ಇಟಗಿ: ಯುವಕರಲ್ಲಿ ಇತಿಹಾಸ ಪ್ರಜ್ಞೆ ಮತ್ತು ಸಾಂಸ್ಕೃತಿಕ ಮೌಲ್ಯ ವೃದ್ಧಿಸುವಲ್ಲಿ ಕವಿಗೋಷ್ಠಿ ಮತ್ತು ಉಪನ್ಯಾಸ ಕಾರ್ಯಕ್ರಮ ಅವಶ್ಯ ಎಂದು ಧಾರವಾಡ ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಹೇಳಿದರು.
ಹಲಸಿ ಗ್ರಾಮದ ಐತಿಹಾಸಿಕ ಭೂವರಾಹ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾಡ ಹಾಗೂ ಕದಂಬ ಯುವ ಸೇನೆ, ಅಂಬೇಡ್ಕರ ಯುವಕ ಮಂಡಳ ಸಹಯೋಗದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಕವಿಗೋಷ್ಠಿ ಮತ್ತು ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕರ್ನಾಟಕ ವಿದ್ಯಾವರ್ಧಕ ಸಂಘ ಕಳೆದ 120 ವರ್ಷಗಳಿಂದ ಕನ್ನಡ ನಾಡು ನುಡಿ ಸಂಸ್ಕೃತಿ ಉಳಿವಿಗಾಗಿ ನಿರಂತರ ಶ್ರಮಿಸುತ್ತಿದೆ. ಇದರೊಟ್ಟಿಗೆ ಯುವಜನರು ಬೆರೆತು ಕೈಜೋಡಿಸಬೇಕು ಎಂದರು.
ಪ್ರೊ.ಡಾ.ಎಚ್.ಬಿ.ಕೋಲಕಾರ ಮಾತನಾಡಿ, ಸ್ಥಗಿತಗೊಂಡ ಹಲಸಿಯ ಕದಂಬೋತ್ಸವ ಮರು ಪ್ರಾರಂಭಿಸಲು ಸರ್ಕಾರ ಮುಂದಾಗಬೇಕು ಎಂದರು. ವಿಶ್ವನಾಥ ಚಿಕ್ಕಮಠ, ಶ್ರೀಧರ ಗಣಾಚಾರಿ, ಬಸವರಾಜ ಗೋಡಗೇರಿ ಸೇರಿದಂತೆ ವಿವಿಧ ಕವಿಗಳು ಕವನ ವಾಚನ ಮಾಡಿದರು. ಪ್ರದೀಪ ಪಾರಿಪತ್ತೇದಾರ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿಗಳಾದ ವಿಜಯ ಬಡಿಗೇರ, ಬಸವರಾಜ ಗಾರ್ಗಿ, ಬಿ.ಬಿ.ಕಾದ್ರೋಳ್ಳಿ, ಪ್ರಾಚಾರ್ಯರಾದ ಆರ್.ಬಿ.ಹುಣಶೀಕಟ್ಟಿ, ಕೆ.ಬಿ.ಕಾಪೋಲಿ, ಕರವೇ ತಾಲೂಕಾಧ್ಯಕ್ಷ ವಿಠ್ಠಲ ಹಿಂಡಲಕರ, ಮುರಗೇಶ ಶಿವಪೂಜಿ, ಜಗದೀಶ ಹೊಸಮನಿ, ಕೆ.ಎಸ್.ಬಾಳೆಕುಂದರಗಿ, ಪರಶುರಾಮ ಮಾದಾರ, ಅಭಿಲಾಷ ಬಾಳೆಕುಂದರಗಿ ಇತರರಿದ್ದರು.
Laxmi News 24×7