ಕಾಗವಾಡ: ಮಹಾರಾಷ್ಟ್ರದ ಮಿರಜನ ನಿರ್ಮಲ ಆಸ್ಪತ್ರೆ, ವ್ಯಸನಮುಕ್ತಿ ಮತ್ತು ಪುನರ್ವಸತಿ ಕೇಂದ್ರದ ವತಿಯಿಂದ ಮೇ ೩೦ರಂದು ವಿಶ್ವ ತಂಬಾಕುರಹಿತ ದಿನದ ಅಂಗವಾಗಿ ಶುಕ್ರವಾರ ತಂಬಾಕು ಸೇವನೆಯಿಂದಾಗುವ ದುಷ್ಪರಿಣಾಮಗಳ ಕುರಿತು ಮತ್ತು ತಂಬಾಕುಮುಕ್ತ ಸಮಾಜ ರಚಿಸಲು ಜಾಗೃತಿ ರ‍್ಯಾಲಿ ಜರುಗಿತು.
ಬೀದಿ ನಾಟಕ ಮತ್ತು ಪ್ರತಿಜ್ಞಾ ಬೋಧನೆಯೊಂದಿಗೆ ರ‍್ಯಾಲಿಗೆ ಚಾಲನೆ ನೀಡಲಾಯಿತು. ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಮತ್ತು ನಿರ್ಮಲ ಆಸ್ಪತ್ರೆ ಸಿಬ್ಬಂದಿ ಸೇರಿ ತಂಬಾಕು ಸೇವನೆಯಿಂದಾಗುವ ದೈಹಿಕ, ಮಾನಸಿಕ ಮತ್ತು ಸಾಮಾಜಿಕ ದುಷ್ಪರಿಣಾಮಗಳ ಕುರಿತು ಬೀದಿ ನಾಟಕ ಪ್ರದರ್ಶಿಸಿ, ಎಲ್ಲರೂ ತಂಬಾಕುಮುಕ್ತ ಜೀವನ ನಡೆಸುವ ಪ್ರತಿಜ್ಞೆ ಸ್ವೀಕರಿಸಿದರು.
ನಿರ್ಮಲ ಆಸ್ಪತ್ರೆಯಿಂದ ವಂಟಮೂರಿ ಕಾರ್ನರ್ ಮೂಲಕ ರ‍್ಯಾಲಿ ಸಾಗಿತು. ಭಾಗವಹಿಸಿದ ವಿದ್ಯಾರ್ಥಿಗಳು ಮತ್ತು ಆಸ್ಪತ್ರೆಯ ಸಿಬ್ಬಂದಿ ತಂಬಾಕು ವಿರೋಽ ಸಂದೇಶ ಸಾರುವ ಫಲಕಗಳೊಂದಿಗೆ ಘೋಷಣೆ ಕೂಗುತ್ತ ಜಾಗೃತಿ ಮೂಡಿಸಿದರು.
ವಿನಾಯಕ ಕವಡೆ, ಡಾ.ಶ್ರದ್ಧಾ ಗಾಯಕವಾಡ, ಡಾ.ಅನಿತಾ ಖರಾತ, ಡಾ.ಪ್ರಿಯಾಂಕಾ ಸಚದೇವ, ಲಕ್ಷ್ಮಿ ಭಂಡಾರೆ, ಸೇಜಲ ಬನಸೋಡೆ, ಸಚಿನ ಪಾಟೀಲ, ಇಮ್ರಾನ್ ಮುಲಾನಿ, ಅಮೀರ್ ಶರಿಕಮಸಲತ್, ಅಜೀಂ ತಾಂಬೋಳಿ, ರಾಹುಲ ಲೋಹಾರ, ಸ್ವರೂಪ ರಾಯನಾಡೆ, ಹರೀಶ ಲೋಹಾರ, ಸಚಿನ ಪೇಟಕರ ಇತರರಿದ್ದರು.
Laxmi News 24×7