Breaking News

ರೈತನ ಮಗಳ ಸಾಧನೆ, ಪಿಯು ಸೈನ್ಸ್ ಶೇ. 97.66 ಅಂಕ: ಪುತ್ರಿ ಸಾಧನೆಗೆ ತಂದೆ-ತಾಯಿ ಹರ್ಷ

Spread the love

ರೈತನ ಮಗಳ ಸಾಧನೆ, ಪಿಯು ಸೈನ್ಸ್ ಶೇ. 97.66 ಅಂಕ: ಪುತ್ರಿ ಸಾಧನೆಗೆ ತಂದೆ-ತಾಯಿ ಹರ್ಷ

ಬೆಳಗಾವಿ: ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಬೈಲಹೊಂಗಲ ತಾಲ್ಲೂಕಿನ ಒಕ್ಕುಂದ ಗ್ರಾಮದ ವಿದ್ಯಾರ್ಥಿನಿ ಜ್ಯೋತಿ ಮಲ್ಲನಗೌಡ ಪಾಟೀಲ 600ಕ್ಕೆ 586 ಅಂಕ ಗಳಿಸಿ, ಅತ್ಯುತ್ತಮ ಸಾಧನೆಗೈದಿದ್ದಾಳೆ.

ಹುಕ್ಕೇರಿ ತಾಲ್ಲೂಕಿನ ನಿಡಸೋಸಿಯ ಮೊರಾರ್ಜಿ ದೇಸಾಯಿ ವಸತಿ ವಿಜ್ಞಾನ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಆಗಿರುವ ಜ್ಯೋತಿ ಪಾಟೀಲ, ಕನ್ನಡ 100, ಇಂಗ್ಲೀಷ 98, ಭೌತಶಾಸ್ತ್ರ 98, ರಸಾಯನಶಾಸ್ತ್ರ 96, ಜೀವಶಾಸ್ತ್ರ 98, ಗಣಿತ 98 ಅಂಕ ಸಿಕ್ಕಿದೆ. ಮಗಳ ಈ ಸಾಧನೆಗೆ ತಂದೆ ಮಲ್ಲನಗೌಡ, ತಾಯಿ‌ ಕವಿತಾ ಸೇರಿ ಕುಟುಂಬಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ. ಮನೆಯಲ್ಲಿ ಹಬ್ಬದ ವಾತಾವರಣ ನಿರ್ಮಾಣ ಆಗಿದ್ದು, ಎಲ್ಲರೂ ಜ್ಯೋತಿಗೆ ಸಿಹಿ ತಿನ್ನಿಸಿ ಸಂಭ್ರಮಿಸುತ್ತಿದ್ದಾರೆ.

ಜ್ಯೋತಿ ತಂದೆ ರೈತರಾಗಿದ್ದರೆ, ತಾಯಿ ಗೃಹಿಣಿ. ತಾವು ಉನ್ನತ ಶಿಕ್ಷಣ ಪಡೆಯದಿದ್ದರೂ ಈ ದಂಪತಿ ಮಗಳಿಗೆ ಉತ್ತಮ ಶಿಕ್ಷಣ ಕೊಡಿಸುತ್ತಿದ್ದಾರೆ. ಮಗಳು ದೊಡ್ಡ ಅಧಿಕಾರಿ ಆಗುವ ಕನಸು ಕಂಡಿದ್ದಾರೆ. ಆ ನಿಟ್ಟಿನಲ್ಲಿ ಪಿಯುಸಿಯಲ್ಲಿ ಅತ್ಯುತ್ತಮ ಅಂಕ ಪಡೆದಿರುವ ಜ್ಯೋತಿ ಪಾಲಕರ ಕನಸು ನನಸು ಮಾಡುವತ್ತ ದಿಟ್ಟ ಹೆಜ್ಜೆ ಇಟ್ಟಿದ್ದಾಳೆ.


Spread the love

About Laxminews 24x7

Check Also

ಪ್ರತಿಯೊಂದು ಕೆಲಸ ಮಾಡಲು ಪೋಲಿಸರಿಗೆ ಸಾರ್ವಜನಿಕರ ಸಹಕಾರಬೇಕು

Spread the love ಗೋಕಾಕ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಗೋಕಾಕ ಉಪ ವಿಭಾಗದಲ್ಲಿ ಸುಮಾರು 5 ವರ್ಷಗಳ ಹಿಂದಿನಿಂದ ಕಳೆದುಹೋದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ