Breaking News

ಸುಗಮ ಸಂಚಾರಕ್ಕಾಗಿ ರಸ್ತೆ ಅಭಿವೃದ್ಧಿ

Spread the love

ಹುಕ್ಕೇರಿ: ಗ್ರಾಮೀಣ ಜನರ ಸುಗಮ ಸಂಚಾರ ಮತ್ತು ಸರಕು ಸಾಗಣೆ ಅನುಕೂಲಕ್ಕಾಗಿ ರಸ್ತೆ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕೆಂದು ಶಾಸಕ ನಿಖಿಲ ಕತ್ತಿ ಹೇಳಿದರು.
ತಾಲೂಕಿನ ಮದಮಕ್ಕನಾಳ, ಹೊನ್ನಿಹಳ್ಳಿ, ಕೋಣಕೇರಿ, ಹಡಲಗಾ ಗ್ರಾಮಗಳ ರಸ್ತೆ ಹಾಗೂ ಸಂಕೇಶ್ವರ ಪಟ್ಟಣದ ಲಿಂಗಾಯತ ಸಮುದಾಯದ ಸ್ಮಶಾನ ರಸ್ತೆ ಸುಧಾರಣೆ ಕಾಮಗಾರಿಗೆ ೨.೯೫ ಕೋಟಿ ರೂ. ವೆಚ್ಚದಲ್ಲಿ ಶುಕ್ರವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆ ಬಳಸಿಕೊಂಡು ನೀರಾವರಿ, ಕೃಷಿ, ಶೈಕ್ಷಣಿಕ, ಔದ್ಯೋಗಿಕ ಸೌಲಭ್ಯ ಒದಗಿಸಲು ಹಲವು ಯೋಜನೆ ಜಾರಿಗೊಳಿಸಲಾಗುತ್ತಿದೆ. ಪಟ್ಟಣ ಮತ್ತು ಗ್ರಾಮಗಳ ನಡುವಿನ ಸಂಪರ್ಕ ಕಲ್ಪಿಸುವ ಪ್ರಮುಖ ಮಾರ್ಗಗಳ ಸುಧಾರಣೆಗೆ ವಿಶೇಷ ಕಾಳಜಿ ವಹಿಸಲಾಗಿದೆ ಎಂದರು.
ಜಿಪಂ ಇಂಜಿನಿಯರಿಂಗ್ ಉಪವಿಭಾಗದ ಎಇಇ ಸುಭಾಷ ಭಜಂತ್ರಿ, ಸಹಾಯಕ ಅಭಿಯಂತ ಶಶಿಧರ ಭೂಸಗೋಳ, ಸುನೀಲ ಪರ್ವತರಾವ, ಶಿವಾನಂದ ಮುಡಸಿ, ಪ್ರಶಾಂತ ಪಾಟೀಲ, ಅಶೋಕ ಹಿರೇಕೋಡಿ, ರೋಹನ ನೇಸರಿ, ಅಪ್ಪಾಸಾಹೇಬ ಶಿರಕೋಳಿ, ಮಹಾದೇವ ಜಕಾತೆ, ರವೀಂದ್ರ ಮಾಯನ್ನವರ, ಕುಮಾರ ತೋಂಡಲೆ, ನೇತಾಜಿ ಪಾಟೀಲ, ಶರದ ಕುರಾಡೆ, ಸುಧಾಕರ ದೇಸಾಯಿ, ನಾರಾಯಣ ರಜಪೂತ, ಮಲ್ಲಪ್ಪ ಬಿಸಿರೊಟ್ಟಿ ಇತರರಿದ್ದರು.

Spread the love

About Laxminews 24x7

Check Also

ಬೀದಿ ವ್ಯಾಪಾರಿಗಳ ಭೂಬಾಡಿಗೆ ಜಿಲ್ಲಾಧಿಖಾರಿ ಕಚೇರಿ ಎದುರು ಪ್ರತಿಭಟನೆ

Spread the loveಬೆಳಗಾವಿ : ಗ್ರಾಪಂದಿಂದ ಬೀದಿ ವ್ಯಾಪಾರಿಗಳ ದಿನಿನಿತ್ಯದ ಭೂಬಾಡಿಗೆಯನ್ನು ಏಕಾಏಕಿಯಾಗಿ ಹೆಚ್ಚುವರಿ ಮಾಡುವುದರ ಜತೆಗೆ, ಕಟ್ಟುವ ಬಾಡಿಗೆಗೆ ರಸೀದಿಯನ್ನೂ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ