Breaking News

ಜಮೀರ್ ಅವರನ್ನು ನಂಬಿದ್ದೆ ಆದ್ರೆ ಈ ರೀತಿ ಮಾಡ್ತಾರೆ ಅಂತ ಗೊತ್ತಿರಲಿಲ್ಲ: ಸಮರ್ಥ್ ಶಾಮನೂರು ಬೇಸರ

Spread the love

ದಾವಣಗೆರೆ: ಜಮೀರ್ ಹಾಗೂ ಕೆಎಂಡಿಸಿ ನಿರ್ದೇಶಕ ಸಿರಾಜ್ ಮೊಹಮ್ಮದ್ ಅವರದ್ದು ಎನ್ನಲಾದ ಆಡಿಯೋ ವಿಚಾರವಾಗಿ ಸಮರ್ಥ ಶಾಮನೂರು  ಬೇಸರ ಹೊರಹಾಕಿದ್ದಾರೆ.

ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಯ ವೇಳೆ ಸಚಿವ ಜಮೀರ್ ಅಹಮ್ಮದ್ ಹಾಗೂ ಕೆಎಂಡಿಸಿ ನಿರ್ದೇಶಕ ಸಿರಾಜ್ ಮೊಹಮ್ಮದ್ ಸೇರಿ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಷಡ್ಯಂತ್ರ ನಡೆಸಿದ್ದರು ಎನ್ನಲಾದ ಆಡಿಯೋ ಬಗ್ಗೆ ಪ್ರತಿಕ್ರಿಯಿಸಿದರು. ಜಮೀರ್ ಅವರನ್ನು ನಂಬಿದ್ದೆ ಆದರೆ ಈ ರೀತಿ ಮಾಡ್ತಾರೆ ಅಂತ ಗೊತ್ತಿರಲಿಲ್ಲ ಎಂದು ಬೇಸರ ಹೊರಹಾಕಿದ್ದಾರೆ.

ಆಡಿಯೋದಲ್ಲಿ ಇರುವುದು ಸತ್ಯ. ಇದೆಲ್ಲ ಓಪನ್ ಸೀಕ್ರೆಟ್ ಈಗ ಸಾಕ್ಷಿ ಮುಂದೆ ಬಂದಿದೆ. ಈ ಕ್ಲಿಪ್ ನೋಡಿದ್ರೆ ಗೊತ್ತಾಗುತ್ತದೆ ನಮ್ಮವರು ಮಾತ್ರ ಅಲ್ಲ ಎಸ್‌ಡಿಪಿಐ, ಪಕ್ಷೇತರ ಹಾಗೂ ಬಿಜೆಪಿಯವರು ಷಡ್ಯಂತ್ರ ನಡೆಸಿದ್ದಾರೆ. ‌ಎಲ್ಲರೂ ಎಷ್ಟು ಒಗ್ಗಟ್ಟಿನಿಂದ ಷಡ್ಯಂತ್ರ ನಡೆಸಿದ್ದಾರೆ ಎಂದು ಇದರಿಂದ ಗೊತ್ತಾಗಲಿದೆ. ದುಗ್ಗಮ್ಮನ ಆಶೀರ್ವಾದದಿಂದ ಈಗ ಎಲ್ಲಾ ಹೊರಗೆ ಬಂದಿದೆ. ಎಲ್ಲಾ ದೇವರು ನೋಡಿಕೊಳ್ಳುತ್ತಾರೆ.


Spread the love

About Laxminews 24x7

Check Also

ಕನಿಷ್ಠ ವೇತನ ಹೆಚ್ಚುವರಿ ಆದೇಶ ವಾಪಸ್ಸು ಪಡೆಯಲು ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ

Spread the loveಬೆಳಗಾವಿ : ರಾಜ್ಯ ಸರ್ಕಾರದ ಕನಿಷ್ಠ ವೇತನ ಹೆಚ್ಚಳದ ತಿದ್ದುಪಡಿ ಆದೇಶವನ್ನು ವಿರೋಧಿಸಿ ನಗರದಲ್ಲಿ  ವಿವಿಧ ವ್ಯಾಪಾರ ಮತ್ತು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ