Breaking News

ಬೆಳಗಾವಿ ಅಬಕಾರಿ ಪೊಲೀಸರ ಕಾರ್ಯಾಚರಣೆ: ಗೋವಾ ಮದ್ಯ ವಶ

Spread the love

ಬೆಳಗಾವಿ: ಹೋಳಿ ಹಬ್ಬದ ಹಿನ್ನೆಯಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಮದ್ಯ ಮಾರಾಟ ನಿಷೇದ ಮಾಡಲಾಗಿತ್ತು. ಇದರಲ ಲಾಭ ಮಾಡೆಯಲು ಗೋವಾ ರಾಜ್ಯದ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಅಬಕಾರಿ ಇಲಾಖೆಯ ಪೊಲೀಸ್ ರು ಬಂಧಿಸಿದ್ದಾರೆ.

ಅಬಕಾರಿ ಪೊಲೀಸರು ದಾಳಿ ಮಾಡಿ ತಾಲೂಕಿನ ಮುತ್ನಾಳ ಗ್ರಾಮದ ಅರುಣ ರಾಜು ವಾಘಮೋರೆ (21) ಎಂಬಾತನನ್ನು ಬಂಧಿಸಿದ್ದಾರೆ. ಆರೋಪಿ ಹಬ್ಬದಲ್ಲಿ ಭರ್ಜರಿ ವ್ಯಾಪಾರ ಮಾಡಬೇಕೆಂಬ ಉದ್ದೇಶದಿಂದ ಮುತ್ನಾಳ ಗ್ರಾಮದ ಹೊರವಲಯದ ಶೆಡ್ ನಲ್ಲಿ ಗೋವಾ ರಾಜ್ಯದ ವಿವಿಧ ನಮೂನೆಯ ಮದ್ಯ ಹಾಗೂ ಬೀಯರ ಬಾಕ್ಸಗಳನ್ನು ಸಂಗ್ರಹಿಸಿಟ್ಟಿದ್ದ ಅಬಕಾರಿ ಇಲಾಖೆಯ ಪೊಲೀಸ್ ರು ತಾಲೂಕಿನ ಹಲಗಾ ಗ್ರಾಮದ ವ್ಯಾಪ್ತಿಯಲ್ಲಿ ಗಸ್ತು ಕಾರ್ಯ ನಡೆಸುತ್ತಿರುವಾಗ ಹಿರೇಬಾಗೇವಾಡಿಯ ಮುತ್ನಾಳ ಗ್ರಾಮದ ರಾಷ್ಟ್ರೀಯ ಹೆದ್ದಾರಿ 4ರ ಬಳಿಯ ತಗಡಿನ ಶೆಡನಲ್ಲಿ ಆರೋಪಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿಯನ್ನು ಆಧರಿಸಿ ದಾಳಿ ನಡೆಸಿದ್ದಾರೆ.

ಬೆಳಗಾವಿ ಅಬಕಾರಿ ಪೊಲೀಸ್ ರು ಬಂಧಿತನಿಂದ 377500 ರೂ. ಮೌಲ್ಯದ 553.96.ಲೀ ಗೋವಾ ಮದ್ಯ ಹಾಗೂ 23.400.ಲೀ ಬೀಯರನ್ನು ಜಪ್ಪುಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಅಬಕಾರಿ ಉಪ ಅಧೀಕ್ಷಕರು, ರವಿ ಎಂ.ಮುರಗೋಡ ಅವರ ನೇತೃತ್ವದಲ್ಲಿ ಅಬಕಾರಿ ನಿರೀಕ್ಷಕರಾದ ದುಂಡಪ್ಪಾ ಹಕ್ಕಿ, ಸಿಬ್ಬಂದಿ ಸುನೀಲ ಪಾಟೀಲ ಕಾರ್ಯಾಚರಣೆ ನಡೆಸಿ ಈ ಅಕ್ರಮ ಮದ್ಯ ಮಾರಾಟ ಪ್ರಕರಣವನ್ನು ಪತ್ತೆ ಮಾಡಿದ್ದಾರೆ.


Spread the love

About Laxminews 24x7

Check Also

ಬೆಟಗೇರಿ ಕೃಷ್ಣ್ಣಶರ್ಮರು ಮಾತೃ ಹೃದಯದ ಆಶ್ರಯದಲ್ಲಿ ಬೆಳೆದವರು

Spread the love ಬೆಳಗಾವಿ: ಡಾ.ಬೆಟಗೇರಿ ಕೃಷ್ಣ್ಣಶರ್ಮರು ಮಾತೃ ಹೃದಯದ ಆಶ್ರಯದಲ್ಲಿ ಬೆಳೆದವರು. ಹೀಗಾಗಿ, ಅವರ ಕೃತಿಗಳಲ್ಲಿ ಸ್ತ್ರೀತ್ವದ ಅಂಶಗಳು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ