Breaking News

2ನೇ ಮದ್ವೆಯಾಗ್ತಿದ್ದ ಗಂಡ ತಾಳಿ ಕಟ್ಟೋ ವೇಳೆ ಮೊದಲ ಹೆಂಡ್ತಿ ಎಂಟ್ರಿ

Spread the love

ಚಿಕ್ಕಬಳ್ಳಾಪುರ: ಆತನಿಗೆ ಮದುವೆಯಾಗಿ  ಹೆಂಡತಿ ಇಬ್ರು ಮಕ್ಕಳಿದ್ದರೂ ಎರಡನೇ ಮದುವೆಗೆ ರೆಡಿ ಆಗಿದ್ದ. ಇನ್ನೇನು ತಾಳಿ ಕಟ್ಟಬೇಕು ಅನ್ನುವಷ್ಟರಲ್ಲೇ ಮೊದಲ ಹೆಂಡತಿ ಧಿಡೀರ್ ಎಂಟ್ರಿ ಕೊಟ್ಟು ಮದುವೆ ರದ್ದಾಗಿ, ಗಂಡ ಪೊಲೀಸರ (Police) ಅತಿಥಿಯಾದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನಡೆದಿದೆ.

ಜಿಲ್ಲೆಯ ದೇವನಹಳ್ಳಿ ತಾಲೂಕಿನ ಕೋಡಗುರ್ಕಿ ಗ್ರಾಮದ ಬಳಿ ಘಟನೆ ನಡೆದಿದೆ. ಅಂದಹಾಗೆ ಆಂಧ್ರ ಮೂಲದ ಕದಿರಿಯ ಸುರೇಶ್ ಎಂಬಾತ ಹಲವು ವರ್ಷಗಳ ಹಿಂದೆಯೇ ಚಿಕ್ಕಬಳ್ಳಾಪುರ ಜಿಲ್ಲೆಯ ಮಂಚೇನಹಳ್ಳಿಯ ನಾಗಮಣಿ ಎಂಬುವವರೊಂದಿಗೆ ವಿವಾಹವಾಗಿ ಇಬ್ಬರು ಮಕ್ಕಳು ಸಹ ಇದ್ದರು.

ಆದ್ರೆ ಕೌಟುಂಬಿಕ ಕಲಹದ ಹಿನ್ನೆಲೆ ಗಂಡ ಹೆಂಡತಿ ಬೇರೆ ಬೇರೆಯಾಗಿದ್ರು. ಹೀಗಾಗಿ ಈಗ ಸುರೇಶ್ ಕೋಡಗುರ್ಕಿ ಗ್ರಾಮದ ಮುನೇಶ್ವರ ದೇವಾಲಯದಲ್ಲಿ ಮತ್ತೊಂದು ಮದುವೆಗೆ ರೆಡಿಯಾಗಿ ನಿಂತಿದ್ದ. ಇನ್ನೇನು ತಾಳಿ ಕಟ್ಟಬೇಕು ಅನ್ನೋವಷ್ಟರಲ್ಲಿ ಅಕ್ಕ ಪಡೆ ಪೊಲೀಸರೊಂದಿಗೆ ನಾಗಮಣಿ ಮದುವೆ ಮನೆಗೆ ಎಂಟ್ರಿ ಕೊಟ್ಟು ಮದುವೆ ನಿಲ್ಲಿಸಿದ್ದಾಳೆ.

ವರ ಸುರೇಶ್ ನನ್ನ ಪೊಲೀಸರು ವಶಕ್ಕೆ ಪಡೆದು ಕರೆದುಕೊಂಡು ಹೋಗಿದ್ದು ಇದರಿಂದ ಮದುವೆ ನಿಂತು ಹೋಗಿದೆ.


Spread the love

About Laxminews 24x7

Check Also

ಇರಾನ್‌ ಸುಪ್ರೀಂ ಲೀಡರ್‌ ಖಮೇನಿ ಖತಂ – ಚಿಕ್ಕಬಳ್ಳಾಪುರದ ಅಲೀಪುರದಲ್ಲಿ 3 ದಿನ ʻಬ್ಲಾಕ್ ಡೇʼ ಆಚರಣೆ

Spread the loveಚಿಕ್ಕಬಳ್ಳಾಪುರ: ಅಮೆರಿಕ – ಇಸ್ರೇಲ್‌ ಜಂಟಿ ದಾಳಿಯಲ್ಲಿ ಇರಾನ್ ಸುಪ್ರೀಂ ಲೀಡರ್ ಅಯಾತೊಲ್ಲ ಅಲಿ ಖಮೇನಿ  ಸಾವಿನಪ್ಪಿರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ