Breaking News

ಇಟ್ಟಿಗೆ ತುಂಬಿದ ಟ್ರ‍್ಯಾಕ್ಟರ್ -‌ ಟ್ರೇಲರ್ ಮಧ್ಯೆ ಸಿಲುಕಿ ಚಾಲಕ ದುರ್ಮರಣ

Spread the love

ಹಾವೇರಿ: ಇಟ್ಟಿಗೆ ತುಂಬಿದ ಟ್ರ‍್ಯಾಕ್ಟರ್  ಮತ್ತು ಟ್ರೇಲರ್ ನಡುವೆ ಸಿಲುಕಿ ಚಾಲಕ  ಸಾವನ್ನಪ್ಪಿರುವ ಘಟನೆ ಹಾವೇರಿ  ತಾಲೂಕಿನ ಮರೋಳ ಗ್ರಾಮದಲ್ಲಿ ನಡೆದಿದೆ.

ಹಾವೇರಿ ತಾಲೂಕಿನ ಗುತ್ತಲ ತಾಂಡಾದ ನಿವಾಸಿ ದೇವರಾಜ್ ಲಮಾಣಿ (26) ಮೃತ ಚಾಲಕ. ದೇವರಾಜ್ ಬೆಳಗ್ಗೆ ಎರಡೂವರೆ ಸಾವಿರ ಇಟ್ಟಿಗೆ ತುಂಬಿಕೊಂಡು ಮರೋಳ ಗ್ರಾಮಕ್ಕೆ ಬಂದಿದ್ದ. ಈ ವೇಳೆ ಏಕಾಏಕಿ ಟ್ರ‍್ಯಾಕ್ಟರ್‌ನ ಎಂಜಿನ್ ಮೇಲೆ ಎದ್ದು ನಡುವಲ್ಲಿ ಸಿಲುಕಿ ಸಾವನ್ನಪ್ಪಿದ್ದಾನೆ.

ಘಟನಾ ಸ್ಥಳಕ್ಕೆ ಗುತ್ತಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ಗುತ್ತಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

About Laxminews 24x7

Check Also

ಶಿಕ್ಷಿಸುವುದಕ್ಕಿಂತ ಸರಿಯಾದ ದಾರಿಗೆ ತರೋದೇ ನಮ್ಮ ಧರ್ಮ: ನಿಂದಿಸಿದ ಮಕ್ಕಳನ್ನು ಕ್ಷಮಿಸಿದ ಮೋದಿ

Spread the loveನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಘಟನೆ ಮತ್ತು ತಮ್ಮ ಹಾಗೂ ತಮ್ಮ ದಿವಂಗತ ತಾಯಿಯವರ ವಿರುದ್ಧ ವ್ಯಕ್ತವಾದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ