Breaking News

ಗೋಕಾಕ ನಗರದ ಹೈಸ್ಕೂಲ ರಸ್ತೆಯಲ್ಲಿ (ಕಿಲ್ಲಾ ಹತ್ತಿರ) ನಿರ್ಮಾಣ ಮಾಡಿದ ಹೊಸ ಬ್ರಿಜ್ ಮೇಲೆ ನಡೆಯುತ್ತಿರುವ ಅನೈತಿಕ ಚಟುವಟಿಕೆಗಳಿಗೆ ಕಡಿವಾಣ ಹಾಕುವಂತೆ ಸ್ಥಳಿಯರಿಂದ ಮನವಿ

Spread the love

ಗೋಕಾಕ ನಗರದ ಹೈಸ್ಕೂಲ ರಸ್ತೆಯಲ್ಲಿ (ಕಿಲ್ಲಾ ಹತ್ತಿರ) ನಿರ್ಮಾಣ ಮಾಡಿದ ಹೊಸ ಬ್ರಿಜ್ ಮೇಲೆ ತಿಂಗಳಾಪೂರ ಬೆಣ್ಣೆ, ಬಂಗಲೇ, ಶಿಂಗಳಾಪೂರ ಹಾಗೂ ಲೋಳಸೂರ ಗ್ರಾಮಕ್ಕೆ ನಿತ್ಯ ಸಾರ್ವಜನಿಕರು ಓಡಾಡುತ್ತಿರುತ್ತಾರೆ. ಅಲ್ಲದೇ ಗೋಕಾಕ ನಗರದ ಸಾರ್ವಜನಿಕರು ವಾಯುವಿಹಾರಕ್ಕೆ ಅಂತಾ ಮುಂಜಾನೆ ಮತ್ತು ಸಾಯಂಕಾಲ, ರಾತ್ರಿ ಸದರಿ ಬ್ರಿಜ್ ಮೇಲೆ ಹೋಗಿ ಬರುವುದು ಮಾಡುತ್ತಾ ಇರುತ್ತಾರೆ. ಸದರಿ ಬ್ರಿಜ್ ನಮಗೆಲ್ಲ ಅತ್ಯಂತ ಉಪಯೋಗಯುಕ್ತವಾಗಿದ್ದು ಇರುತ್ತದೆ.
ವಸ್ತುಸ್ಥಿತಿ ಹೀಗಿರಲಿಕ್ಕಾಗಿ. ಕೆಲವೊಂದು ಕಿಡಿಗೇಡಿಗಳು, ಸದರಿ ಟ್ರಿಜ್ ಮೇಲೆ ರಾತ್ರಿ 8.00 ರಿಂದ 10.00 ಗಂಟೆ ಸಮಯದಲ್ಲಿ, ಸದರಿ ಬ್ರಿಜ್ ಮೇಲೆ, ಅಲ್ಲಲ್ಲಿ ಕುಳಿತುಕೊಂಡು ಮತ್ತು ಮೋಟಾರ ಸೈಕಲ, ಕಾರ ಮತ್ತು ಅಟೋ ರಿಕ್ಷಾಗಳನ್ನು ಎಲ್ಲೆಂದರಲ್ಲಿ ರೋಡಗೆ ಅಡ್ಡಾತಿಡ್ಡಿ ನಿಲ್ಲಿಸಿ, ಶರಾಯಿ ಕುಡಿಯುವುದು ಮತ್ತು ಜೋರಾಗಿ ಬಾಯಿ ಮಾಡುತ್ತಾ, ಮೊಬೈಲದಲ್ಲಿ ಹಾಡು ಹಚ್ಚಿಕೊಂಡು ಹೋಗಿ ಬರುವ ಜನರಿಗೆ ತೊಂದರೆ ಕೊಡುವುದು ಮತ್ತು ಶರಾಯಿ ಬಾಟಲಿಗಳನ್ನು ಎಲ್ಲೆಂದರಲ್ಲಿ ಒಡೆದು ಹಾಕುವುದು ಮಾಡುತ್ತಿರುತ್ತಾರೆ. ಇದರಿಂದ ನಾವು ರಾತ್ರಿ ಹೊತ್ತು ಸದರಿ ಬ್ರಿಜ್ ಮೇಲೆ ಹೋಗುವುದು ದುಸ್ತರವಾಗಿದೆ. ಅಲ್ಲದೇ ಕಿಡಿಗೇಡಿಗಳು ಎಲ್ಲೆಂದರಲ್ಲಿ ಶರಾಯಿ ಬಾಟಲಿಗಳನ್ನು ಒಡೆದು ಹಾಕುವುದು ಮತ್ತು ಕಸವನ್ನು ಚೆಲ್ಲುವುದರಿಂದ ಪರಿಸರ ಸಹ ಹಾಳಾಗಿದ್ದು, ಅಲ್ಲಿ ವಾಯುವಿಹಾರ ಮಾಡುವುದು ಸಹ ಕಷ್ಟಕರವಾಗಿರುತ್ತದೆ. ಸದರಿ ಬ್ರಜ್ ಮೇಲೆ ಯಾವುದೇ ರೀತಿಯ ಅನೈತಿಕ ಚಟುವಟಿಕೆಗಳು ನಡೆಯದಂತೆ ಸೂಕ್ತ ಕ್ರಮಕೈಗೊಂಡು, ಸಾರ್ವಜನಿಕರಿಗೆ ಸದರಿ ಬ್ರಿಜ್ ಮೇಲೆ ಮುಕ್ತವಾಗಿ ಸಂಚರಿಸಲು ಅನಕೂಲ ಮಾಡಿಕೊಡಬೇಕಾಗಿ ವಿನಂತಿಸಿದರು.


Spread the love

About Laxminews 24x7

Check Also

ಅಡ್ಡ ಮತದಾನ ಮಾಡಿದ್ದು ಸಾಬೀತಾದರೆ ರಾಜೀನಾಮೆ ನೀಡಿ ರಾಜಕೀಯ ನಿವೃತ್ತಿ ಪಡೆಯುತ್ತೇನೆ: ಚಂದ್ರು ಲಮಾಣಿ

Spread the loveಗದಗ: ಪ್ರಾಮಾಣಿಕವಾಗಿ ಎನ್‌ಡಿಎಅಭ್ಯರ್ಥಿಗೆ ಮತ ಹಾಕಿದ್ದೇನೆ. ಧರ್ಮಸ್ಥಳ ಮಂಜುನಾಥನ ಮೇಲೆ ಮಾತ್ರವಲ್ಲ, ಯಾವುದೇ ದೇವರ ಮೇಲೆ ಪ್ರಮಾಣ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ