Breaking News

2023ರಲ್ಲಿ ʻಕೈʼಗೆ ಸಹಾಯ ಆರೋಪ – ಶೃಂಗೇರಿ ಬಿಜೆಪಿ ಏಜೆಂಟ್‌ಗಳಿಂದ ಧರ್ಮಸ್ಥಳದಲ್ಲಿ ಆಣೆ ಪ್ರಮಾಣ

Spread the love

ಚಿಕ್ಕಮಗಳೂರು: ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆ ಆಣೆ ಪ್ರಮಾಣ ಧರ್ಮಸ್ಥಳದ  ಮಂಜುನಾಥ ಸ್ವಾಮಿ ದೇಗುಲಕ್ಕೂ ಕಾಲಿಟ್ಟಿದೆ.

ಅಂಚೆ ಮತದಾನ ಮರು ಎಣಿಕೆ ಫಲಿತಾಂಶ ಹೊರಬಂದ ಬಳಿಕ ಬಹಳ ಬಿಜೆಪಿ  ಕಾರ್ಯಕರ್ತರು, ನಮ್ಮ ಅಂದೇ ಗೆಲುವು ಸಾಧಿಸಿತ್ತು. ಆದರೆ, ಬಿಜೆಪಿ ಏಜೆಂಟ್‌ಗಳಾಗಿದ್ದ ರಾಮಸ್ವಾಮಿ ಶೆಟ್ಟಿಗದ್ದೆ ಹಾಗೂ ಸತೀಶ್ ಅದ್ದಡ ಕಾಂಗ್ರೆಸ್ ಗೆಲುವಿಗೆ ಶ್ರಮಿಸಿ ಬಿಜೆಪಿಗೆ ಮೋಸ ಮಾಡಿದ್ದರು ಎಂದು ಆರೋಪಿಸಿದ್ದಾರೆ. ಅಲ್ಲದೇ ಶೃಂಗೇರಿ ವಿಧಾನಸಭಾ ಕ್ಷೇತ್ರದಾದ್ಯಂತ ಅಪಪ್ರಚಾರ ಮಾಡುತ್ತಿದ್ದಾರೆ.

ಇದರಿಂದ ಬೇಸತ್ತ ಏಜೆಂಟ್‌ಗಳು ಕೊಪ್ಪ  ತಾಲೂಕಿನ ವೀರಭದ್ರ ಸ್ವಾಮಿ ದೇಗುಲ ಹಾಗೂ ಗಬ್ಬಾನೆ ಭೂತರಾಯನ ದೇಗುಲದಲ್ಲಿ 2023ರ ಮತ ಎಣಿಕೆ ಪಾರದರ್ಶಕವಾಗಿತ್ತು ಹಾಗೂ ಯಾವುದೇ ಲೋಪವಾಗಿರದ ಸಾಧ್ಯತೆ ಇದೆ ಎಂದು ಪ್ರಮಾಣ ಮಾಡಿದ್ದರು. ಇಂದು ಪಕ್ಷ ನಿಷ್ಠೆ ಸಾಬೀತುಪಡಿಸಿಕೊಳ್ಳಲು ಒಂದು ಹೆಜ್ಜೆ ಮುಂದೆ ಹೋಗಿರೋ ರಾಮಸ್ವಾಮಿ ಹಾಗೂ ಸತೀಶ್ ಧರ್ಮಸ್ಥಳದ ಮಂಜುನಾಥ ಸ್ವಾಮಿ ದೇಗುಲಕ್ಕೂ ಭೇಟಿ ನೀಡಿ ಆಣೆ ಪ್ರಮಾಣ ಮಾಡಿದ್ದಾರೆ.

2023ರಲ್ಲಿ ಮಾನ್ಯವಾದ ಮತ 2026ರಲ್ಲಿ ಹೇಗೆ ಅಮಾನ್ಯವಾದವೆಂದು ಮಾಜಿ ಶಾಸಕ ರಾಜೇಗೌಡ ಕೂಡ ಕ್ಷೇತ್ರದ ದೇವಾಲಯ, ಚರ್ಚ್-ಮಸೀದಿಯಲ್ಲಿ ಪ್ರಾರ್ಧನೆ ಮಾಡಿದ್ದಾರೆ. ಅಲ್ಲದೇ ಸುಪ್ರೀಂಕೋರ್ಟ್ ಮೊರೆ ಕೂಡ ಹೋಗಿದ್ದಾರೆ. ಈ ಮಧ್ಯೆ ಬಿಜೆಪಿ ಏಜೆಂಟ್‌ಗಳ ಈ ಆಣೆ-ಪ್ರಮಾಣ ಕ್ಷೇತ್ರದಾದ್ಯಂತ ತೀವ್ರ ಸಂಚಲನ ಸೃಷ್ಟಿಸಿದೆ.

2023ರಲ್ಲಿ ಟಿ.ಡಿ. ರಾಜೇಗೌಡ  ಅಂಚೆ ಮತಗಳಿಂದ 201 ಮತಗಳ ಅಂತರದಿಂದ ಗೆದ್ದಿದ್ದು, 2026ರ ಮರು ಎಣಿಕೆಯಲ್ಲಿ ಅದೇ ಅಂಚೆ ಮತಗಳಿಂದ 52 ಮತಗಳ ಅಂತರದಿಂದ ಸೋಲು ಕಂಡಿದ್ದರು. ಇದು ಕಾಂಗ್ರೆಸ್  ವಲಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿತ್ತು. 2023ರಲ್ಲಿ ಮಾನ್ಯವಾಗಿದ್ದ 255 ಮತಗಳು 2026ರಲ್ಲಿ ಹೇಗೆ ಅಮಾನ್ಯವಾದವು? ಇದು ಮತಚೋರಿ ಎಂದು ಕಾಂಗ್ರೆಸ್‌ ಆರೋಪಿಸಿತ್ತು.


Spread the love

About Laxminews 24x7

Check Also

ಪಾಲಿಕೆಯಲ್ಲಿ ಕರ್ನಾಟಕ ಪರ ಗೋತ್ತುವಳಿ ಮಂಡನೆಗೆ ಆಗ್ರಹಿಸಿ 101 ಈಡುಗಾಯಿ ಒಡೆದು ಪ್ರತಿಭಟನೆ

Spread the loveಬೆಳಗಾವಿ: ಬೆಳಗಾವಿ ಪಾಲಿಕೆಯಲ್ಲಿ ಕರ್ನಾಟಕ ಪರವಾದ ಗೊತ್ತುವಳಿ ಅಂಗೀಕರಿಸಲು ಆಗ್ರಹಿಸಿ ಕಳೆದ ನೂರು ದಿನಗಳಿಂದ ನಡೆದ ಕನ್ನಡ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ