Breaking News

ಆ್ಯಸಿಡ್ ದಾಳಿ ಆಗದೆ ಹೋಗಿದ್ರೆ ಅಮ್ಮನಿಗೆ ಇಷ್ಟು ಬೇಗ ಸಾವು ಬರ್ತಿರಲಿಲ್ಲ – ತಾಯಿ ನೆನೆದು ಬಿಕ್ಕಳಿಸಿ ಅತ್ತ ರೇವಣ್ಣ

Spread the love

ಹಾಸನ: 2001ರಲ್ಲಿ ಆ್ಯಸಿಡ್ ದಾಳಿ ಆಗದೆ ಹೋಗಿದ್ದರೆ ಅಮ್ಮನಿಗೆ ಇಷ್ಟು ಬೇಗ ಸಾವು ಬರ್ತಿರಲಿಲ್ಲ ಎಂದು ಅಂದಿನ ಘಟನೆ ನೆನೆದು ಮಾಜಿ ಸಚಿವ ಹೆಚ್.ಡಿ ರೇವಣ್ಣ ಕಣ್ಣೀರು ಹಾಕಿದ್ದಾರೆ.

ತಾಯಿ ಅಗಲಿದ ಬಳಿಕ ಮೊದಲ ಬಾರಿಗೆ ಸುದ್ದಿಗೋಷ್ಠಿ ನಡೆಸಿ ಅಮ್ಮನನ್ನು ನೆನೆದು ಬಿಕ್ಕಳಿಸಿ ಅತ್ತಿದ್ದಾರೆ. 2001ರಲ್ಲಿ ಆ್ಯಸಿಡ್ ದಾಳಿ ಆಗದೆ ಹೋಗಿದ್ದರೆ ಅಮ್ಮನಿಗೆ ಇಷ್ಟು ಬೇಗ ಸಾವು ಬರ್ತಿರಲಿಲ್ಲ. ರೇವಣ್ಣನನ್ನ ಮುಗಿಸಲೇಬೇಕು ಎಂದು ಸಂಚು ರೂಪಿಸಿದ್ದರು. ಅಂದು ನಾನು ಇದ್ದಿದ್ದರೆ ನನ್ನ ಮೇಲೆ ದಾಳಿ ಆಗಿರುತ್ತಿತ್ತು. ನಾನು ಇಲ್ಲದ ಕಾರಣ ನಮ್ಮ ತಾಯಿ ನೋವು ತಿಂದರು. ನಮ್ಮ ತಾಯಿ ದೇವತೆಯಾಗಿ ನಮ್ಮ ಕುಟುಂಬವನ್ನು ಸಾಕಿದ್ದಾರೆ. ನಮ್ಮ ಅಮ್ಮನನ್ನ ನಮ್ಮ ತಂಗಿಯರು ನೋಡಿಕೊಂಡರು. ನಾವು ಹೋಗಿ ನೋಡಿಕೊಂಡು ಬರ್ತಿದ್ವಿ ಎಂದು ಭಾವುಕರಾಗಿದ್ದಾರೆ.

ನಮ್ಮ ತಂದೆಯವರು ಬಂದು ಕುಂಕುಮ ಇಟ್ಟು ಹೂ ಮುಡಿಸಿದ ಕೂಡಲೆ ತಾಯಿ ಉಸಿರು ನಿಂತೊಯ್ತು ಇಂತಹ ಸಾವು ಯಾರಿಗೂ ಸಿಗಲ್ಲ. ನಮ್ಮ ತಂದೆ-ತಾಯಿ 72 ವರ್ಷ ಸುದೀರ್ಘ ಜೀವನ ನಡೆಸಿದ್ರು. ನಮ್ಮ ತಂದೆಯ ಏಳಿಗೆಯಲ್ಲಿ ನಮ್ಮ ತಾಯಿ ಕೊಡುಗೆ ಇದೆ. ನಾನು ಕುಮಾರಸ್ವಾಮಿ ಈ ಮಟ್ಟಕ್ಕೆ ಬರಲು ಕೂಡ ನಮ್ಮ ತಾಯಿ ಕಾರಣ. ಅವರು ಎಂದು ಮನೆಯಿಂದ ಹೊರಗೆ ಬರಲಿಲ್ಲ. ಮನೆಯಲ್ಲಿ ಇದ್ದೆ ಏನು ಮಾಡಬೇಕೋ ಮಾಡಿದ್ರು. 1962ರಲ್ಲಿ ನಮ್ಮ ತಂದೆ 10 ರೂ. ಬಾಡಿಗೆ ಮನೆಯಲ್ಲಿ ಇದ್ದರು. ನಮ್ಮ ತಂದೆ ಶಾಸಕರಾದ ಬಳಿಕ ಕೊನೆ ತಂಗಿ ಹುಟ್ಟಿದ್ದು. ಹಾಗಾಗಿ ಆ ಬಾಡಿಗೆ ಮನೆ ಬಳಿ ಹೋಗಲೇಬೇಕು ಎಂದು ತಂದೆ ಚೆನ್ನಮ್ಮ ಅವರ ಪಾರ್ಥಿವ ಶರೀರ ಆ ಮನೆ ಸಮೀಪ ಕೊಂಡೊಯ್ದರು ಎಂದು ಬಿಕ್ಕಳಿಸಿ ಅತ್ತಿದ್ದಾರೆ.

ಅಂತಿಮ ದರ್ಶನ ವ್ಯವಸ್ಥೆ, ಮೆರವಣಿಗೆ, ಅಂತ್ಯಕ್ರಿಯೆ ವೇಳೆ ಹಾಸನ ಡಿಸಿ, ಎಸ್ಪಿ ಸಾಕಷ್ಟು ಶ್ರಮ ಪಟ್ಟಿದ್ದಾರೆ. ರಾಜಕೀಯ ಬೇರೆ, ರಾಜಕೀಯ ಬರುತ್ತೆ ಹೋಗುತ್ತೆ. ಅಂದು ಸಿಎಂ ಡಿಕೆಶಿ ಸರ್ಕಾರಿ ಗೌರವ ನೀಡಿದ್ದಾರೆ ಎಂದು ಕೃತಜ್ಞತೆ ಹೇಳಿದ್ರು. ಇನ್ನು ಜನರ ಪ್ರೀತಿಗೂ ಧನ್ಯವಾದ ತಿಳಿಸಿದ್ದಾರೆ. ಪ್ರಭು ಸಿಂಗ್ ಚೌಹಾಣ್, ಮನೋಹರ್ ಲಾಲ್ ಕಟ್ಟರ್, ಜಮೀರ್ ಅಹಮದ್, ಎಲ್ಲಾ ಶಾಸಕರು, ಸಚಿವರು, ಮಾಜಿ ಶಾಸಕರು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು. ಎಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಜಿಲ್ಲೆಯ ಜನರನ್ನು ನಾನು ಯಾವತ್ತು ಮರೆಯುವುದಿಲ್ಲ. ಜು.30ರಂದು ಆರಾಧನಾ ಮಹೋತ್ಸವ ನಡೆಯಲಿದೆ. ಇದರಲ್ಲಿ ಪಕ್ಷ ಇಲ್ಲ ಎಲ್ಲರೂ ಬರಬೇಕು. ಎಲ್ಲರಿಗೂ ಭಗವಂತ ಒಳ್ಳೆಯದು ಮಾಡಲಿ. ನಮ್ಮ ತಾಯಿ ಆತ್ಮಕ್ಕೆ ಶಾಂತಿ ದೊರಕಲಿ ಎಂದಿದ್ದಾರೆ.


Spread the love

About Laxminews 24x7

Check Also

ವಂದೇ ಮಾತರಂನ ಮೊದಲ 2 ಚರಣ ಮಾತ್ರ ಹಾಡಬೇಕು – ಸರ್ಕಾರದ ಆದೇಶ ಪ್ರಶ್ನಿಸಿ ಹೈಕೋರ್ಟ್‌ಗೆ PIL

Spread the loveಬೆಂಗಳೂರು: ವಂದೇ ಮಾತರಂ  ಹಾಡಿನ ವಿವಾದ ರಾಜ್ಯ ಹೈಕೋರ್ಟ್  ಮೆಟ್ಟಿಲೇರಿದೆ. ಮೊದಲ 2 ಚರಣ ಮಾತ್ರ ಹಾಡಬೇಕು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ