ಚಿಕ್ಕಮಗಳೂರು: ಅಂಚೆ ಮತಗಳನ್ನ ತಿರುಚಿದ ಆರೋಪದ ಮೇಲೆ ಶೃಂಗೇರಿ ಶಾಸಕ ಜೀವರಾಜ್ ಮೇಲೆ ದಾಖಲಾಗಿದ್ದ ಎಫ್ಐಆರ್‌ಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.
ತನ್ನ ಮೇಲಿನ ಕ್ರಿಮಿನಲ್ ಪ್ರಕರಣ ರದ್ದುಪಡಿಸುವಂತೆ ಕೋರಿ ಜೀವರಾಜ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ರು. ನ್ಯಾಯಮೂರ್ತಿ ಶ್ರೀಶಾನಂದ ಅವರ ರಜಾಕಾಲದ ಪೀಠ ಇಂದು (ಮೇ 5) ಅರ್ಜಿ ವಿಚಾರಣೆ ನಡೆಸಿದ್ದು, ಸರ್ಕಾರದ ನಡೆಗೆ ಎಸ್‌ಪಿಪಿ ಬೆಳ್ಳಿಯಪ್ಪ ಮೇಲೆ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
2023ರ ಮೇ 13ರಂದು ನಡೆದ ಘಟನೆಗೆ ಈಗ ಎಫ್ಐಆರ್ ಮಾಡಿದ್ರೆ ಹೇಗೆ? ಟ್ಯಾಂಪರಿಂಗ್ ಬಗ್ಗೆ ಕೋರ್ಟ್‌ಗೆ ಮಾಹಿತಿ ನೀಡದೇ ಎಫ್ಐಆರ್ ಮಾಡ್ತೀರಾ? ಸೋತವ್ರು ಯಾರು ಒಳಸಂಚು ಮಾಡ್ತಾರೆ. ಯಾರು IO ಕರೆಯಿರಿ, ನಿಮಗೆ ಕಣ್ಣು ಕಾಣೋದಿಲ್ವಾ, ಸಸ್ಪೆಂಡ್ ಬರೆಯಬೇಕಾ ಅಂತಾ ತನಿಖಾಧಿಕಾರಿ ಮೇಲೆ ಜಡ್ಜ್ ಗರಂ ಆದ್ರು.
2023ರಲ್ಲಿದ್ದ ಜಿಲ್ಲಾಧಿಕಾರಿಗಳ ಮೇಲೆ ಎಫ್ಐಆರ್ ಮಾಡಿದ್ದು ಯಾಕೆ? ನಿಮ್ಮ ಎಫ್ಐಆರ್ ಇದರಲ್ಲಿ ಓದಿದ್ರೆ ಏನಿದೆ ಅಂತ ಗೊತ್ತಾಗ್ತಿದೆ. ಈಗಿನ ಚುನಾವಣಾಧಿಕಾರಿ ಗೌರವ್ ಶೆಟ್ಟಿಯ ಮೇಲೆ ಯಾಕೆ ಎಫ್ಐಆರ್ ಮಾಡಿಲ್ಲ. ರಾಜಕೀಯ ಪ್ರಭಾವಕ್ಕೆ ಒಳಗಾಗಿ ಪೊಲೀಸ್ರು ಎಫ್ಐಆರ್ ಮಾಡಬಾರದು. ಹೈಕೋರ್ಟ್ ಆದೇಶದ ಮೇಲೆ ಅಂಚೆ ಮತಗಳ ಕೌಂಟಿಂಗ್‌ಗೆ ಆದೇಶ ಮಾಡಲಾಗಿತ್ತು. ಸೀಲ್ ಇಲ್ಲದಿದ್ರೆ, ಡಬಲ್ ಟಿಕ್ ಇದ್ರೆ ನೀವು ಕೋರ್ಟ್ ಗಮನಕ್ಕೆ ಯಾಕೆ ತಂದಿಲ್ಲ ಅಂತಾ ನ್ಯಾಯಾಧೀಶರು ಎಸ್‌ಪಿಪಿ ಬೆಳ್ಳಿಯಪ್ಪ ಮೇಲೆ ಅಸಮಾಧಾನ ಹೊರಹಾಕಿದೆ.
ರಾಜೇಗೌಡನ ಮೇಲೆ ಎಫ್ಐಆರ್ ಆಗಿದ್ರು ತಡೆ ನೀಡ್ತಿದ್ದೆ ಎಂದ ನ್ಯಾಯಾಧೀಶರು, ಪ್ರಜಾಪ್ರತಿನಿಧಿ ಕಾಯ್ದೆಯಡಿ ಡಿಸಿ ವಿರುದ್ಧ ಪ್ರಕರಣ ದಾಖಲಿಸಲಾಗದು ಎಂದು ಅಭಿಪ್ರಾಯಪಟ್ಟು, ದೂರುದಾರ ಸುಧೀರ್‌ಗೆ ನೋಟಿಸ್ ಜಾರಿಗೊಳಿಸಿದೆ. ಬಲವಂತದ ಕ್ರಮ ಕೈಗೊಳ್ಳದಂತೆ ಎಫ್ಐಆರ್‌ಗೆ ಮಧ್ಯಂತರ ತಡೆ ನೀಡಿ, ಮೇ 7ಕ್ಕೆ ಅರ್ಜಿ ವಿಚಾರಣೆ ಮುಂದೂಡಿದೆ.
Laxmi News 24×7