Breaking News

ಬಾಗಲಕೋಟೆ: ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಪರ ತೀವ್ರ ಪ್ರಚಾರ

Spread the love

ಬಾಗಲಕೋಟೆ : ನಗರದಲ್ಲಿ ಉಪಚುನಾವಣೆಯ ಹಿನ್ನಲೆಯಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಡಾ. ವೀರಣ್ಣ ಚರಂತಿಮಠ ಅವರ ಪರ ವಿವಿಧ ಪ್ರದೇಶಗಳಲ್ಲಿ ಬುಧವಾರ ಕಾರ್ಯಕರ್ತರಿಂದ ಪ್ರಚಾರ ನಡೆಯಿತು.
ನಗರದ ಕೌಲಪೇಟೆ ಪ್ರದೇಶದಲ್ಲಿರುವ ಶ್ರೀ ಆನಂದೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದ ಬಳಿಕ, ವೀರಣ್ಣ ಚರಂತಿಮಠ ಅವರು ಸ್ಥಳೀಯ ನಾಗರಿಕರು ಹಾಗೂ ಕಾರ್ಯಕರ್ತರನ್ನು ಭೇಟಿ ಮಾಡಿ ತಮ್ಮ ಪರ ಮತ ನೀಡುವಂತೆ ಮನವಿ ಮಾಡಿದರು.

ವಾರ್ಡ್ ಸಂಖ್ಯೆ 03ರ ಬೂತ್ ಸಂಖ್ಯೆ 167 ಸೇರಿದಂತೆ ವಾರ್ಡ್ ಸಂಖ್ಯೆ 8, 10 ಹಾಗೂ 14ರಲ್ಲಿ ಮನೆ ಮನೆಗೆ ತೆರಳಿ ಮತಯಾಚನೆ ನಡೆಸಿ, ಮತದಾರರ ಬೆಂಬಲ ಕೋರಿದರು. ಇದೇ ವೇಳೆ, ಬಾಗಲಕೋಟೆಯ ಸರ್ವತೋಮುಖ ಅಭಿವೃದ್ಧಿಯೇ ನಮ್ಮ ಗುರಿ ಎಂಬ ಸಂದೇಶದೊಂದಿಗೆ ನಗರದ ವಾಂಬೆ ಕಾಲೋನಿ ಪ್ರದೇಶದಲ್ಲಿ ಡಾ. ನವೀನ್ ವಿ. ಚರಂತಿಮಠ ಅವರ ನೇತೃತ್ವದಲ್ಲಿ ಪ್ರಚಾರ ನಡೆಯಿತು.
ನವನಗರದ 63ಎ ಸೆಕ್ಟರ್‌ನಲ್ಲಿ ನಡೆದ ಪ್ರಚಾರದಲ್ಲಿ ಚರಂತಿಮಠ ಅವರ ಕುಟುಂಬದ ರಾಜೇಶ್ವರಿ ಚರಂತಿಮಠ ಹಾಗೂ ಮಾಜಿ ಎಂಎಲ್ಸಿ ಎಂ.ಡಿ. ಲಕ್ಷ್ಮಿನಾರಾಯಣ್ ಭಾಗವಹಿಸಿ ಚರಂತಿಮಠ ಅವರಿಗೆ ಮತನೀಡಬೇಕು ಎಂದು ಬೆಂಬಲ ಸೂಚಿಸಿದರು.
ಅಭಿವೃದ್ಧಿ, ಜನಸೇವೆ ಮತ್ತು ಸಮಗ್ರ ಬೆಳವಣಿಗೆಗೆ ಆದ್ಯತೆ ನೀಡುವ ಭರವಸೆ ನೀಡಿರುವ ಚರಂತಿಮಠ ಅವರ ಪರ ಈ ಬಾರಿ ಬಿಜೆಪಿ ಗೆಲುವು ನಿಶ್ಚಿತ ಎಂಬ ವಿಶ್ವಾಸ ಕಾರ್ಯಕರ್ತರು ವ್ಯಕ್ತಪಡಿಸಿದ್ದಾರೆ.


Spread the love

About Laxminews 24x7

Check Also

ನೆಟ್ ಪರೀಕ್ಷೆ ಉತ್ತೀರ್ಣಕ್ಕೆ ಅಧ್ಯಯನ ಅವಶ್ಯ

Spread the loveಬಾಗಲಕೋಟೆ : ಸ್ಪರ್ಧಾತ್ಮಕ ಯುಗದಲ್ಲಿ ಉನ್ನತ ಶಿಕ್ಷಣ ಮತ್ತು ಉತ್ತಮ ಉದ್ಯೋಗ ಪಡೆಯಲು ಯುಜಿಸಿ ನೆಟ್ ಪರೀಕ್ಷೆಯು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ