Breaking News

ಬೆಳಗಾವಿ ಲೋಕಸಭಾ ಕ್ಷೇತ್ರದ 28 ಶಾಲೆಗಳು ಕೇಂದ್ರದ ‘ಪಿಎಂ-ಶ್ರೀ’ ಯೋಜನೆಗೆ ಆಯ್ಕೆ – ಸಂಸದ ಈರಣ್ಣ ಕಡಾಡಿ

Spread the love

ಮೂಡಲಗಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ‘ಪಿಎಂ-ಶ್ರೀ’ ಯೋಜನೆಯಡಿ ಬೆಳಗಾವಿ ಲೋಕಸಭಾ ಕ್ಷೇತ್ರದ 21 ಪ್ರಾಥಮಿಕ, 6 ಪ್ರೌಢ ಶಾಲೆಗಳು ಮತ್ತು 1 ಪದವಿ ಪೂರ್ವ ಸರ್ಕಾರಿ ಶಾಲೆಗಳನ್ನು ಅತ್ಯಾಧುನಿಕ ಹಾಗೂ ಮಾದರಿ ಶಾಲೆಗಳನ್ನಾಗಿ ಅಭಿವೃದ್ಧಿಪಡಿಸಲು ಕೇಂದ್ರ ಶಿಕ್ಷಣ ಸಚಿವಾಲಯವು ಆಯ್ಕೆ ಮಾಡಿದೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರು ತಿಳಿಸಿದ್ದಾರೆ.

ನವದೆಹಲಿಯಲ್ಲಿ ನಡೆಯುತ್ತಿರುವ ಸಂಸತ್ತಿನ ಬಜೆಟ್‌ ಅಧಿವೇಶನದಲ್ಲಿ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಪಿಎಂ-ಶ್ರೀ’ ಯೋಜನೆಯ ಅನುಷ್ಠಾನದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಶಿಕ್ಷಣ ಸಚಿವಾಲಯದ ರಾಜ್ಯ ಸಚಿವ ಜಯಂತ್ ಚೌಧರಿ ಅವರು ಮೂಡಲಗಿ ತಾಲೂಕಿನ ಕಲ್ಲೋಳಿ, ಪಟಗುಂದಿ ಹಾಗೂ ಅರಳಿಮಟ್ಟಿ, ಗೋಕಾಕ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು, ಬೆನಚಿನಮರಡಿ ಹಾಗೂ ಕೊಣ್ಣುರ, ಸವದತ್ತಿ ತಾಲೂಕಿನ ಮರಕುಂಬಿ, ಆಲದಕಟ್ಟಿ, ಹಿರೇಕುಂಬಿ, ಹೂಲಿ, ಶಿರಸಂಗಿ, ಮುನವಳ್ಳಿ, ಮುಗಳಿಹಾಳ, ಯಡ್ರಾಂವಿ, ಬೈಲಹೊಂಗಲ ಇಂದಿರಾನಗರ, ಬೆಳವಡಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಬೈಲಹೊಂಗಲ ಹಾಗೂ ಬೆಳಗಾವಿ ತಾಲೂಕಿನ ಖಾನಗಾಂವ್ ಬಿ.ಕೆ., ಗುಲಗಂಜಿಕೊಪ್ಪ, ಮಚ್ಛೆ, ಉಚಗಾಂವ್, ಬಾಳೆಕುಂದ್ರಿ ಬಿ.ಕೆ. ಸಾಂಬ್ರಾ, ಮುತಗಾ ಮತ್ತು ಕರ್ನಾಟಕ ಪಬ್ಲಿಕ್ ಸ್ಕೂಲ್ , ವಡಗಾಂವ್ ಈ ಗ್ರಾಮಗಳ ಶಾಲೆಗಳು ಆಯ್ಕೆಯಾಗಿವೆ.

ಈಗಾಗಲೇ 6 ಸ್ಮಾರ್ಟ್ ಕ್ಲಾಸ್‌ರೂಮ್ ನಿರ್ಮಾಣಕ್ಕೆ 30.00 ಲಕ್ಷ ರೂ.ಗಳ ಅನುದಾನ ಮಂಜೂರಾಗಿದೆ. 3 ಸುಸಜ್ಜಿತ ವಿಜ್ಞಾನ ಪ್ರಯೋಗಾಲಯಗಳ ಸ್ಥಾಪನೆಗಾಗಿ 52.80 ಲಕ್ಷ ರೂ.ಗಳ ಅನುದಾನ ನೀಡಲಾಗಿದೆ. 11 ಪ್ರಾಥಮಿಕ ಶಾಲಾ ಗ್ರಂಥಾಲಯಗಳ ಅಭಿವೃದ್ಧಿಗಾಗಿ 52.80 ಲಕ್ಷ ರೂ.ಗಳ ಅನುದಾನ ನೀಡಲಾಗಿದೆ. 6 ಶಾಲೆಗಳಲ್ಲಿ ಸೌರಶಕ್ತಿ ಅಳವಡಿಕೆಗಾಗಿ 29.52 ಲಕ್ಷ ರೂ.ಗಳ ಬಿಡುಗಡೆ ಮಾಡಲಾಗಿದೆ.

ಮಳೆನೀರು ಕೊಯ್ಲು, ತ್ಯಾಜ್ಯ ವಿಲೇವಾರಿ ಘಟಕ ಹಾಗೂ ಪ್ಲಾಸ್ಟಿಕ್ ಮುಕ್ತ ಆವರಣ ನಿರ್ಮಾಣದ ಮೂಲಕ ಇವುಗಳನ್ನು ‘ಹಸಿರು ಶಾಲೆ’ಗಳನ್ನಾಗಿ ಪರಿವರ್ತಿಸಲಾಗುವುದು. ಈ ಶಾಲೆಗಳಲ್ಲಿ ಕೇವಲ ಪಠ್ಯವಲ್ಲದೆ, ಆಟೋಮೋಟಿವ್, ಎಲೆಕ್ಟ್ರಾನಿಕ್ಸ್ ಹಾಗೂ ಐಟಿ ನಂತಹ ವೃತ್ತಿಪರ ಕೋರ್ಸ್‌ಗಳನ್ನು ಆರಂಭಿಸುವ ಮೂಲಕ ವಿದ್ಯಾರ್ಥಿಗಳ ಕೌಶಲ್ಯ ವೃದ್ಧಿಗೆ ಒತ್ತು ನೀಡಲಾಗಿದೆ. “ರಾಷ್ಟ್ರೀಯ ಶಿಕ್ಷಣ ನೀತಿ 2020 ರ ಅನ್ವಯ ಈ ಶಾಲೆಗಳನ್ನು ಜಿಲ್ಲೆಯ ‘ಎಕ್ಸಲೆನ್ಸ್ ಸೆಂಟರಗಳಾಗಿ ಬೆಳೆಸಲಾಗುವುದು. ಈ ಶಾಲೆಗಳು ಆಧುನಿಕ ತಂತ್ರಜ್ಞಾನದ ಜೊತೆಗೆ ಗುಣಮಟ್ಟದ ಶಿಕ್ಷಣ ನೀಡಿ, ಸುತ್ತಮುತ್ತಲಿನ ಗ್ರಾಮೀಣ ಭಾಗದ ಶಾಲೆಗಳಿಗೆ ದಾರಿ ದೀಪವಾಗಲಿವೆ” ಎಂದು ಸಚಿವರು ಮಾಹಿತಿ ನೀಡಿದ್ದಾರೆಂದು ಸಂಸದ ಈರಣ್ಣ ಕಡಾಡಿ ಅವರು ತಿಳಿಸಿದ್ದಾರೆ.


Spread the love

About Laxminews 24x7

Check Also

ಹೊಟೇಲ್ ಗಳಲ್ಲಿ ಅನಧಿಕೃತವಾಗಿ ಗೃಹ ಬಳಕೆ ಗ್ಯಾಸ್ ಉಪಯೋಗ; 15 ಕ್ಕೂ ಹೆಚ್ಚು ಸಿಲಿಂಡರ್ ವಶಕ್ಕೆ

Spread the loveಹೊಟೇಲ್ ಗಳಲ್ಲಿ ಅನಧಿಕೃತವಾಗಿ ಗೃಹ ಬಳಕೆ ಗ್ಯಾಸ್ ಉಪಯೋಗ ಮಾಡ್ತಿದ್ದ ಹೊಟೇಲ್ ಮಾಲೀಕರಿಗೆ ಆಹಾರ ಇಲಾಖೆ ಅಧಿಕಾರಿಗಳು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ