Breaking News

ಮೈ-ಕೈ ಕೆಸರಿನ ಫೋಟೋದ ಬಳಿಕ ಟ್ರ್ಯಾಕ್ಟರ್ ಏರಿದ ಸಲ್ಲು ಭಾಯ್

Spread the love

ಮುಂಬೈ: ಮೈ-ಕೈ ಕೆಸರು ತುಂಬಿಕೊಂಡ ಫೋಟೋ ಭಾರೀ ಚರ್ಚೆಗೆ ಗುರಿಯಾದ ಬಳಿಕ ಇದೀಗ ಬಾಲಿವುಡ್ ಭಾಯ್‍ಜಾನ್ ಸಲ್ಮಾನ್ ಖಾನ್ ಕೃಷಿ ಮಾಡುತ್ತಿರುವ ವಿಡಿಯೋವೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದು, ಇದೀಗ ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ.

ಹೌದು. ಕೊರೊನಾ ವೈರಸ್ ಎಂಬ ಚೀನಿ ಕಾಯಿಲೆ ನಮ್ಮ ದೇಶಕ್ಕೆ ಕಾಲಿಟ್ಟ ಬಳಿಕ ಅದು ಹರಡುವುದನ್ನು ತಡೆಗಟ್ಟುವ ಸಲುವಾಗಿ ದೇಶಾದ್ಯಂತ ಲಾಕ್‍ಡೌನ್ ಹೇರಲಾಯಿತು. ಪರಿಣಾಮ ಹಲವು ಮಂದಿ ಕೃಷಿಯತ್ತ ಮುಖಮಾಡಿದ್ದಾರೆ. ಅಂತೆಯೇ ಲಾಕ್‍ಡೌನ್ ಹೇರಲಾದ ದಿನದಿಂದ ಸಲ್ಮಾನ್ ಖಾನ್ ಅವರು ಕೂಡ ಪನ್ವೆಲ್ ಫಾರ್ಮ್ ಹೌಸ್‍ನಲ್ಲೇ ಉಳಿದುಕೊಂಡಿದ್ದು, ಕೃಷಿ ಚಟುವಟಿಕೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ.

 

ಹೀಗೆ ತನ್ನ ಬಿಡುವಿನ ವೇಳೆಯಲ್ಲಿ ಸಲ್ಮಾನ್ ಟ್ರ್ಯಾಕ್ಟರ್ ಏರಿ ಉಳುಮೆ ಮಾಡಿದ್ದಾರೆ. ಇದನ್ನು ಅಲ್ಲೇ ಇದ್ದವರು ವಿಡಿಯೋ ಮಾಡಿದ್ದು, ಇದೀಗ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಕ್ಕೆ ನಟ ಅಪ್ಲೋಡ್ ಮಾಡಿದ್ದಾರೆ. ವಿಡಿಯೋದಲ್ಲಿ ನಟ ಗುಲಾಬಿ ಬಣ್ಣದ ಟೀ ಶರ್ಟ್ ಹಾಗೂ ಕಪ್ಪು ಬಣ್ಣದ ಶಾರ್ಟ್ಸ್ ಧರಿಸಿ, ಗದ್ದೆಯಲ್ಲಿ ಟ್ರ್ಯಾಕ್ಟರ್ ಓಡಿಸುವುದನ್ನು ಕಾಣಬಹುದಾಗಿದೆ.

ಈ ಹಿಂದೆ ನಟ ರೈತರ ಪರವಾಗಿ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಫೋಟೋವೊಂದು ಹಾಕುವ ಮೂಲಕ ಭಾರೀ ಟ್ರೋಲ್‍ಗೆ ಒಳಗಾಗಿದ್ದರು. ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಅವರ ಫೋಟೋ ಹಾಕಿಕೊಂಡಿದ್ದ ಸಲ್ಮಾನ್, ‘ಎಲ್ಲ ರೈತರನ್ನು ಗೌರವಿಸಿ’ ಎಂದು ಬರೆದುಕೊಂಡಿದ್ದರು. ಫೋಟೋದಲ್ಲಿ ಹೊಲದಲ್ಲಿ ನಟ ಕುಳಿತಿದ್ದಾರೆ. ಜೊತೆಗೆ ಅವರ ಮೈತುಂಬಾ ಕೆಸರನ್ನು ಬಳಿಯಲಾಗಿದೆ. ಇದನ್ನು ಕಂಡ ನೆಟ್ಟಿಗರು ಯಾವ ರೈತ ಈ ರೀತಿ ಹೊಲದಲ್ಲಿ ಕುಳಿತು ಫೋಟೋಶೂಟ್ ಮಾಡಿಸುತ್ತಾನೆ ಎಂದು ಕಮೆಂಟ್ ಮಾಡುವ ಮೂಲಕ ಸಲ್ಮಾನ್ ಅವರನ್ನು ಕಾಲೆಳೆದಿದ್ದರು.

ಇದಕ್ಕೂ ಮೊದಲು ಕುದುರೆಗೆ ಹುಲ್ಲು ತಿನ್ನಿಸಿ ತಾನು ತಿಂದು ಸುದ್ದಿಯಾಗಿದ್ದರು. ಜೊತೆಗೆ ಅದೇ ತೋಟದ ಮನೆಯಲ್ಲಿ ವಿದೇಶಿ ಗೆಳತಿ ಜೊತೆ ಸಿಕ್ಕಿಬಿದ್ದಿದ್ದರು. ಈ ಹಿಂದೆಯೂ ಕೂಡ ರೈತರ ಪರವಾಗಿ ಇನ್‍ಸ್ಟಾ ಪೋಸ್ಟ್ ಹಾಕಿದ್ದ ಸಲ್ಮಾನ್ ಖಾನ್, ನಾವು ತಿನ್ನುವ ಪ್ರತಿಯೊಂದು ಅನ್ನದ ಮೇಲೆ ನಮ್ಮ ಹೆಸರು ಬರೆದಿರುತ್ತದೆ. ‘ಜೈ ಜವಾನ್ ಜೈ ಕಿಸಾನ್’ ಎಂದು ಬರೆದುಕೊಂಡಿದ್ದರು. ಜೊತೆಗೆ ಭತ್ತ ನಾಟಿ ಮಾಡುತ್ತಿರುವ ಫೋಟೋವನ್ನು ಕೂಡ ಹಂಚಿಕೊಂಡಿದ್ದರು.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ