Breaking News

ನಾಳೆಯಿಂದ ವಾರ್ಷಿಕ ವಿಶೇಷ ಶಿಬಿರ

Spread the love

ನಗರದ ಬಿವಿವಿ ಸಂಘದ ಬಸವೇಶ್ವರ ಕಲಾ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರವನ್ನು ದತ್ತು ಗ್ರಾಮ ಯಡಹಳ್ಳಿಯ ಶ್ರೀ ಗುರು ಅಜಾತ ನಾಗಲಿಂಗೇಶ್ವರ ಸಾಧುಮಠದಲ್ಲಿ ನಾಳೆಯಿಂದ ರಿಂದ ಏ.೧ ರವರೆಗೆ ಆಯೋಜಿಸಲಾಗಿದೆ.

೨೬ರ ಸಾಯಂಕಾಲ ೬:೩೦ಕ್ಕೆ ಶಿಬಿರದ ಉದ್ಘಾಟನಾ ಜರುಗಲಿದ್ದು, ಯಡಹಳ್ಳಿಯ ಶ್ರೀ ಗುರು ಅಜಾತ ನಾಗಲಿಂಗೇಶ್ವರ ಸಾಧು ಮಠದ ಶ್ರೀ ಬಸವಾನಂದ ಭಾರತಿ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿಲಿದ್ದು, ಬಿವಿವಿ ಸಂಘದ ಕಾಲೇಜುಗಳ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷರಾದ ಗುರುಬಸವ ಸೂಳಿಭಾವಿ ಅವರು ಉದ್ಘಾಟಕರಾಗಿ, ಕಾಲೇಜುಗಳ ಆಡಳಿತ ಮಂಡಳಿಯ ಪದನಿಮಿತ್ಯ ಕಾರ್ಯದರ್ಶಿಗಳಾದ ಡಾ. ಎಸ್.ಎಮ್. ಗಾಂವಕರ, ವಿದ್ಯಾಗಿರಿಯ ಬಿ.ಆಯ್.ಎಂ.ಎಸ್ ನಿರ್ದೇಶಕರಾದ ಪ್ರಕಾಶ್ ವಡವಡಗಿ, ಯಡಹಳ್ಳಿಯ ಹಿರಿಯ ಪತ್ರಕರ್ತರಾದ ಶಂಕರಲಿಂಗ ದೇಸಾಯಿ, ಕೆ.ಇ.ಬಿ ನೌಕರರಾದ ಬಸಯ್ಯಸ್ವಾಮಿ ಮಠಪತಿ ಮುಖ್ಯ ಅತಿಥಿ ಸ್ಥಾನ ವಹಿಸಲಿದ್ದು, ಮಹಾವಿದ್ಯಾಲಯದ ಪ್ರಾಚಾರ್ಯರಾದ ಎಸ್.ಆರ್.ಮೂಗೂನೂರಮಠ ಅಧ್ಯಕ್ಷ ಸ್ಥಾನ ವಹಿಸಲಿದ್ದಾರೆ. ಎಂದು ರಾಷ್ಟ್ರೀಯ ಸೇವಾ ಯೋಜನೆ ಘಟಕದ ಕಾರ್ಯಕ್ರಮ ಅಧಿಕಾರಿಗಳಾದ ಡಾ. ಎಂ.ಎಚ್.ವಡ್ಡರ, ಡಾ. ವಿರೂಪಾಕ್ಷ ಎನ್.ಬಿ, ಶಿಬಿರದ ಸಂಘಟಕರಾದ ಎನ್.ಆರ್.ಇಂಗಳಗಿ, ಎಂ.ಎಂ.ದೇವನಾಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love

About Laxminews 24x7

Check Also

ನೆಟ್ ಪರೀಕ್ಷೆ ಉತ್ತೀರ್ಣಕ್ಕೆ ಅಧ್ಯಯನ ಅವಶ್ಯ

Spread the loveಬಾಗಲಕೋಟೆ : ಸ್ಪರ್ಧಾತ್ಮಕ ಯುಗದಲ್ಲಿ ಉನ್ನತ ಶಿಕ್ಷಣ ಮತ್ತು ಉತ್ತಮ ಉದ್ಯೋಗ ಪಡೆಯಲು ಯುಜಿಸಿ ನೆಟ್ ಪರೀಕ್ಷೆಯು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ