Breaking News

ಇರಾನ್‌ ಸರ್ವೋಚ್ಛ ನಾಯಕ ಖಮೇನಿ ಹತ್ಯೆ – ಟ್ರಂಪ್‌ ಘೋಷಣೆ ಬೆನ್ನಲ್ಲೇ ಖಚಿತಪಡಿಸಿದ ಇರಾನ್‌

Spread the love

ವಾಷಿಂಗ್ಟನ್: ಇರಾನ್ ಸರ್ವೋಚ್ಛ ನಾಯಕ ಅಯಾತೊಲ್ಲ ಅಲಿ ಖಮೇನಿ ಅವರನ್ನ ಹತ್ಯೆ ಮಾಡಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಘೋಷಿಸಿದ ಕೆಲವೇ ಗಂಟೆಗಳಲ್ಲಿ ಇರಾನ್‌ ಮಾಧ್ಯಮ ಕೂಡ ಹತ್ಯೆಯನ್ನ ದೃಢಪಡಿಸಿದೆ.

ಇಸ್ಲಾಮಿಕ್ ಗಣರಾಜ್ಯದ ಮೇಲೆ ಅಮೆರಿಕ-ಇಸ್ರೇಲಿ ನಡೆಸಿದ ಜಂಟಿ ದಾಳಿಯಲ್ಲಿ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಸಾವನ್ನಪ್ಪಿದ್ದಾರೆ ಎಂದು ಇರಾನ್ ಸ್ಟೇಟ್ಸ್‌ ಮೀಡಿಯಾ ಖಚಿತಪಡಿಸಿದೆ. ಈ ಬೆಳವಣಿಗೆ ಬಳಿಕ ಇರಾನ್‌ ದೇಶಾದ್ಯಂತ 40 ದಿನಗಳ ಶೋಕಾಚರಣೆ ಘೋಷಿಸಿದೆ.

ಟ್ರಂಪ್‌ ಘೋಷಣೆ ಏನು?
ಖಮೇನಿ ಎಂಬ ಇತಿಹಾಸದ ಅತ್ಯಂತ ಕ್ರೂರ ವ್ಯಕ್ತಿಗಳಲ್ಲಿ ಒಬ್ಬ ಹತನಾಗಿದ್ದಾನೆ ಎಂದು ಟ್ರಂಪ್ ತನ್ನ ಸೋಷಿಯಲ್‌ ಮೀಡಿಯಾ ವೇದಿಕೆ ʻಟ್ರುತ್‌ ಸೋಶಿಯಲ್ʼನಲ್ಲಿ ಬರೆದುಕೊಂಡಿದ್ದರು. ಇದು ಕೇವಲ ಇರಾನ್ ಜನರಿಗೆ ಸಂದ ಜಯ ಮಾತ್ರವಲ್ಲ, ಖಮೇನಿ ಮತ್ತು ಆತನ ರಕ್ತಪಿಪಾಸು ಗೂಂಡಾ ಪಡೆಯಿಂದ ಹತರಾದ ಅಥವಾ ಅಂಗವೈಕಲ್ಯಕ್ಕೊಳಗಾದ ಶ್ರೇಷ್ಠ ಅಮೆರಿಕನ್ನರಿಗೆ ಹಾಗೂ ವಿಶ್ವದ ವಿವಿಧ ದೇಶಗಳ ಜನರಿಗೆ ಸಿಕ್ಕ ನ್ಯಾಯ ಎಂದು ಹೇಳಿದಗದರು.

ನಮ್ಮ ಗುಪ್ತಚರ ಮತ್ತು ಅತ್ಯಾಧುನಿಕ ಟ್ರ್ಯಾಕಿಂಗ್ ವ್ಯವಸ್ಥೆಗಳಿಂದ ತಪ್ಪಿಸಿಕೊಳ್ಳಲು ಆತನಿಗೆ ಸಾಧ್ಯವಾಗಲಿಲ್ಲ. ಇಸ್ರೇಲ್ ಜೊತೆ ನಿಕಟವಾಗಿ ಕಾರ್ಯನಿರ್ವಹಿಸಿದ ನಮಗೆ, ಆತನಾಗಲಿ ಅಥವಾ ಆತನ ಜೊತೆಗೆ ಹತರಾದ ಇತರ ನಾಯಕರಾಗಲಿ ಏನೂ ಮಾಡಲು ಸಾಧ್ಯವಾಗಲಿಲ್ಲ. ಇರಾನ್ ಜನರಿಗೆ ತಮ್ಮ ದೇಶವನ್ನು ಮರಳಿ ಪಡೆಯಲು ಇದು ಅತ್ಯುತ್ತಮ ಅವಕಾಶ. ಇರಾನ್‌ನ ಐಆರ್‌ಜಿಸಿ, ಸೇನೆ, ಇತರ ಭದ್ರತಾ ಹಾಗೂ ಪೊಲೀಸ್ ಪಡೆಗಳು ಇನ್ನು ಮುಂದೆ ಹೋರಾಟ ನಡೆಸಲು ಇಚ್ಛಿಸುತ್ತಿಲ್ಲ. ಅವರು ನಮ್ಮ ದಾಳಿಯಿಂದ ರಕ್ಷಣೆಯನ್ನಷ್ಟೇ ಬಯಸುತ್ತಿದ್ದಾರೆ ಎಂಬ ಮಾಹಿತಿ ನಮಗೆ ಲಭ್ಯವಾಗುತ್ತಿದೆ ಎಂದು ತಿಳಿಸಿದ್ದಾರೆ.

ಕೇವಲ ಒಂದೇ ದಿನದಲ್ಲಿ ಇರಾನ್‌ ದೇಶವು ಬಹಳಷ್ಟು ನಾಶವಾಗಿದೆ. ಆದಾಗ್ಯೂ, ಮಧ್ಯಪ್ರಾಚ್ಯದಲ್ಲಿ ಮತ್ತು ಇಡೀ ವಿಶ್ವದಲ್ಲಿ ಶಾಂತಿ ಸ್ಥಾಪಿಸುವ ನಮ್ಮ ಗುರಿ ಸಾಧಿಸುವವರೆಗೆ, ನಿಖರ ಮತ್ತು ದೊಡ್ಡ ಬಾಂಬ್ ದಾಳಿಗಳು ಅಗತ್ಯವಿರುವಷ್ಟು ಕಾಲ ಅಡೆತಡೆಯಿಲ್ಲದೆ ಮುಂದುವರಿಯುತ್ತದೆ ಎಂದೂ ಟ್ರಂಪ್‌ ಹೇಳಿದ್ದಾರೆ.


Spread the love

About Laxminews 24x7

Check Also

ಚೀನಾ, ಪಾಕ್‌, ಬಾಂಗ್ಲಾಗೆ ಹೋಲಿಸಿದ್ರೆ ಭಾರತಕ್ಕೆ ಈಗ ಕಡಿಮೆ ಸುಂಕ

Spread the love ನವದೆಹಲಿ: ಯುರೋಪಿಯನ್‌ ಒಕ್ಕೂಟದ ಜೊತೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ  ಸಹಿ ಬಿದ್ದ ಬೆನ್ನಲ್ಲೇ ಅಮೆರಿಕ  ಭಾರತದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ