ಹುಬ್ಬಳ್ಳಿ: ನಗರದಲ್ಲಿ ಮೂರು ಯುದ್ಧ ವಿಮಾನಗಳು ಕೆಳಮಟ್ಟದಲ್ಲಿ ಹಾರಾಟ ನಡೆಸಿದ್ದು ಜನ ಆತಂಕಕ್ಕೊಳಗಾಗಿದ್ದಾರೆ. ಕೊಲ್ಲಿ ರಾಷ್ಟ್ರಗಳಲ್ಲಿ ಯುದ್ಧ ನಡೆಯುತ್ತಿರುವ ಹೊತ್ತಲ್ಲೇ ವಿಮಾನಗಳು ಕೆಳಮಟ್ಟದಲ್ಲಿ ಹಾರಾಟ ನಡೆಸಿದ್ದು ಜನರ ಭಯಕ್ಕೆ ಕಾರಣವಾಗಿದೆ.
ಹುಬ್ಬಳ್ಳಿಯ ಕೇಶ್ವಾಪುರ, ಬೆಂಡಿಗೇರಿ, ದೇಶಪಾಂಡೆ ನಗರ, ರಾಮನಗರ, ವಿಜಯನಗರದಲ್ಲಿ ಏಕಾಏಕಿ ಫೈಟರ್ ಜೆಟ್‍ಗಳು ಕಾಣಿಸಿಕೊಂಡಿವೆ. ಅತಿ ಕೆಳಮಟ್ಟದ ಅಂತರದಲ್ಲಿ ಕರ್ಕಶ ಸದ್ದು ಮಾಡಿ ಹಾರಾಟ ನಡೆಸಿವೆ. ಇದರಿಂದ ಜನ ಗಾಬರಿಗೊಂಡಿದ್ದರು.
ಈ ಬಗ್ಗೆ `ಪಬ್ಲಿಕ್ ಟಿವಿ’ಗೆ ಹುಬ್ಬಳ್ಳಿ ವಿಮಾನ ನಿಲ್ದಾಣದ ನಿರ್ದೇಶಕ ರೂಪೇಶ್ ಕುಮಾರ್ ಮಾಹಿತಿ ನೀಡಿದ್ದು, ಗೋವಾ ಎಟಿಸಿಯಿಂದ ಪ್ರಾಯೋಗಿಕವಾಗಿ ಮೂರು ಯುದ್ಧದ ವಿಮಾನಗಳು ತರಬೇತಿಗಾಗಿ ಹುಬ್ಬಳ್ಳಿಗೆ ತಲುಪಿ ಹಾರಾಟ ನಡೆಸಿವೆ. ಬೇರೆ ದೇಶಗಳ ಯುದ್ಧಕ್ಕೂ, ಈ ಯುದ್ಧ ವಿಮಾನ ಹಾರಾಟಕ್ಕೂ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಿದ್ದಾರೆ.
ಪ್ರತಿ ಎರಡು ತಿಂಗಳಿಗೊಮ್ಮೆ ಈ ರೀತಿಯಲ್ಲಿ ಪ್ರಯೋಗ ನಡೆಯುತ್ತದೆ. ಈ ಬಗ್ಗೆ ಜನರು ಯಾವುದೇ ಆತಂಕಪಡುವ ಅಗತ್ಯ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
Laxmi News 24×7