Breaking News

ಆರೋಗ್ಯ ಇಲಾಖೆಯ ಅಧಿಕಾರಿ  ಹರ್ಷ ಗುಪ್ತ ಸಾಹೇಬರ ವರ್ಗಾವಣೆ

Spread the love

ಆರೋಗ್ಯ ಇಲಾಖೆಯ ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿ  ಹರ್ಷ ಗುಪ್ತ ಸಾಹೇಬರ ವರ್ಗಾವಣೆ ಸರ್ಕಾರದ ಅತ್ಯಂತ ಕೆಟ್ಟ ನಿರ್ಧಾರವಾಗಿದೆ ಎಂದು ಸತ್ಯಪ್ಪ ವಿಷಾದ ವ್ಯಕ್ತಪಡಿಸಿದರು.

ಈ ಬಗ್ಗೆ ಸತ್ಯ ಎಂ ಎ ಎಸ್ ಫೌಂಡೇಶನ್ ಅಧ್ಯಕ್ಷ ಸತ್ಯಪ್ಪ ಅವರು ಮಾತನಾಡಿ ಶ್ರೀ ಹರ್ಷ ಗುಪ್ತ ಸಾಹೇಬರು ತಮ್ಮ 30 ವರ್ಷಗಳ ಸೇವಾ ಅವಧಿಯಲ್ಲಿ 26 ಬಾರಿ ಏಕಾಏಕಿ ವರ್ಗಾವಣೆಯಾಗಿದ್ದು ಈ ಬಾರಿಯೂ ಸರ್ಕಾರ ಆರೋಗ್ಯ ಇಲಾಖೆಯಲ್ಲಿ ಹಲವಾರು ಸುಧಾರಣೆಗಳನ್ನು ತಂದಿದ್ದ ಇಂತಹ ದಕ್ಷ ಪ್ರಾಮಾಣಿಕ ಅಧಿಕಾರಿಯನ್ನು ಬೇರೆ ಇಲಾಖೆಗೆ ಎತ್ತಂಗಡಿ ಮಾಡಿರುವುದು ದುರ್ದೈವದ ಸಂಗತಿಯೇ ಸರಿ.

ಹುಣಸೂರಿನಲ್ಲಿ ಪಾಳುಬಿದ್ದಿದ್ದ ಸರ್ಕಾರಿ ಸಾರ್ವಜನಿಕ ಹೈಟೆಕ್ ಆಸ್ಪತ್ರೆಯನ್ನು ಕಾಮಗಾರಿ ಪೂರ್ಣಗೊಳಿಸುವಂತೆ ಸನ್ಮಾನ್ಯ ಶ್ರೀ ಹರ್ಷ ಗುಪ್ತ ಸಾಹೇಬರು ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಆರೋಗ್ಯ ಇಲಾಖೆ ರವರಿಗೆ ಮನವಿ ಮಾಡಿಕೊಂಡಿದ್ದರ ಮೇರೆಗೆ ಕೂಡಲೇ ವಿಷಯವನ್ನು ಕೈಗೆತ್ತಿಕೊಂಡು ಟೆಂಡರ್ ಕರೆದು ಸಾರ್ವಜನಿಕ ಹೈಟೆಕ್ ಆಸ್ಪತ್ರೆಯ ಕಾಮಗಾರಿಯನ್ನು ಮುಗಿಸಿ ಆಸ್ಪತ್ರೆಯನ್ನು ಲೋಕಾರ್ಪಣೆ ಮಾಡಲು ಮುಂದಾಗಿದ್ದರು.

ಅದೇ ರೀತಿಯಲ್ಲಿ ಹುಣಸೂರು ತಾಲೂಕಿನ ಹನಗೋಡು ಹೋಬಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆಂಬುಲೆನ್ಸ್ ವ್ಯವಸ್ಥೆ, ಹುಣಸೂರು ನಗರದ ಆಂಬುಲೆನ್ಸ್, ಬಿಳಿಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೂ ಸಹ ಆಂಬುಲೆನ್ಸ್ ವ್ಯವಸ್ಥೆಯನ್ನು ಕಲ್ಪಿಸಿ ಕೊಟ್ಟಿದ್ದರು.

ಗಾವಡಗೆರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಎರಡು ತಿಂಗಳುಗಳಿಂದ ವೈದ್ಯರಿಲ್ಲದೆ ರೋಗಿಗಳು ತೊಂದರೆ ಪಡುತ್ತಿದ್ದು ಹಾಗೂ ವೈದ್ಯರಿಗೆ, ಸಿಬ್ಬಂದಿಗಳಿಗೆ ಸಂಬಳವೂ ನೀಡದಿರುವ ಸಂದರ್ಭದಲ್ಲಿ ನಮ್ಮ ಸಂಸ್ಥೆಯ ವತಿಯಿಂದ ಮಾನ್ಯ ಶ್ರೀ ಹರ್ಷಗುಪ್ತರವರಲ್ಲಿ ಮನವಿ ಮಾಡಿಕೊಂಡ ತಕ್ಷಣವೇ ನಮ್ಮ ಮನವಿಗೆ ಸ್ಪಂದಿಸಿ ವೈದ್ಯರನ್ನು ನೇಮಿಸಿ ಸಿಬ್ಬಂದಿಗಳಿಗೆ ಆಗುವ ವೈದ್ಯರಿಗೆ ವೇತನವನ್ನು ಸಹ ಆದೇಶ ಮಾಡಿಸಿ ಕೊಡಿಸಿ ಕೊಟ್ಟಿರುತ್ತಾರೆ.

ಹುಣಸೂರು, ಹನಗೋಡು, ಗಾವಡಗೆರೆ, ಬಿಳಿಕೆರೆ ಆಸ್ಪತ್ರೆಗಳಿಗೆ 108 ಅಂಬುಲೆನ್ಸ್ ಗಳನ್ನು ನಮ್ಮ ಸಂಸ್ಥೆಯ ಮನವಿಯ ಮೇರೆಗೆ ಕಲ್ಪಿಸಿ ಕೊಟ್ಟಿದ್ದು, ಆರೋಗ್ಯ ಇಲಾಖೆಯಲ್ಲಿ ಹಲವಾರು ಸುಧಾರಣೆಗಳನ್ನು ಮಾಡಿದ್ದು, ಕರ್ನಾಟಕ ರಾಜ್ಯದಲ್ಲಿಯೇ ಆರೋಗ್ಯ ಇಲಾಖೆಯಲ್ಲಿ ಸುಮಾರು 300 ಕೋಟಿಗಳಿಗೂ ಅಧಿಕ ಅನ್ಯಾಯವಾಗಿ ವ್ಯಯವಾಗುತ್ತಿದ್ದ ಹಣವನ್ನು ಸಹ ಸರ್ಕಾರದ ಬೊಕ್ಕಸಕ್ಕೆ ಉಳಿಸಿ ಕೊಟ್ಟಿದ್ದಾರೆ. ಆರೋಗ್ಯ ಇಲಾಖೆಯಲ್ಲಿ ಸರಿಯಾಗಿ ಕರ್ತವ್ಯ ನಿರ್ವಹಿಸದ ಅಧಿಕಾರಿಗಳಿಗೆ, ಸಿಬ್ಬಂದಿಗಳಿಗೆ ಚುರುಕು ಮುಟ್ಟಿಸುವ ಕೆಲಸ ಮಾಡಿರುತ್ತಾರೆ. ಇದರಿಂದಾಗಿ ಆರೋಗ್ಯ ಇಲಾಖೆಯಲ್ಲಿ ಅಮೂಲಾಗ್ರವಾಗಿ ಅಭಿವೃದ್ಧಿಯನ್ನು ಕಂಡಿರುತ್ತದೆ.

ರಾಜ್ಯದ ಆರೋಗ್ಯ ಇಲಾಖೆಯನ್ನೇ ಅಭಿವೃದ್ಧಿ ಪಥದತ್ತ ಕೊಂಡೊಯ್ಯುತ್ತಿದ್ದ ದಕ್ಷ ಆಡಳಿತಾಧಿಕಾರಿಯಾದ ಮಾನ್ಯ ಶ್ರೀ ಹರ್ಷಗುಪ್ತ ಸಾಹೇಬರು ಇದುವರೆಗೂ ಕರ್ತವ್ಯ ನಿರ್ವಹಿಸಿದ್ದ ಪ್ರತಿಯೊಂದು ಇಲಾಖೆಗಳಲ್ಲಿಯೂ ಹಾಗೂ ಈ ಹಿಂದೆ ಮೈಸೂರಿನ ಜಿಲ್ಲಾಧಿಕಾರಿಯಾಗಿದ್ದಾಗಲು ದಕ್ಷ ಹಾಗೂ ಪ್ರಾಮಾಣಿಕತೆಯ ಆಡಳಿತದಿಂದ ತಮ್ಮದೇ ಚಾಪು ಮೂಡಿಸಿ ಜನಮನ್ನಣೆ ಗಳಿಸಿರುತ್ತಾರೆ.

ಶ್ರೀ ಹರ್ಷ ಗುಪ್ತ ಸಾಹೇಬರು ಆರೋಗ್ಯ ಇಲಾಖೆಯಲ್ಲಿ ಅತಿ ಹೆಚ್ಚು ಪರಿಣಾಮಕಾರಿ ಕೆಲಸ ನಿರ್ವಹಿಸಿದ್ದರಿಂದ ಆರೋಗ್ಯ ಇಲಾಖೆಯಲ್ಲಿಯೇ ವಿಧಾನಸೌಧದಲ್ಲಿ ಕೆಲಸ ನಿರ್ವಹಿಸುತ್ತಿರುವ ಕೆಲವು ಅಧಿಕಾರಿಗಳು ರಾಜಕಾರಣಿಗಳಿಗೆ ಒತ್ತಡ ಹಾಕುವ ಮೂಲಕ ಇವರನ್ನು ವರ್ಗಾವಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಇದು ಅತ್ಯಂತ ದುರ್ದೈವದ ಸಂಗತಿಯಾಗಿದೆ ಎಂದರು.

ಇಂತಹ ದಕ್ಷ ಪ್ರಾಮಾಣಿಕ ಅಧಿಕಾರಿಗಳು ಸಾರ್ವಜನಿಕ ವಲಯಕ್ಕೆ ಹಾಗೂ ಯುವ ಜನತೆಗೆ ಅವಶ್ಯಕವಾಗಿ ಬೇಕಾಗಿದ್ದು ಇವರು ಯುವ ಜನತೆಯ ಕಣ್ಮಣಿ ಆಗಿರುತ್ತಾರೆ.

ನಮ್ಮ ಮನವಿಗೆ ತಕ್ಷಣವೇ ಸ್ಪಂದಿಸಿ ಹುಣಸೂರು ತಾಲೂಕಿಗೆ ಹಲವಾರು ಕೆಲಸಗಳನ್ನು ಮಾಡಿಸಿಕೊಟ್ಟ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾದ ದಕ್ಷ ಅಧಿಕಾರಿ ಶ್ರೀ ಹರ್ಷ ಗುಪ್ತ ಸಾಹೇಬರವರಿಗೆ ಸತ್ಯ ಎಂ ಎ ಎಸ್ ಫೌಂಡೇಶನ್ ವತಿಯಿಂದ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದರು.


Spread the love

About Laxminews 24x7

Check Also

ಶಾಸಕ ರಮೇಶ ಜಾರಕಿಹೊಳಿ ಅವರಿಂದ ದೈವಿ ವನ ನಿರ್ಮಾಣ ಕಾಮಗಾರಿಗೆ ಚಾಲನೆ

Spread the loveಗೋಕಾಕ: ನಗರದ ಜನತೆ ಮತ್ತು ಭಕ್ತರಿಗಾಗಿ ಶ್ರೀ ಚೌಡೇಶ್ವರಿ ದೈವಿ ವನ ನಿರ್ಮಾಣ ಮಾಡಲಾಗುತ್ತಿದೆ. ಗೋಕಾಕ ಮಾದರಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ