Breaking News

ಹುಬ್ಬಳ್ಳಿ | ಫ್ಲೈವುಡ್‌ ಕೆಲಸದ ವೇಳೆ ಕೆಮಿಕಲ್ ರಿಯಾಕ್ಷನ್ – ನಾಲ್ವರು ಕಾರ್ಮಿಕರು ಅಸ್ವಸ್ಥ

Spread the love

ಹುಬ್ಬಳ್ಳಿ: ಬಿಲ್ಡಿಂಗ್‌ ಒಂದರ ಫ್ಲೈವುಡ್‌ ಕೆಲಸದ ವೇಳೆ ಕೆಮಿಕಲ್ ರಿಯಾಕ್ಷನ್ ಆಗಿ ನಾಲ್ವರು ಕಾರ್ಮಿಕರು ಅಸ್ವಸ್ಥರಾದ ಘಟನೆ ಹುಬ್ಬಳ್ಳಿ  ದೇಶಪಾಂಡೆ ನಗರದಲ್ಲಿ ನಡೆದಿದೆ.

ಅಸ್ವಸ್ಥಗೊಂಡ ಕಾರ್ಮಿಕರನ್ನು ಬೆಂಗಳೂರು ಮೂಲದ ಜಾಫರ್, ಅಹ್ಮದ್, ಜಬಿ ಮತ್ತು ಹೈದರ್ ಎಂದು ಗುರುತಿಸಲಾಗಿದೆ. ಬಿಲ್ಡಿಂಗ್ ಒಂದರಲ್ಲಿ ಫ್ಲೈ ವುಡ್ ಕೆಲಸ ನಡೆಯುತ್ತಿತ್ತು. ಅಲ್ಲಿ ಸಾಕಷ್ಟು ಕೆಮಿಕಲ್ ಬಳಕೆ ಮಾಡಲಾಗಿತ್ತು. ಕೆಲಸ ಮುಗಿದ ಬಳಿಕ ಸುಸ್ತಾಗಿದ್ದ ಕಾರ್ಮಿಕರು, ತಡರಾತ್ರಿ ಸಂಪೂರ್ಣ ಬಾಗಿಲು, ಕಿಟಕಿ ಬಂದ್ ಮಾಡಿ ಮಲಗಿದ್ದರು.

ಇದರಿಂದ ಉಸಿರಾಟದ ಸಮಸ್ಯೆ ಉಂಟಾಗಿ ನಾಲ್ವರು ಕಾರ್ಮಿಕರು ಪ್ರಜ್ಞೆ ಕಳೆದುಕೊಂಡಿದ್ದರು. ಅಲ್ಲದೇ ಬಾಯಲ್ಲಿ ನೊರೆ, ರಾತ್ರಿ ಮಾಡಿದ್ದ ಊಟ ವಾಂತಿ ರೂಪದಲ್ಲಿ ಹೊರ ಬಂದಿತ್ತು. ಅಸ್ವಸ್ಥ ಕಾರ್ಮಿಕರನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.


Spread the love

About Laxminews 24x7

Check Also

ಹುಬ್ಬಳ್ಳಿ ನೇಹಾ ಹಿರೇಮಠ ಹತ್ಯೆ ಕೇಸ್​: ಹಂತಕ ಫಯಾಜ್​​ಗೆ ಮತ್ತೆ ಜೈಲೇ ಗತಿ

Spread the loveಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸದಸ್ಯ ನಿರಂಜನ ಹಿರೇಮಠ ಅವರ ಪುತ್ರಿ, ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ