Breaking News

ಬೆಂಗಳೂರಲ್ಲಿ IPL 2026 ಉದ್ಘಾಟನೆ – ಮಾ.28 ರಂದು ಮಧ್ಯರಾತ್ರಿವರೆಗೂ ಮೆಟ್ರೋ ಸೇವೆ ವಿಸ್ತರಣೆ

Spread the love

ಬೆಂಗಳೂರು: ಮಾರ್ಚ್ 28ರಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ  ಐಪಿಎಲ್ ಟಿ-20 (IPL T-20) ಕ್ರಿಕೆಟ್ ಪಂದ್ಯ ನಡೆಯುವ ಹಿನ್ನೆಲೆ ಆ ದಿನದಂದು ಮೆಟ್ರೋ  ಸೇವೆಯನ್ನು ವಿಸ್ತರಿಸಲಾಗಿದೆ ಎಂದು ಬಿಎಂಆರ್‌ಸಿಎಲ್  ತಿಳಿಸಿದೆ.

ಪಂದ್ಯದ ದಿನದಂದು, ಎಲ್ಲಾ ಟರ್ಮಿನಲ್ ನಿಲ್ದಾಣಗಳಿಂದ ಕೊನೆಯ ಮೆಟ್ರೋ ಸೇವೆಯನ್ನು ರಾತ್ರಿ 11 ಗಂಟೆಯಿಂದ ಮುಂದಿನ ದಿನ ಮುಂಜಾನೆ 2 ಗಂಟೆಯವರೆಗೆ ವಿಸ್ತರಿಸಲಾಗಿದೆ. ವೈಟ್ ಫೀಲ್ಡ್ನಿಂದ (ಕಾಡುಗೋಡಿ) ರಾತ್ರಿ 12:30ಕ್ಕೆ ಮತ್ತು ಚಲ್ಲಘಟ್ಟ ದಿಂದ ರಾತ್ರಿ 12:45ಕ್ಕೆ, ರೇಷ್ಮೆ ಸಂಸ್ಥೆ ಹಾಗೂ ಮಾದಾವರದಿಂದ ರಾತ್ರಿ 12:45ಕ್ಕೆ, ಬೊಮ್ಮಸಂದ್ರದಿಂದ ರಾತ್ರಿ 1 ಗಂಟೆಗೆ ಹಾಗೂ ಆರ್.ವಿ. ರಸ್ತೆಯಿಂದ ರಾತ್ರಿ 2 ಗಂಟೆಗೆ ಮೆಟ್ರೋ ರೈಲು ಹೊರಡಲಿದೆ. ಇನ್ನು ನಾಡಪ್ರಭು ಕೆಂಪೇಗೌಡ ನಿಲ್ದಾಣ- ಮೆಜೆಸ್ಟಿಕ್‌ನಿಂದ ನಾಲ್ಕು ದಿಕ್ಕುಗಳಿಗೆ ಮಧ್ಯರಾತ್ರಿ 1:30ಕ್ಕೆ ಕೊನೆಯ ರೈಲು ಹೊರಡಲಿದೆ.

ಮೆಟ್ರೋ ಪ್ರಯಾಣವನ್ನು ಇನ್ನಷ್ಟು ಸುಗಮಗೊಳಿಸಲು ಐಪಿಎಲ್ ಪಂದ್ಯದ ಟಿಕೆಟ್‌ಗಳಲ್ಲಿ ನಮ್ಮ ಮೆಟ್ರೋ ಕ್ಯೂಆರ್ ಕೋಡ್ ಎರಡು ಪ್ರಯಾಣಕ್ಕೆ (ಟು-ವೇ ಟ್ರಾವೆಲ್) ಐಪಿಎಲ್ ಟಿಕೆಟ್ ಮೇಲೆಯೇ ಮುದ್ರಿತವಾಗಿರುತ್ತದೆ ಅಥವ ಡಿಜಿಟಲ್ ಐಪಿಎಲ್ ಟಿಕೆಟ್‌ಗಳೊಂದಿಗೆ ಲಭ್ಯವಿರುತ್ತದೆ.

ಕಬ್ಬನ್ ರಸ್ತೆ ಭಾಗದಿಂದ ಸ್ಟೇಡಿಯಂಗೆ ಪ್ರವೇಶ/ನಿರ್ಗಮನ ಗೇಟ್‌ಗಳನ್ನು ಬಳಸುವ ಪ್ರೇಕ್ಷಕರು ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣವನ್ನು ಬಳಸುವಂತೆ ಹಾಗೂ ಲಿಂಕ್ ರಸ್ತೆ ಭಾಗದಿಂದ ಪ್ರವೇಶ/ನಿರ್ಗಮನ ಗೇಟ್‌ಗಳನ್ನು ಬಳಸುವ ಪ್ರೇಕ್ಷಕರು ಸಮೀಪದಲ್ಲಿರುವ ಮಹಾತ್ಮ ಗಾಂಧಿ ರಸ್ತೆ ಮೆಟ್ರೋ ನಿಲ್ದಾಣವನ್ನು ಬಳಸುವಂತೆ ಸೂಚಿಸಲಾಗಿದೆ.

ಪಂದ್ಯದ ದಿನದಂದು ಪ್ರೇಕ್ಷಕರಿಗೆ ಅನುಕೂಲವಾಗಲು ಮತ್ತು ನಮ್ಮ ಮೆಟ್ರೋದಲ್ಲಿ ಸುಗಮ ಪ್ರಯಾಣವನ್ನು ಖಚಿತಪಡಿಸಲು, ಬಿಎಂಆರ್‌ಸಿಎಲ್ ಅನೇಕ ಮೆಟ್ರೋ ನಿಲ್ದಾಣಗಳಲ್ಲಿ ಹೆಚ್ಚುವರಿ ಪಾರ್ಕಿಂಗ್ ವ್ಯವಸ್ಥೆಯನ್ನು ಮಾಡಿದೆ. ಪಂದ್ಯದ ದಿನಗಳಲ್ಲಿ ಮೆಟ್ರೋ ನಿಲ್ದಾಣಗಳ ಪಾರ್ಕಿಂಗ್ ಸೌಲಭ್ಯವನ್ನು ದ್ವಿಚಕ್ರ ವಾಹನಗಳಿಗೆ 30 ರೂ. ಮತ್ತು ಕಾರುಗಳಿಗೆ 60 ರೂ. ನಿಗದಿತ ದರದಲ್ಲಿ ಒದಗಿಸಲಾಗುತ್ತದೆ. ಈ ದರವು ಆ ದಿನದ ಮೆಟ್ರೋ ಸೇವೆ ಮುಕ್ತಾಯವಾಗುವವರೆಗೆ ಮಾತ್ರ ಮಾನ್ಯವಾಗಿರುತ್ತದೆ.

ಪ್ರೇಕ್ಷಕರು ತಮ್ಮ ವಾಹನಗಳನ್ನು ನಿಗದಿತ ಮೆಟ್ರೋ ನಿಲ್ದಾಣಗಳಲ್ಲಿ ಪಾರ್ಕ್ ಮಾಡಿ, ಮೆಟ್ರೋ ಮೂಲಕ ಸ್ಟೇಡಿಯಂಗೆ ನಡೆದು ಹೋಗಬಹುದಾದ ಅಂತರದಲ್ಲಿರುವ ಕಬ್ಬನ್ ಪಾರ್ಕ್ ಅಥವಾ ಮಹಾತ್ಮ ಗಾಂಧಿ ರಸ್ತೆ ಮೆಟ್ರೋ ನಿಲ್ದಾಣಗಳಿಗೆ ಪ್ರಯಾಣಿಸುವಂತೆ ಸಲಹೆ ನೀಡಲಾಗಿದೆ. ಇದರಿಂದ ಕೇಂದ್ರ ವ್ಯವಹಾರ ಪ್ರದೇಶ (ಸಿಬಿಡಿ) ಹಾಗೂ ಸ್ಟೇಡಿಯಂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಹನ ಸಂಚಾರ ದಟ್ಟಣೆ ಕಡಿಮೆಯಾಗಲು ಸಹಾಯವಾಗುತ್ತದೆ.

ಪ್ರಯಾಣಿಕರು ಸುಗಮ ಸಂಚಾರ, ಸುರಕ್ಷತೆ ಮತ್ತು ಜನಸಂದಣಿಯನ್ನು ತಪ್ಪಿಸಲು ಪೊಲೀಸ್, ಸ್ಟೇಡಿಯಂ ನಿರ್ವಹಣೆ ಮತ್ತು ಬಿಎಂಆರ್‌ಸಿಎಲ್ ಸಿಬ್ಬಂದಿಯ ನಿರ್ದೇಶನಗಳನ್ನು ಅನುಸರಿಸುವಂತೆ ಬಿಎಂಆರ್‌ಸಿಎಲ್ ಪ್ರಕಟಣೆಯಲ್ಲಿ ತಿಳಿಸಿದೆ.


Spread the love

About Laxminews 24x7

Check Also

ಹೈಕಮಾಂಡ್ ತೀರ್ಮಾನಿಸೋವರೆಗೂ ನಾನೇ ಸಿಎಂ: ಸಿದ್ದರಾಮಯ್ಯ

Spread the love ಬೆಂಗಳೂರು: ಹೈಕಮಾಂಡ್ ತೀರ್ಮಾನ ಮಾಡೋವರೆಗೂ ನಾನೇ ಮುಖ್ಯಮಂತ್ರಿ ಆಗಿರುತ್ತೇನೆ ಎಂದು ವಿಧಾನಸಭೆಯಲ್ಲಿ ಸಿಎಂ ಸಿದ್ದರಾಮಯ್ಯ  ಪುನರುಚ್ಚರಿಸಿದ್ದಾರೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ