Breaking News

ಕಾರು ಡ್ರಿಫ್ಟಿಂಗ್ ಕೇಸ್ – ವಿಚಾರಣೆ ಬಳಿಕ ರಿಕ್ಕಿ ರೈಯನ್ನ ಹಿಂಬಾಗಿಲಿನಿಂದ ಕಳುಹಿಸಿದ ಪೊಲೀಸರು

Spread the love

ಬೆಂಗಳೂರು: ಲ್ಯಾಂಬೋರ್ಗಿನಿ ಕಾರು ಡ್ರಿಫ್ಟಿಂಗ್  ಪ್ರಕರಣ ಸಂಬಂಧ ನೋಟಿಸ್ ಬೆನ್ನಲ್ಲೇ ಮಾಜಿ ಡಾನ್ ಮುತ್ತಪ್ಪ ರೈ ಮಗ ರಿಕ್ಕಿ ರೈ (Rikki Rai) ವಿಚಾರಣೆಗೆ ಹಾಜರಾಗಿದ್ದು, ವಿಚಾರಣೆ ಬಳಿಕ ಕಬ್ಬನ್ ಪಾರ್ಕ್ ಪೊಲೀಸರು ರಿಕ್ಕಿಯನ್ನು ಹಿಂಬಾಗಿಲಿನಿಂದ ಕಳುಹಿಸಿಕೊಟ್ಟಿದ್ದಾರೆ.

ಕಬ್ಬನ್ ಪಾರ್ಕ್ ಸಂಚಾರ ಪೊಲೀಸರ ಮುಂದೆ ವಕೀಲರ ಜೊತೆ ರಿಕ್ಕಿ ರೈ ವಿಚಾರಣೆಗೆ ಹಾಜರಾಗಿದ್ದರು. ವಿಚಾರಣೆ ಬಳಿಕ ರಿಕ್ಕಿ ರೈಯನ್ನ ಪೊಲೀಸರು ಹಿಂಬಾಗಿಲಿನಿಂದ ಕಳುಹಿಸಿಕೊಟ್ಟಿದ್ದಾರೆ. ಮಾಧ್ಯಮಗಳ ಕಣ್ಣುತಪ್ಪಿಸಿ ಕಬ್ಬನ್ ಪಾರ್ಕ್ ಸಂಚಾರ ಪೊಲೀಸ್ ಠಾಣೆಯಿಂದ ರಿಕ್ಕಿ ರೈ ತೆರಳಿದ್ದಾರೆ. ಮಾಧ್ಯಮಗಳಿಂದ ತಪ್ಪಿಸಿ ಹಿಂಬಾಗಿಲಿನಿಂದ ಕಳುಹಿಸಿಕೊಟ್ಟ ಪೊಲೀಸರ ಈ ನಡೆಯು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

Car Drifting Case Lamborghini

ಲ್ಯಾಂಬೋರ್ಗಿನಿ ಕಾರು ಡ್ರಿಫ್ಟಿಂಗ್ ಪ್ರಕರಣ ಸಂಬಂಧ 5ನೇ ಎಸಿಎಂಎಂ ಕೋರ್ಟ್ ರಿಕ್ಕಿ ರೈಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಬಿಎನ್‌ಎಸ್ 184 ಅಡಿ ಎಫ್‌ಐಆರ್ ದಾಖಲಾಗಿದ್ದ ಹಿನ್ನೆಲೆ ರಿಕ್ಕಿ ರೈ ನಿರೀಕ್ಷಣಾ ಜಾಮೀನು ಮೊರೆ ಹೋಗಿದ್ದರು. ಕೋರ್ಟ್‌ಗೆ ಖುದ್ದು ಹಾಜರಾಗಿ ರಿಕ್ಕಿ ರೈ ಜಾಮೀನು ಪಡೆದಿದ್ದಾರೆ. ತನಿಖೆಗೆ ಸಹಕರಿಸಲು ಸೂಚಿಸಿ ಬೇಲ್ ಮಂಜೂರು ಮಾಡಲಾಗಿದೆ. 1 ಲಕ್ಷ ರೂ. ಬಾಂಡ್, ಒಬ್ಬರ ಶ್ಯೂರಿಟಿ ಪಡೆದು ಜಾಮೀನು ನೀಡಲಾಗಿದೆ.

ಇನ್ನು ರಿಕ್ಕಿ ರೈ ಲ್ಯಾಂಬೋರ್ಗಿನಿ ಡ್ರಿಫ್ಟಿಂಗ್ ಪ್ರಕರಣ ಕುರಿತು ರಿಕ್ಕಿ ರೈ ಪರ ವಕೀಲ ನಾರಾಯಣ ಸ್ವಾಮಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ರಿಕ್ಕಿ ರೈ ಭಾರತಕ್ಕೆ ಬಂದ ಮರುದಿನ ಈ ಘಟನೆ ಆಗಿದೆ. ಕಾರಿನಲ್ಲಿ ಬ್ರೇಕ್ ತೊಂದರೆ ಆಗಿತ್ತು. ಆ ಕಾರಣದಿಂದ ಹಾಗಾಗಿದೆ. ಎಲ್ಲರೂ ಅದನ್ನೇ ಡ್ರಿಫ್ಟಿಂಗ್ ಅಂತಾರೆ. ಇದು ಅವರ ಡ್ರೈವರ್ ಮಾಡಿರೋದು, ರಿಕ್ಕಿ ರೈ ಯಾವುದೇ ತೊಂದರೆ ಮಾಡಿಲ್ಲ. ರಿಕ್ಕಿ ರೈ ಯಾವುದೇ ಕಾರು ಡ್ರಿಫ್ಟಿಂಗ್ ಮಾಡಿಲ್ಲ. ಯಾಕೆ ಅವರನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಗೊತ್ತಿಲ್ಲ. ಬ್ರೇಕ್ ಫೇಲ್ ಆಗಿ ಹೀಗಾಗಿದೆ. ಎಲ್ಲರೂ ಅದನ್ನು ಡ್ರಿಫ್ಟಿಂಗ್ ಎನ್ನುತ್ತಿದ್ದಾರೆ. ಅವರಿಗೆ ಆ ರೀತಿಯ ಯಾವುದೇ ಕ್ರೇಜ್ ಇಲ್ಲ ಎಂದಿದ್ದಾರೆ.


Spread the love

About Laxminews 24x7

Check Also

ರಾಜ್ಯದ 368 ನ್ಯಾಯಾಧೀಶರ ವರ್ಗಾವಣೆ! ವಿನಯ್ ಕುಲಕರ್ಣಿ ದೋಷಿ ಆದೇಶಿಸಿದ ಜಡ್ಜ್ ಕೂಡ ಟ್ರಾನ್ಸ್​ಫರ್​

Spread the loveಬೆಂಗಳೂರು: ಆಡಳಿತಾತ್ಮಕ ಉದ್ದೇಶಗಳಿಗಾಗಿ ರಾಜ್ಯದ್ಯಂತ 368 ನ್ಯಾಯಾಧೀಶರನ್ನು ವರ್ಗಾವಣೆ ಮಾಡಿ ಎಂದು ಹೈಕೋರ್ಟ್​ ಗುರುವಾರ (ಏ.16) ಆದೇಶ ಹೊರಡಿಸಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ