Breaking News

ಮಹಿಳೆಯರೇ ಇಲ್ಲದೇ ಮಹಿಳಾ ಗ್ರಾಮ ಸಭೆ !

Spread the love

ಚಿಕ್ಕೋಡಿ:ಹುಕ್ಕೇರಿ ತಾಲೂಕಿನ ದಡ್ಡಿ ಗ್ರಾಪಂ ಕಾರ್ಯಾಲಯದಲ್ಲಿ ಈಚೆಗೆ ನಡೆದಿದ್ದ ಮಹಿಳಾ ಗ್ರಾಮ ಸಭೆಯು ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರ ಹೊರತುಪಡಿಸಿ, ಗ್ರಾಮದ ಮಹಿಳೆಯರ ಭಾಗವಹಿಸುವಿಕೆ ಇಲ್ಲದೆ ಕೇವಲ ದಾಖಲೆಗಳಿಗೆ ಸೀಮಿತವಾಗಿದ್ದು, ಇದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ಮಹಿಳೆಯರ ಕುಂದು ಕೊರತೆ ನಿಗಿಸಲೆಂದು, ಮಹಿಳೆಯರಿಗಾಗಿರುವ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಸರ್ಕಾರ ಗ್ರಾಪಂ ಮಹಿಳೆಯರಿಗಾಗಿಯೇ ಪ್ರತ್ಯೇಕ ಮಹಿಳಾ ಗ್ರಾಮ ಸಭೆ ಆಯೋಜನೆ ಮಾಡಿದೆ. ಆದರೆ ಗ್ರಾಮ ಸಭೆ ನಡೆಯುತ್ತಿರುವ ಗ್ರಾಮಸ್ಥರಿಗೆ ಮಾಹಿತಿ ನೀಡದೆ, ಸಭೆ ನಡೆಸುತ್ತಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಈ ಕುರಿತು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ನೋಡಲï ಅಧಿಕಾರಿ ಮಂಜುನಾಥ ಹೊಸಮನಿ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಮಹಿಳೆಯರೇ ಅಲ್ವಾ? ಅವರು ಇದ್ದರಲ್ಲ, ಸಾಕು ಎಂದು ಉದ್ಧಟತನ ಮೆರೆದಿದ್ದಾರೆ.
ಒಬ್ಬ ಜವಾಬ್ದಾರಿಯುತ ಆಡಳಿತಾಧಿಕಾರಿಯಾಗಿ ಮಂಜುನಾಥ ಹೊಸಮನಿ ನಡೆದುಕೊಳ್ಳುತ್ತಿಲ್ಲ.ಮಹಿಳೆಯರ ಸಭೆಗೆ ನೀವೆ ಸೇರಿಸಿದ ನಿರ್ಲಕ್ಷ್ಯ ಮತ್ತು ಅಧಿಕಾರ ದರ್ಪದಿಂದ ಮಾತನಾಡಿದ್ದು, ಜಿಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಗ್ರಾಪಂ ಆಡಳಿತ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಸಾರ್ವಜನಿಕರು ಕಾಣಿಸಿಕೊಂಡಿದ್ದಾರೆ.
ಸಭೆಯಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಾರುತಿ ಕಾಂಬಳೆ, ಆಡಳಿತಾಧಿಕಾರಿ ಮಂಜುನಾಥ ಹೊಸಮನಿ ಇದ್ದರು. 


Spread the love

About Laxminews 24x7

Check Also

ಲಿಂಗಾಯತ ಸಂಘಟನೆ ವತಿಯಿಂದ ವಚನ ಸಂಗೀತ ಕಾರ್ಯಕ್ರಮ

Spread the love ಲಿಂಗಾಯತ ಸಂಘಟನೆ ವತಿಯಿಂದ ವಚನ ಸಂಗೀತ ಕಾರ್ಯಕ್ರಮ – ಭಾವನೆಗಳಿಗೆ ಜೀವ ತುಂಬುವ ಶಕ್ತಿ ಸಂಗೀತಕ್ಕಿದೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ