Breaking News

ಕ್ಲಾಸ್‌ ರೂಮಲ್ಲೇ ಚಾಕೊಲೇಟ್ ಕೊಟ್ಟು ವಿದ್ಯಾರ್ಥಿನಿಗೆ ಪ್ರಪೋಸ್‌ – ಚಪ್ಪಲಿ ಏಟು ತಿಂದ ಪ್ರೊಫೆಸರ್‌

Spread the love

ನೆಲಮಂಗಲ: ವಿದ್ಯಾರ್ಥಿನಿಗೆ ಪ್ರಪೋಸ್ ಮಾಡುವಾಗ ಆಕೆಯ ಗೌರವ, ಖಾಸಗಿತನ ಮತ್ತು ಶಿಕ್ಷಣಕ್ಕೆ ಆದ್ಯತೆ ನೀಡುವುದು ಮುಖ್ಯ. ಆದ್ರೆ ಪ್ರತಿಷ್ಠಿತ ಕಾಲೇಜಿನ ಪ್ರೊಫೆಸರ್‌ವೊಬ್ಬ  ಕ್ಲಾಸ್‌ ರೂಮಿನಲ್ಲೇ ವಿದ್ಯಾರ್ಥಿನಿಗೆ ಪ್ರಪ್ರೋಸ್‌ ಮಾಡಿದ ಘಟನೆ ನೆಲಮಂಗಲ ತಾಲೂಕಿನ ಮೆಡಿಕಲ್ ಕಾಲೇಜಿನಲ್ಲಿ   ನಡೆದಿದೆ.

ತರಗತಿ ನಡೆಯುತ್ತಿದ್ದಾಗಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರೊಫೆಸರ್‌ ಅಬ್ದುಲ್‌ ಪ್ರಪೋಸ್‌ ಮಾಡಿದ್ದಾನೆ. ಇದರಿಂದ ಆಕ್ರೋಶಗೊಂಡ ವಿದ್ಯಾರ್ಥಿನಿ ತರಗತಿಯಲ್ಲೇ ಪ್ರಶ್ನೆ ಮಾಡಿದ್ದಾರೆ. ಬಳಿಕ ಪ್ರೊಫೆಸರ್‌ಗೆ ಚಪ್ಪಲಿಯಿಂದ ಥಳಿಸಿದ್ದಾರೆ.

ಅಲ್ಲದೇ ಪ್ರೊಫೆಸರ್‌ ಅಬ್ದುಲ್‌ ವರ್ತನೆಯಿಂದ ರೊಚ್ಚಿಗೆದ್ದ ಇತರ ವಿದ್ಯಾರ್ಥಿಗಳು ಕ್ಯಾಂಪಸ್‌ನಲ್ಲೇ ಅಟ್ಟಾಡಿಸಿ ಹೊಡೆದಿದ್ದಾರೆ. ಕಾರಿನ ಬಳಿ ಬಂದು ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಇದರಿಂದ ಹೆದರಿದ ಅಬ್ದುಲ್‌ ಹೇಗೋ ವಿದ್ಯಾರ್ಥಿಗಳಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ. ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣಾ  ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಪ್ರೊಫೆಸರ್‌ ಹೇಳಿದ್ದೇನು?

ಪ್ರೊಫೆಸರ್ : ನಿಮ್ಮ ಬ್ಯಾಚ್ ಹುಡುಗಿಯ ಪ್ರೀತಿ ವಿರೋಧಿಸಲು ಸಾಧ್ಯವಾಗುತ್ತಿಲ್ಲ… ನಾನು ಪ್ರಪೋಸ್ ಮಾಡ್ತಿದ್ದೀನಿ, ನಿಮ್ಮ ಬ್ಯಾಚ್‌ನ ಬಹಳ ಪ್ರಮುಖವಾದ ಹುಡುಗಿಗೆ, ನಿಮ್ಮ ಬ್ಯಾಚ್‌ನ ಎಲ್ಲರಿಗೂ ಚಾಕೋಲೇಟ್ ಹಂಚುತ್ತಿದ್ದೇನೆ. ಐ ಲವ್ ಯು ….,
ವಿದ್ಯಾರ್ಥಿನಿ : ಎಕ್ಸ್‌ಕ್ಯೂಸ್‌ಮಿ… ನೀವು ಏನಾದ್ರು ಮಾತಾಡಬೇಕು ಅಂತಾ ಇದ್ರೆ ಪ್ರಿನ್ಸಿಪಾಲ್ ಬಳಿ ಹೋಗಿ, ಇಡೀ ಬ್ಯಾಚ್ ನಿಮ್ಮ ಜೊತೆ ಬರುತ್ತೆ.
ಪ್ರೊಫೆಸರ್ : ಆಯ್ತು ಬನ್ನಿ, ಹಾಗಾದ್ರೆ ನೀನು ಹೇಗೆ ನನಗೆ ಪ್ರಪೋಸ್ ಮಾಡಿದೆ?
ವಿದ್ಯಾರ್ಥಿನಿ : ಯಾವಾಗ ಪ್ರಪೋಸ್ ಮಾಡಿದೆ..?
ಪ್ರೊಫೆಸರ್ : ಸಿಸಿಟಿವಿ ಇದೆ
ವಿದ್ಯಾರ್ಥಿನಿ : ನನಗೆ ಅದನ್ನ ತೋರಿಸು
ಪ್ರೊಫೆಸರ್ : ನಾನು ನಾಳೆ ನಿನ್ನೆ ಜೊತೆ ಮಾತಾಡ್ತೀನಿ
ವಿದ್ಯಾರ್ಥಿನಿ ; ಮಾತನಾಡೋಕೆ ನನಗೆ ಇಷ್ಟ ಇಲ್ಲ
ಪ್ರೊಫೆಸರ್ : ಎಲ್ಲರೂ ಚಾಕೋಲೇಟ್ ತಗೊಳ್ಳಿ.


Spread the love

About Laxminews 24x7

Check Also

ಪೆಟ್ರೋಲ್, ಡೀಸೆಲ್ ಕೊರತೆ – ಸುಳ್ಳು ವದಂತಿಗಳಿಗೆ ಕಿವಿಗೊಡದಂತೆ ಮನವಿ

Spread the loveಬೆಂಗಳೂರು: ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಕೊರತೆಯಾಗಿದೆ ಎಂಬ ಸುಳ್ಳು ವದಂತಿಗಳು ಸಾಮಾಜಿಕ ಜಾಲತಾಣಗಳು ಹಾಗೂ ಮಾಧ್ಯಮಗಳಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ