Breaking News

ಮಹಿಳೆಗೆ ನರಕಯಾತನೆ : 12 ವರ್ಷ ಬಳಿಕ ವೈದ್ಯನ ಕರಾಳ ಮುಖ ಬಯಲು ಮಾಡಿದ ಪತ್ನಿ

Spread the love

ಮೈಸೂರು: ಪ್ರೀತಿಯ ನಾಟಕವಾಡಿ, ಆತ್ಮತ್ಯೆಯ ಬೆದರಿಕೆ ಹಾಕಿ, ಅಮಾಯಕ ಹೆಣ್ಮಕ್ಕಳ ಬದುಕನ್ನು ನರಕವಾಗಿಸ್ತಿದ್ದ ಕಾಮುಕ ವೈದ್ಯನ ಕರಾಳ ಮುಖವನ್ನು ಪತ್ನಿಯೇ ಬಟಾಬಯಲು ಮಾಡಿದ್ದಾರೆ. ಡಾ. ವಿನಯ್ ಕುಮಾರ್ ಎಸ್. ವಿರುದ್ಧ ಪತ್ನಿ ಯಶೋಧಾ (ಹೆಸರು ಬದಲಾಯಿಸಲಾಗಿದೆ) ಗಂಭೀರ ಆರೋಪಗಳನ್ನ ಮಾಡಿದ್ದಾರೆ.

ಕಳೆದ 12 ವರ್ಷಗಳಿಂದ ನೆನಪಿನ ಶಕ್ತಿಯೇ ಇಲ್ಲದೆ ‘ಜೀವಂತ ಶವ’ವಾಗಿ ಬದುಕಿದ್ದ ಸೀನಿಯರ್ ವೈದ್ಯೆ ಡಾ. ನಾಗಶ್ರೀ ನಿನ್ನೆ ಕೊನೆಯುಸಿರೆಳೆದಿದ್ದಾರೆ. ಬೆನ್ನಲ್ಲೇ ಈ ‘ಸೈಕೋ’ ವೈದ್ಯನ ಒಂದೊಂದೇ ಕ್ರೂರ ಕೃತ್ಯಗಳನ್ನ ಆತನ ಪತ್ನಿಯೇ ಬಾಯಿಬಿಟ್ಟಿದ್ದಾರೆ.
ಮೈಸೂರಿನ ಖಾಸಗಿ ಕಾಲೇಜಿನ ಆಯುರ್ವೇದ ವಿಭಾಗದಲ್ಲಿ ಪ್ರಾಕ್ಟೀಸ್ ಮಾಡುತ್ತಿದ್ದ ಡಾ. ನಾಗಶ್ರೀ ಅವರಿಗೆ ಅವರ ಜ್ಯೂನಿಯರ್ ಆಗಿದ್ದ ಡಾ. ವಿನಯ್ ಕುಮಾರ್ ಎಸ್. ಪರಿಚಯವಾಗಿದ್ದ. ನಾಗಶ್ರೀ ಅವರನ್ನು ಪ್ರೀತಿಯ ಹೆಸರಿನಲ್ಲಿ ನಂಬಿಸಿದ್ದ ವಿನಯ್, ಬಳಿಕ ವಯಸ್ಸಿನ ಕಾರಣ ನೀಡಿ ಮದುವೆಗೆ ಮನೆಯಲ್ಲಿ ಒಪ್ಪುವುದಿಲ್ಲ ಎಂದು ಆತ್ಮಹತ್ಯೆಯ ನಾಟಕವಾಡಿದ್ದನಂತೆ.

ಡಾ. ವಿನಯ್ ಕುಮಾರ್ ಕೇವಲ ನಾಗಶ್ರೀ ಅವರ ಜೀವನವನ್ನಷ್ಟೇ ಅಲ್ಲ, ಇನ್ನೂ ಹಲವು ಹೆಣ್ಣುಮಕ್ಕಳ ಬದುಕನ್ನು ನಾಶಪಡಿಸಿರೋದು ಆರೋಪಗಳಿಂದ ಬಹಿರಂಗವಾಗಿದೆ.


Spread the love

About Laxminews 24x7

Check Also

ಜೆಡಿಎಸ್‌ನಲ್ಲಿ ಇದ್ದೀನಿ, ಮುಂದೆಯೂ ಇರ್ತೀನಿ – ಕ್ಷೇತ್ರದಲ್ಲಿ ಭಾವನಾತ್ಮಕ ದಾಳ ಪ್ರಯೋಗಿಸಿದ ಜಿಟಿಡಿ

Spread the loveಮೈಸೂರು: ಮುಂದಿನ ಚುನಾವಣೆಯಲ್ಲಿ  ಜೆಡಿಎಸ್  ಪಕ್ಷದಿಂದಲೇ ನನ್ನ ಸ್ಪರ್ಧೆ ಎಂದು ಮೈಸೂರಿನ ಚಾಮುಂಡೇಶ್ವರಿ ಶಾಸಕ ಜಿ.ಟಿ.ದೇವೇಗೌಡ  ಸ್ಪಷ್ಟಪಡಿಸಿದ್ದಾರೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ