ಬೆಂಗಳೂರು: ಪವರ್ ಶೇರಿಂಗ್ ಆ ರೀತಿಯದ್ದು ಏನೂ ಇಲ್ಲ. ಸಿದ್ದರಾಮಯ್ಯ ಅವರಿಗೆ ಅವರದ್ದೇ ಆದ ವರ್ಚಸ್ಸು ಇದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ತಿಳಿಸಿದ್ದಾರೆ. ಎಲ್ಲೂ ಕೂಡ ಸಿಎಂ ಸಿದ್ದರಾಮಯ್ಯ ರಾಜೀನಾಮೆ ಗುಟ್ಟನ್ನು ಸುರ್ಜೇವಾಲ ಬಿಟ್ಟುಕೊಟ್ಟಿಲ್ಲ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸುರ್ಜೇವಾಲ, ನಿನ್ನೆ ಸಭೆ ನಡೆಸಲಾಗಿತ್ತು. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ, ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ವೇಣುಗೋಪಾಲ್ ಭಾಗಿಯಾಗಿದ್ರು. ರಾಜ್ಯಸಭಾ ಮತ್ತು ವಿಧಾನ ಪರಿಷತ್ ಬಗ್ಗೆ ಸಭೆ ಮಾಡಿದ್ವಿ. ಪವರ್ ಶೇರಿಂಗ್ ಆ ರೀತಿಯದ್ದು ಏನು ಇಲ್ಲ. ರಾಜ್ಯ ಸಭೆಯದ್ದು ಮಾತ್ರ ಚರ್ಚೆ ಆಗಿದೆ. ಸಿಎಂ ಬದಲಾವಣೆ ಬಗ್ಗೆ ಮುಂದೆ ಹೇಳುತ್ತೇವೆ. ಸಿದ್ದರಾಮಯ್ಯ ಎರಡು ಬಾರಿ ಸಿಎಂ ಆಗಿದ್ದಾರೆ. ಅವರದ್ದೇ ಆದ ವರ್ಚಸ್ಸು ಇದೆ ಎಂದು ತಿಳಿಸಿದರು.
ಡಿಕೆಶಿ ಯೂತ್ ಲೀಡರ್ ಆಗಿ ಬೆಳೆದು ಬಂದವರು. ಸಾಕಷ್ಟು ಸಿಎಂಗಳ ಕೈ ಕೆಳಗೆ ಕೆಲಸ ಮಾಡಿದ್ದಾರೆ. ನಾವು ಯಾರ ಪರವಾಗಿ ಮಾಡಲ್ಲ, ಜನ ಹಿತಕ್ಕಾಗಿ ತೀರ್ಮಾನ ಮಾಡುತ್ತೇವೆ ಎಂದರು.
ನಾವು ನಮ್ಮ ಸಿಎಂ, ಡಿಸಿಎಂ, ಖರ್ಗೆ ಮತ್ತು ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದ್ದೇವೆ. ನಮ್ಮ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಇದ್ರು. ರಾಜ್ಯಸಭಾ ಮತ್ತು ಪರಿಷತ್ ಚುನಾವಣೆ ಕುರಿತು ಸಿಎಂ ಹಾಗೂ ಡಿಸಿಎಂ ಜತೆ ವಿಸ್ತೃತ ಚರ್ಚೆ ನಡೆಸಲಾಗಿದೆ. ವಿವಿಧ ಹೆಸರುಗಳನ್ನು ಸೂಚಿಸಲಾಗಿದೆ. ಇನ್ನೆರಡು ದಿನ ಇಬ್ಬರ ಜೊತೆ ಚರ್ಚೆ ಮುಂದುವರಿಯಬಹುದು. ಯಾರು ಹೆಚ್ಚು ಸೂಕ್ತ ಅಭ್ಯರ್ಥಿ ಎಂದು ಚರ್ಚಿಸಲಿದ್ದಾರೆ. ಇದರಿಂದ ಆ ಪಕ್ಷ ಮತ್ತು ರಾಜ್ಯಕ್ಕೆ ಉತ್ತಮ ಪ್ರಾತಿನಿಧ್ಯ ಸಿಗಬಹುದು. ಅನೇಕರು ಅನೇಕ ರೀತಿಯ ಕಥೆಗಳನ್ನು ಓಡಿಸುತ್ತಿದ್ದಾರೆ. ಸದ್ಯ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಕರೆದಿಲ್ಲ. ಎಲ್ಲವೂ ಸ್ಪೆಕ್ಯೂಲೆಟ್ ಸುದ್ದಿಗಳು ಎಂದು ಸ್ಪಷ್ಟಪಡಿಸಿದರು.
ಸಿದ್ದರಾಮಯ್ಯ ಬಹಳ ಪ್ರಮುಖ ನಾಯಕರು. ಡಿಕೆಶಿ ಸಂಘಟನೆಯಿಂದ ಬಂದವರು. ನಾವು ತೆಗೆದುಕೊಳ್ಳುವ ತೀರ್ಮಾನ ತಿಳಿಸುತ್ತೇವೆ. ಏನೇ ಆದರೂ, ಕರ್ನಾಟಕ ಜನತೆಗೆ ಹೇಳುತ್ತೇವೆ. ಕರ್ನಾಟಕ ಜನತೆಗಾಗಿ ನಿರ್ಧಾರ ತೆಗೆದುಕೊಳ್ಳುತ್ತೇವೆ. ನಾವು ವೈಯಕ್ತಿಕ ವ್ಯಕ್ತಿಗಳ ಬಗ್ಗೆ ತೀರ್ಮಾನ ಮಾಡಲ್ಲ ಎಂದು ತಿಳಿಸಿದರು.
ಬಿಜೆಪಿ ಗ್ಯಾರಂಟಿ ಯೋಜನೆಗಳನ್ನ ವಿರೋಧಿಸುತ್ತಿದೆ. ಶಕ್ತಿ ಯೋಜನೆ, ಗೃಹಜ್ಯೋತಿ, ಗೃಹಲಕ್ಷ್ಮಿ, ಅನ್ನಭಾಗ್ಯ ಯೋಜನೆಗಳನ್ನು ವಿರೋಧಿಸುತ್ತಿದೆ. ಪೆಟ್ರೋಲ್, ಡೀಸೆಲ್, ಗ್ಯಾಸ್ ಸಿಎನ್‌ಜಿ ಬೆಲೆ ಏರಿಕೆ ಮಾಡಿ ಜನರಿಗೆ ಅನ್ಯಾಯ ಮಾಡ್ತಾ ಇದ್ದೀರಾ. ಕೇಂದ್ರ ಸರ್ಕಾರ ಯಾಕೆ ತೆರಿಗೆ ಏರಿಕೆ ಮಾಡಿದೆ ಎಂದು ಪ್ರಶ್ನಿಸಿದರು.
Laxmi News 24×7