Breaking News

ಸಚಿವ ಬೈರತಿ ಸುರೇಶ್ ಕಚೇರಿಯಲ್ಲಿ ಚಿನ್ನ, ಹಣದ ಬ್ಯಾಗ್‌ ನಾಪತ್ತೆ ಕೇಸ್‌ – ತನಿಖೆಗೆ ಪರಂ ಆದೇಶ

Spread the love

ಬೆಂಗಳೂರು: ವಿಧಾನಸೌಧದಲ್ಲಿ ಸಚಿವ ಬೈರತಿ ಸುರೇಶ್  ಕಚೇರಿಯಲ್ಲಿ ಚಿನ್ನ, ಹಣದ ಬ್ಯಾಗ್‌ ನಾಪತ್ತೆ ಆರೋಪ ಪ್ರಕರಣದ ಬಗ್ಗೆ ಖುದ್ದು ಗೃಹ ಸಚಿವ ಪರಮೇಶ್ವರ್ ಆತಂಕ ವ್ಯಕ್ತಪಡಿಸಿದ್ರು.

ಬೆಂಗಳೂರಿನಲ್ಲಿ ಮಾತಾಡಿದ ಅವರು, ಈ ಪ್ರಕರಣದಲ್ಲಿ ಜಂಟಿ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ತನಿಖೆಗೆ ಆದೇಶ ಮಾಡಲಾಗಿದೆ ಎಂದು ತಿಳಿಸಿದರು.

ವಿಧಾನಸೌಧದ ಗೇಟ್ ನಿಂದ ಆ ಬ್ಯಾಗ್ ಹೇಗೆ ಒಳಗೆ ಹೋಯ್ತು? ಯಾವ ಗೇಟ್ ನಿಂದ ಒಳಗೆ ಹೋಯ್ತು ಅನ್ನೋದು ಮುಖ್ಯ. ಒಬ್ಬ ಸಚಿವರ ಕೊಠಡಿವರೆಗೆ ಆ ಬ್ಯಾಗ್ ಹೋಗುತ್ತೆ ಅಂದ್ರೆ, ಅದೂ ಯಾರಿಗೂ ಗೊತ್ತಾಗದೇ ಬ್ಯಾಗ್ ತಗೊಂಡ್ ಹೋಗಿದ್ದಾರೆ. ಅದನ್ನೆಲ್ಲ ಪತ್ತೆ ಮಾಡಲು ಜಂಟಿ ಪೊಲೀಸ್ ಆಯುಕ್ತರಿಗೆ ಸೂಚನೆ ಕೊಟ್ಟಿದ್ದೇವೆ. ಕಳವು ಆಗಿರೋದು 2ನೇ ವಿಚಾರ. ಆದ್ರೆ ಆ ಬ್ಯಾಗ್ ಹೇಗೆ ಒಳಗೆ ತಂದ್ರು ಅನ್ನೋದು ನೋಡಬೇಕು. ನವೀನ್ ಅನ್ನೋ ವ್ಯಕ್ತಿ ವಿಧಾನಸೌಧದ ಒಳಗೆ ಬ್ಯಾಗ್ ತಗೊಂಡ್ ಹೋಗಿರೋದು. ಇದರ ತನಿಖೆ ಮಾಡ್ತೇವೆ ಅಂದರು.

ದುರಂಧರ್ ಸ್ಟೈಲ್‌ನಲ್ಲಿ ಡಾನ್ಸ್ ಮಾಡಿದ ʻಕೈʼ ಮುಖಂಡ
ಇನ್ನೂ ಕಲಬುರಗಿಯಲ್ಲಿ ಗನ್ ಹಿಡಿದು ʻದುರಂಧರ್ʼ ಚಿತ್ರದ ಸ್ಟೈಲ್‌ನಲ್ಲಿ ಡಾನ್ಸ್ ಮಾಡಿದ ಕಾಂಗ್ರೆಸ್ ಮುಖಂಡ ಮತೀನ್ ಪಟೇಲ್‌ ವಿರುದ್ಧ ಕ್ರಮ ಕೈಗೊಳ್ಳೋದಾಗಿ ಗೃಹ ಸಚಿವ ಪರಮೇಶ್ವರ್ ಹೇಳಿದ್ರು.

ಯಾರೇ ಇದ್ರೂ ಕಾನೂನಿಗೆ ವಿರುದ್ಧವಾಗಿ ಚಟುವಟಿಕೆ ಮಾಡಿದ್ರೆ ಕ್ರಮ ತಗೋತೇವೆ.‌ ಅವರು ಯಾವ ಪಕ್ಷದವ್ರು ಅನ್ನೋದು ಆಮೇಲೆ.‌ ಕಾನೂನು ಕ್ರಮ ತಗೊಂಡೇ ತಗೊಳ್ತೇವೆ. ಅವರು ಯಾರಿಗೇ ಆಪ್ತರಿದ್ರೂ ಯಾರೂ ಕಾನೂನಿಗೆ ವಿರುದ್ಧವಾಗಿ ನಡೆದುಕೊಳ್ಳಿ ಅಂತ ಆಪ್ತರು ಹೇಳಲ್ಲ. ಕಾನೂನಿನಲ್ಲಿ ಏನು ಕ್ರಮ ಇದೆಯೋ ಅದರಂತೆ ಪೊಲೀಸರು ಕ್ರಮ ತಗೋತಾರೆ ಅಂತ ಹೇಳಿದ್ರು.

ಇನ್ನು ಬೈರತಿ ಬಸವರಾಜು  ತಲೆಮರೆಸಿಕೊಂಡಿರುವ ವಿಚಾರ ಬಗ್ಗೆ ಮಾತಾಡಿ, ಅವರಾಗಿ ಅವರೇ ಬಂದು ಸರೆಂಡರ್‌ ಆದ್ರೆ ಒಳ್ಳೇದು. ಇಲ್ಲಾಂದ್ರೆ ಪೊಲೀಸರು ಅವರನ್ನು ಹುಡುಕ್ತಾರೆ ಅಂತ ಪರಮೇಶ್ವರ್ ತಿಳಿಸಿದ್ರು.


Spread the love

About Laxminews 24x7

Check Also

ನೈಟ್‌ ಔಟ್‌ ವೇಳೆ ಬೈಕ್‌ಗೆ ಲಾರಿ ಡಿಕ್ಕಿ – ಮೂವರು ಇಂಜಿನಿಯರಿಂಗ್ ವಿದ್ಯಾರ್ಥಿಗಳು ಸಾವು

Spread the loveನೆಲಮಂಗಲ: ಬಿರಿಯಾನಿ ತಿನ್ನಲು ಹೋಗ್ತಿದ್ದಾಗ ಬೈಕ್‌ಗೆ ಲಾರಿ ಡಿಕ್ಕಿಯಾಗಿ ಮೂವರು ಇಂಜಿನಿಯರಿಂಗ್ ವಿದ್ಯಾರ್ಥಿಗಳು ಸಾವನಪ್ಪಿರುವ ಘಟನೆ ನೆಲಮಂಗಲ-ಹಾಸನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ