Breaking News

ಕೇರಳ‌ ಸಿಎಂ ಪಿಣರಾಯಿ ವಿಜಯನ್ ರಾಜೀನಾಮೆ

Spread the love

ತಿರುವನಂತಪುರಂ: ಕೇರಳ ವಿಧಾನಸಭಾ ಚುನಾವಣೆಯಲ್ಲಿ ಎಲ್‌ಡಿಎಫ್  ಸರ್ಕಾರ ಸೋಲುಂಡ ಬೆನ್ನಲ್ಲೇ ಕೇರಳ  ಸಿಎಂ ಪಿಣರಾಯಿ ವಿಜಯನ್  ರಾಜೀನಾಮೆ  ಸಲ್ಲಿಸಿದ್ದಾರೆ.

ಕೇರಳ ವಿಧಾನಸಭಾ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು, ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಭರ್ಜರಿ ಜಯ ದಾಖಲಿಸಿದೆ. ಪಿಣರಾಯಿ ವಿಜಯನ್ ನೇತೃತ್ವದ ಎಲ್‌ಡಿಎಫ್ ಆಡಳಿತಕ್ಕೆ ಅಂತ್ಯ ಹಾಡಿರುವ ಯುಡಿಎಫ್ 10 ವರ್ಷದ ಬಳಿಕ ಮತ್ತೆ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದೆ. ಈ ಹಿನ್ನೆಲೆ ಸಿಎಂ ಪಿಣರಾಯಿ ವಿಜಯನ್ ತಮ್ಮ ರಾಜೀನಾಮೆ ಪತ್ರವನ್ನು ಲೋಕಭವನಕ್ಕೆ ರವಾನಿಸಿದ್ದರು.

ಪಿಣರಾಯಿ ವಿಜಯನ್ ಅವರ ರಾಜೀನಾಮೆಯನ್ನು ರಾಜ್ಯಪಾಲ ರಾಜೇಂದ್ರ ಆರ್ಲೇಕರ್ ಅಂಗೀಕರಿಸಿದ್ದಾರೆ. ಸಿಎಂ ಜೊತೆ ದೂರವಾಣಿ ಮಾತುಕತೆ ನಡೆಸಿದ ರಾಜ್ಯಪಾಲರು, ಮುಂದಿನ ಸರ್ಕಾರ ಪ್ರಮಾಣವಚನ ಸ್ವೀಕರಿಸಿ ಅಧಿಕಾರ ಸ್ವೀಕರಿಸುವವರೆಗೆ ಸಿಎಂ ಆಗಿ ಮುಂದುವರಿಯಲು ಪಿಣರಾಯಿ ವಿಜಯನ್‌ಗೆ ಸೂಚನೆ ನೀಡಿದ್ದಾರೆ.

ಒಟ್ಟು 140 ವಿಧಾನಸಭಾ ಕ್ಷೇತ್ರಗಳ ಪೈಕಿ ಯುಡಿಎಫ್ ಸುಮಾರು 104 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿ, ಸ್ಪಷ್ಟ ಬಹುಮತ ಪಡೆದಿದೆ. 10 ವರ್ಷಗಳ ಎಲ್‌ಡಿಎಫ್ ಆಡಳಿತದ ನಂತರ ಕೇರಳದ ಜನರು ಈ ಬಾರಿ ಬದಲಾವಣೆಗೆ ಮತ ನೀಡಿದ್ದಾರೆ.

ಮಾಜಿ ಮುಖ್ಯಮಂತ್ರಿ ದಿವಂಗತ ಉಮ್ಮನ್ ಚಾಂಡಿ ಅವರ ಪುತ್ರ ಚಾಂಡಿ ಉಮ್ಮನ್ ಅವರು ಪುತುಪಳ್ಳಿಯಲ್ಲಿ ಸುಮಾರು 52,907 ಮತಗಳ ಬೃಹತ್ ಅಂತರದಿಂದ ಜಯಗಳಿಸಿದ್ದಾರೆ. ಹರಿಪಾಡ್ ಕ್ಷೇತ್ರದಲ್ಲಿ ರಮೇಶ್ ಚೆನ್ನಿತ್ತಲ 23,000ಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಮುಸ್ಲಿಂ ಲೀಗ್ ತಾನು ಸ್ಪರ್ಧಿಸಿದ್ದ 27 ಸ್ಥಾನಗಳಲ್ಲಿ 23ರಲ್ಲಿ ಮುನ್ನಡೆ ಸಾಧಿಸಿ ಯುಡಿಫ್ ಗೆಲುವಿಗೆ ಬಲ ತುಂಬಿದೆ.

ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ನೇತೃತ್ವದ ಎಡರಂಗ ಮೈತ್ರಿಕೂಟಕ್ಕೆ ಆಡಳಿತ ವಿರೋಧಿ ಅಲೆ ತೀವ್ರವಾಗಿ ತಟ್ಟಿದೆ. ಪ್ರಮುಖವಾಗಿ ಯುವಜನರಿಗೆ ಉದ್ಯೋಗಾವಕಾಶಗಳ ಕೊರತೆ ಮತ್ತು ಕೇರಳ ಕಾಂಗ್ರೆಸ್ ನಾಯಕ ಜೋಸ್ ಕೆ. ಮಾಣಿ ಅವರಂತಹ ಹಿರಿಯ ನಾಯಕರ ಸೋಲು ಎಲ್‌ಡಿಎಫ್‌ಗೆ ಭಾರೀ ಆಘಾತ ನೀಡಿದೆ.


Spread the love

About Laxminews 24x7

Check Also

ಕುಟುಂಬ ಸಮೇತರಾಗಿ ಬೆಳ್ಳಂಬೆಳಗ್ಗೆ ತಿರುಪತಿ ವೆಂಕಟೇಶ್ವರ ಸ್ವಾಮಿ ದರ್ಶನ ಪಡೆದ ಡಿಕೆಶಿ

Spread the love ಬೆಂಗಳೂರು: ಮೊದಲಿನಿಂದಲೂ ದೇವರಲ್ಲಿ ಅಪಾರ ಭಕ್ತಿ, ನಂಬಿಕೆ ಹೊಂದಿರುವ ಸಿಎಂ ಡಿ.ಕೆ ಶಿವಕುಮಾರ್‌  ಅವರು ರಾಜ್ಯದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ