ದಾವಣಗೆರೆ: ದಾಖಲೆಗಳಿಲ್ಲದೇ ಸಾಗಿಸುತ್ತಿದ್ದ 6.17 ಲಕ್ಷ ನಗದು ಹಣವನ್ನ ವಶಕ್ಕೆ ಪಡೆದಿರುವ ಘಟನೆ ದಾವಣಗೆರೆ ಜಿಲ್ಲೆಯಲ್ಲಿ ನಡೆದಿದೆ.
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆ ತಪಾಸಣೆ ನಡೆಸುತ್ತಿದ್ದ ವೇಳೆ ಕಾರಿಗನೂರ, ಮಾಗಾನಹಳ್ಳಿ ಹಾಗೂ ಭೂಮಿಕಾ ನಗರ ಚೆಕ್ ಪೋಸ್ಟ್‌ಗಳಲ್ಲಿ ಹಣ ಜಪ್ತಿ ಮಾಡಲಾಗಿದೆ.
ದಾವಣಗೆರೆ ನಗರದ ಭೂಮಿಕಾ ನಗರ ಚೆಕ್‌ಪೋಸ್ಟ್‌ನಲ್ಲಿ ಜಯನಗರದ ಪವನಕುಮಾರ ಅವರು 4 ಲಕ್ಷ ರೂ., ಕಾರಿಗನೂರ ಕ್ರಾಸ್ ಚೆಕ್ ಪೋಸ್ಟ್ ನಲ್ಲಿ ಕಾರಿಗನೂರಿನ ಪ್ರಕಾಶ ಮರುಳಸಿದ್ದ ಅವರು 1.15 ಲಕ್ಷ ರೂ. ಹಾಗೂ ಮಾಗಾನಹಳ್ಳಿ ಚೆಕ್ ಪೋಸ್ಟನಲ್ಲಿ ಚಿತ್ತಾನಹಳ್ಳಿ ಸೇಲ್ವಂ ಎಂಬುವರು 1.12 ಲಕ್ಷ ರೂಪಾಯಿ ಜಪ್ತಿ ಮಾಡಿದ್ದಾರೆ.
ಮೊದಲಿಗೆ ವಾಹನ ತಡೆದು ಹಣಕ್ಕೆ ದಾಖಲೆ ಕೇಳಿದ್ದಾರೆ. ಸೂಕ್ತ ದಾಖಲೆಗಳು ಸಿಗದ ಹಿನ್ನೆಲೆ ಹಣ ಜಪ್ತಿ ಮಾಡಲಾಗಿದೆ ಎಂದು ದಾವಣಗೆರೆ ದಕ್ಷಿಣ ಕ್ಷೇತ್ರದ ಚುನಾವಣಾ ಅಧಿಕಾರಿ ಸಂತೋಷ್ ಕುಮಾರ್ ಮಾಹಿತಿ ನೀಡಿದ್ದಾರೆ.
Laxmi News 24×7