Breaking News

ಅಂತರರಾಜ್ಯ ಕಳ್ಳನ ಬಂಧನ : 7 ಬೈಕ್ ಜಪ್ತಿ

Spread the love

ಗೋಕಾಕ : ಅಂತರರಾಜ್ಯ ಬೈಕ್‌ ಕಳ್ಳನನ್ನು ಬಂಧಿಸಿರುವ ಗೋಕಾಕ ಶಹರ ಪೊಲೀಸರು, ₹3.84 ಲಕ್ಷ ಮೌಲ್ಯದ 7 ಬೈಕ್‌ಗಳನ್ನು ಜಪ್ತಿ ಮಾಡಿದ್ದಾರೆ.

ಕೋಲ್ಹಾಪೂರ ಜಿಲ್ಲೆಯ ಗಡಹಿಂಗ್ಲಜ.ಹಾಲಿವಾಸ ರಾಮದುರ್ಗ ತಾಲೂಕಿನ ಕಡಕೋಳ ಗ್ರಾಮದ ರಮೇಶ ಮನೋಹರ ಸುತಾರ (36) ಬಂಧಿತ ಕಳ್ಳ. ಮಾ 30 ರಂದು ನಗರದ ಬಸ್ ನಿಲ್ದಾಣದಲ್ಲಿ ಬೈಕ್ ಕಳುವಾಗಿತ್ತು. ಈ ಕುರಿತು ಗೋಕಾಕ ನಗರದ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಆರೋಪಿಯ ಪತ್ತೆಗೆ ವಿಶೇಷ ತಂಡ ರಚಿಸಲಾಗಿತ್ತು. ಇದರ ಬೆನ್ನು ಬಿದ್ದ ಪೊಲೀಸ್‌ ಅಧಿಕಾರಿಗಳು ರಮೇಶ ಮನೋಹರ ಸುತಾರ ರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಳವು ಪ್ರಕರಣಗಳು ಹೊರ ಬಂದಿದೆ.

ಗೋಕಾಕ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2, ಬೆಳಗಾವಿ ಸಾಂಬ್ರಾ, ಸಂಕೇಶ್ವರ, ಗಡಹಿಂಗ್ಲಜ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳುವು ಮಾಡಿದ್ದ 5 ಒಟ್ಟು 7 ಬೈಕ್ ಗಳನ್ನು ಜಪ್ತಿ ಮಾಡಲಾಗಿದೆ.

ಪೊಲೀಸ್ ವರಿಷ್ಠಾಧಿಕಾರಿ ರಾಮರಂಜನ ಕೆ , ಹೆಚ್ಚುವರಿ ಎಸ್.ಪಿ ರಾಮಗೊಂಡ ಬಸರಗಿ, ಡಿವೈಎಸ್‌ಪಿ ರವಿ ನಾಯಿಕ, ಗೋಕಾಕ ವೃತ್ತ ಇನ್‌ಸ್ಪೆಕ್ಟರ್‌ ಸುರೇಶಬಾಬು ಇವರ ಮಾರ್ಗದರ್ಶನದಲ್ಲಿ ಪಿಎಸ್‌ಐ ಕಿರಣ ಮೋಹಿತೆ, ಪ್ರೋ. ಪಿ.ಎಸ್.ಐ ಗೌರಿಶಂಕರ, ಸಿಬ್ಬಂದಿ ಆರ್.ಬಿ.ಹಡಪದ, ಕೆ.ಎನ್.ಇಳಿಗೇರ,ಬಿ.ಎಸ್.ಸಿದ್ನಾಳ,ಎಂ.ಆರ್.ಅಂಬಿ, ಪಿ.ಎಮ್ ಘಸ್ತಿ, ಜೆ.ಎಚ್.ಗುಡ್ಲಿ, ಎಸ್ .ಎಲ್.ಮಂಗಿ, ಮಂಜು ಹುಚ್ಚಗೌಡರ, ಐ.ವಿ.ಘಂಟಿ, ಮಂಜುನಾಥ್ ನಾಯಿಕ,ಬೆಳಗಾವಿಯ ಟೆಕ್ನಿಕಲ್ ಸೆಲ್ ನ ಸಚೀನ ಪಾಟೀಲ್
ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿತ್ತು. ಸದರಿ ತಂಡದ ಕಾರ್ಯಾಚರಣೆಯನ್ನು ಪೊಲೀಸ್ ವರಿಷ್ಠಾಧಿಕಾರಿ ರವರು ಶ್ಲಾಘಿಸಿದ್ದು,ಆರೋಪಿಯನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದ್ದು, ತನಿಖೆ ಮುಂದುವರೆದಿದೆ.


Spread the love

About Laxminews 24x7

Check Also

ಕ್ಷೇತ್ರದಲ್ಲಿ ಎಲ್ಲ ಸಮುದಾಯ ಒಗ್ಗೂಡಿಸಿಕೊಂಡು ಅಭಿವೃದ್ಧಿ ಕೆಲಸ

Spread the loveಗೋಕಾಕ: ಸಾಮಾಜಿಕ ನ್ಯಾಯದ ರೂವಾರಿ ಬಸವಣ್ಣನವರ ಅನುಭವ ಮಂಟಪದ ಮಾದರಿಯಲ್ಲಿ ಅರಭಾವಿ ಕ್ಷೇತ್ರದಲ್ಲಿ ಎಲ್ಲ ಸಮುದಾಯ ಒಗ್ಗೂಡಿಸಿಕೊಂಡು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ