Breaking News

ಮರು ಮೌಲ್ಯಮಾಪನ ಮಾಡಿದ್ರೆ ಮುಖಕ್ಕೆ ಆ್ಯಸಿಡ್‌ ಹಾಕ್ತೀವಿ – ಗುಲಬರ್ಗಾ ವಿವಿ ಕುಲಪತಿಗೆ ಬೆದರಿಕೆ

Spread the love

ಕಲಬುರಗಿ: ಗುಲಬರ್ಗಾ ವಿವಿ  ಕುಲಪತಿಗೆ ದುಷ್ಕರ್ಮಿಗಳು ಆ್ಯಸಿಡ್‌ ಹಾಕುವ ಬೆದರಿಕೆ ಪತ್ರ ಕಳಿಸಿದ್ದಾರೆ. ಶಶಿಕಾಂತ್‍ ಎಸ್.ಉಡಿಕೇರಿ ಅವರಿಗೆ ಅನಾಮಧೇಯ ವ್ಯಕ್ತಿಗಳು ಬೆದರಿಕೆ ಪತ್ರ ಬರೆದಿದ್ದಾರೆ.

ಪತ್ರದಲ್ಲಿ, ಬಿಇಡಿ  ಪರೀಕ್ಷೆಯ ಮರು ಮೌಲ್ಯಮಾಪನದ ನಿರ್ಧಾರ  ನಮಗೆ ಇಷ್ಟವಾಗಿಲ್ಲ. ಎರಡು ಲಕ್ಷ ರೂ. ನೀಡಿ ಬಿಇಡ್ ಪ್ರವೇಶ ಪಡೆದು, ಎರಡು ವರ್ಷದಿಂದ ಫಲಿತಾಂಶಕ್ಕಾಗಿ ಕಾದಿದ್ದೇವೆ. ಮರು ಮೌಲ್ಯಮಾಪನದಿಂದ ಫಲಿತಾಂಶದಲ್ಲಿ ಅಂಕಗಳು ಕಡಿಮೆಯಾದ್ರೆ ಅಥವಾ ಮರು ಮೌಲ್ಯಮಾಪನದಲ್ಲಿ ಅನುತ್ತೀರ್ಣರಾದರೆ ನಿಮ್ಮ ಮುಖಕ್ಕೆ ಆ್ಯಸಿಡ್ ಹಾಕಿ ನರಳಿ ನರಳಿ ಬದುಕುವಂತೆ ಮಾಡುತ್ತೇವೆ ಎಂದು ಬರೆಯಲಾಗಿದೆ. ಅನಾಮಧೇಯ ಪತ್ರದ ವಿಚಾರವಾಗಿ ಕುಲಪತಿ ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾಯಾಲಯದ ನಿರ್ದೇಶನದಂತೆ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

2024 ರಲ್ಲಿ ನಡೆದ ಬಿಇಡ್ ಮೌಲ್ಯಮಾಪನದಲ್ಲಿ ಅಕ್ರಮದ ಬಗ್ಗೆ ಗುರುತಿಸಿ ಸರ್ಕಾರ ಮತ್ತು ರಾಜ್ಯಪಾಲರ ಗಮನಕ್ಕೆ ವಿಸಿ ತಂದಿದ್ದರು. ಮೌಲ್ಯಮಾಪನದಲ್ಲಿ ಅಕ್ರಮವಾಗಿ ಅಂಕ ತಿದ್ದುಪಡಿ ಮಾಡಿರೋದು ವಿವಿ ಆಂತರಿಕ ಸಮಿತಿ ತನಿಖೆಯಲ್ಲಿ ತಿಳಿದು ಬಂದಿತ್ತು. ಬಳಿಕ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖಾ ಸಮಿತಿ ರಚನೆಯಾಗಿತ್ತು. ಸಮಿತಿಯ ಆದೇಶದಂತೆ ಮರುಮೌಲ್ಯಮಾಪನ ಪ್ರಕ್ರಿಯೆ ನಡೆದಿದೆ.


Spread the love

About Laxminews 24x7

Check Also

ಎಲ್‌ಆರ್‌ಐ ಯಾತ್ರೆ, ಖೇತ್ ಬಚಾವೋ ಅಭಿಯಾನಕ್ಕೆ ಸಚಿವ ಸತೀಶ್‌ ಜಾರಕಿಹೊಳಿ ಚಾಲನೆ

Spread the loveಗೋಕಾಕ: ಕೃಷಿ ಕ್ಷೇತ್ರದ ಸುಸ್ಥಿರ ಅಭಿವೃದ್ಧಿಗೆ ಜಲ ಸಂರಕ್ಷಣೆ ಮತ್ತು ಮಣ್ಣಿನ ಆರೋಗ್ಯ ಕಾಪಾಡುವುದು ಅತ್ಯಂತ ಅಗತ್ಯವಾಗಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ