Breaking News

ನಾಲ್ಕು ತಿಂಗಳಿನಿಂದ ಬಾಕಿ ಉಳಿದಿದ್ದ ನರೇಗಾ ಬಾಕಿ ಕೂಲಿ ಬಿಡುಗಡೆ

Spread the love

ಬೆಳಗಾವಿ :ಕೇಂದ್ರ ಮತ್ತು ರಾಜ್ಯ ಸರ್ಕಾರದ ನಡುವಿನ ಆಡಳಿತಾತ್ಮಕ ಹಾಗೂ ಆರ್ಥಿಕ ಸಂಘರ್ಷ, ವಿಬಿಜಿ ರಾಮ್‌ಜಿ ಯೋಜನೆ ಅನುಷ್ಠಾನ ಆಗದಿರುವುದು ಹೀಗೆ ವಿವಿಧ ಕಾರಣಗಳಿಂದ ನಾಲ್ಕು ತಿಂಗಳಿನಿಂದ ಬಾಕಿ ಉಳಿದಿದ್ದ ನರೇಗಾ ಬಾಕಿ ಕೂಲಿ ಗುರುವಾರ ಬಿಡುಗಡೆಯಾಗಿದೆ.
ಜಿಲ್ಲೆಯಲ್ಲಿ 2025-26ನೇ ಸಾಲಿನಲ್ಲಿ ಬಾಕಿ ಇದ್ದ ಕೂಲಿ ಮೊತ್ತ 27.39 ಕೋಟಿ ರೂ.  ಮೇ 14ರಂದು ಪೈಕಿ 17.98 ಕೋಟಿ ರೂ. ಸಂಬಂಧಪಟ್ಟ ಕೂಲಿಕಾರರ ಖಾತೆಗೆ ಜಮೆಯಾಗಿದೆ. 9.41 ಕೋಟಿ ಬಾಕಿ ಉಳಿದಿದೆ. ಹಾಗೆ  2026-27ನೇ ಸಾಲಿನಲ್ಲಿ ಬಾಕಿ ಇದ್ದ ಕೂಲಿ 8.39 ಕೋಟಿ ರೂ. ಪೈಕಿ 4.94 ಕೋಟಿ ಕೂಲಿ ಮೊತ್ತ ಮೇ 14ರಂದು ಜಮೆಯಾಗಿದ್ದು,3.45 ಕೋಟಿ ಬಾಕಿ ಉಳಿದಿದೆ.
ಒಟ್ಟಿನಲ್ಲಿ ಎರಡು ವರ್ಷದ ಅವಧಿಯಲ್ಲಿ ಕೂಲಿ 12.86 ಕೋಟಿ ಇನ್ನೂ ಬಾಕಿ ಇದ್ದು, ಶೀಘ್ರದಲ್ಲೇ ಬಿಡುಗಡೆಯಾಗುವ ನಿರೀಕ್ಷೆ ಇದೆ. ಕೂಲಿ ಹಣ ಪಾವತಿಯಾಗಿರುವ ಬಗ್ಗೆ ಕೂಲಿಕಾರರು ತಮ್ಮ ಬ್ಯಾಂಕ ಖಾತೆಗಳನ್ನು ಪರಿಶೀಲಿಸಿಕೊಳ್ಳಬೇಕು. 2026-27ನೇ ಸಾಲಿನಲ್ಲಿಯೂ ಕೂಡ ಕೂಲಿಕಾರರು ಆಸಕ್ತಿಯಿಂದ ಮನರೇಗಾ ಯೋಜನೆಯಡಿ ಕೆಲಸ ನಿರ್ವಹಿಸಿ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು  ಜಿಪಂ  ಯೋಜನಾ ನಿರ್ದೇಶಕ ರವಿ ಬಂಗಾರೆಪ್ಪನವರ ತಿಳಿಸಿದ್ದಾರೆ.
ಗ್ರಾಮೀಣ ಬಡವರ, ಕಾರ್ಮಿಕರ, ರೈತರ ಜೀವನಾಡಿಯಾಗಿದ್ದ ಮಹಾತ್ಮ ಗಾಂಧೀ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ನರೇಗಾ)  ಸ್ಥಗಿತಗೊಂಡಿತ್ತು. ಇದೀಗ ಕೂಲಿ ಬಾಕಿ ಬಿಡುಗಡೆಗೊಂಡಿದ್ದರಿಂದ ಕಾರ್ಮಿಕರು ಸಂತಷ ವ್ಯಕ್ತಪಡಿಸಿದ್ದಾರೆ.

Spread the love

About Laxminews 24x7

Check Also

ತಿರಂಗ ಯಾತ್ರೆಯಲ್ಲಿ ಗಮನ ಸೆಳೆದ ಈಸೂರು ದಂಗೆಯ ಸ್ತಬ್ಧಚಿತ್ರ

Spread the loveಶಿವಮೊಗ್ಗ: ನಗರದ  ಶೀನಪ್ಪಶೆಟ್ಟಿ ವೃತ್ತದಲ್ಲಿ ಸ್ವಾತಂತ್ರ್ಯೋತ್ಸವ  ಅಂಗವಾಗಿ ಬಿಜೆಪಿ ವತಿಯಿಂದ ರಾಮಣ್ಣಶ್ರೇಷ್ಟಿ ಪಾರ್ಕ್‌ನಿಂದ ಗೋಪಿ ವೃತ್ತದವರೆಗೆ ತಿರಂಗ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ