಿಯಲ್ಲಿ ಪೊಲೀಸರು ಬಂಧಿಸಿದ್ದಾರೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ