ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದಲ್ಲಿ ಜನಸಾಗರವೇ ಹರಿದುಬಂದಿದೆ. ವಾಲ್ಮೀಕಿ ಜಾತ್ರೆಯನ್ನು ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರೆ, ಸಚಿವ ಸತೀಶ್ ಜಾರಕಿಹೊಳಿ ಅವರು ಸಮುದಾಯದ ಜನರಿಗೆ ‘ನಿವೇಶನ’ ನೀಡುವ ಬಂಪರ್ ಆಫರ್ ಘೋಷಿಸಿದ್ದಾರೆ.
ರಾಜನಹಳ್ಳಿ ಶ್ರೀ ವಾಲ್ಮೀಕಿ ಗುರುಪೀಠ ಆಯೋಜಿಸಿದ್ದ “ಶ್ರೀ ಮಹರ್ಷಿ ವಾಲ್ಮೀಕಿ ಜಾತ್ರೆ-2026 ಮತ್ತು ಜನ ಜಾಗೃತಿ ಜಾಥಾ ಮಹೋತ್ಸವ”ವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು ಬಿಜೆಪಿವರು 4 ವರ್ಷದ ಅಧಿಕಾರದಲ್ಲಿದ್ದರೂ ಸಹ ಎಸ್.ಸಿ.ಪಿ-ಟಿ.ಎಸ್.ಪಿ ಅನುದಾನವನ್ನು ಸದುಪಯೋಗಪಡಿಸಿಕೊಂಡಿಲ್ಲ. ಆದರೇ 1 ಲಕ್ಷ 17 ಸಾವಿರ ಕೋಟಿ 4 ವರ್ಷದಲ್ಲಿ ಬಳಸಿದ್ದಾರೆ. ನಾವೂ 1 ಲಕ್ಷ 10 ಸಾವಿರ ಕೋಟಿ ಹಣವನ್ನು ಈಗಾಗಲೇ ಎಸ್.ಸಿ-ಎಸ್.ಟಿ ಜನರ ಏಳ್ಗೆಗೆ ಖರ್ಚು ಮಾಡಿದ್ದೇವೆ. ದೇಶದ ಆಂಧ್ರ ಮತ್ತು ಕೇರಳದ ಬಳಿಕ ಕರ್ನಾಟಕದಲ್ಲೇ ಹೊಸ ಕಾನೂನನ್ನು ಜಾರಿ ಮಾಡಿದ್ದೇವೆ. ಮೊಸಳೆ ಕಣ್ಣೀರು ಸುರಿಸುವ ಬಿಜೆಪಿಯವರು ಬಡ್ತಿಯಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರಿ ಯಾಕೆ ಕಾಯ್ದೆ ಜಾರಿ ಮಾಡಿಲ್ಲ ಎಂದು ಪ್ರಶ್ನಿಸಿದರು. ಗುತ್ತಿಗೆಯಲ್ಲಿಯೂ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರಿಗೆ 1 ಕೋಟಿಯ ಮೀಸಲಾತಿಯನ್ನು ನಿಗದಿ ಪಡಿಸಿದ್ದೇವೆ. ಜನರು ಯಾವ ಸರ್ಕಾರ ಜನಪರವಾಗಿದೆ ಎಂಬುದನ್ನು ತಿಳಿದುಕೊಳ್ಳಬೇಕೆಂದರು.
ಇನ್ನು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು, ಪರಿಶಿಷ್ಟ ಜಾತಿ(ಎಸ್ಟಿ) ಹಾಗೂ ಪರಿಶಿಷ್ಟ ಪಂಗಡ (ಎಸ್ಸಿ) ಸಮುದಾಯದವರಿಗೆ ಈವರೆಗೆ ಭೂಮಿ ನೀಡಲಾಗುತ್ತಿತ್ತು. ಇದೀಗ ಸೈಟ್ ಸಹ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಲಾಗಿದೆ. ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿಯಲ್ಲಿ ನಡೆದ ವಾಲ್ಮೀಕಿ ಜಾತ್ರೆ ಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಸತೀಶ್ ಜಾರಕಿಹೊಳಿ, ಸಮಾಜ ಕಲ್ಯಾಣೆ ಇಲಾಖೆಯಿಂದ ಎಸ್ಸಿ ಎಸ್ಟಿ ಸಮುದಾಯವರಿಗೆ ವಿಶೇಷ ಅನುದಾನ ನೀಡಿದ್ದು, ಭೂಮಿ ಖರೀದಿ ಮಾಡಿ ಸೈಟ್ ನೀಡಲು ಹಣ ಕೊಟ್ಟಿದ್ದಾರೆ. ಇದಕ್ಕೆ ಮುಖ್ಯಮಂತ್ರಿ ಅನುಮೋದನೆ ನೀಡಬೇಕಿದೆ. ಒಂದು ವೇಳೆ ಸಿಎಂ ಅನುಮೋದನೆ ಕೊಟ್ಟರೆ ಸಮುದಾಯದ ಜನರಿಗೆ 30 40 ಸೈಟ್ ನೀಡಲಾಗುವುದು ಎಂದು ಘೋಷಣೆ ಮಾಡಿದರು.
Laxmi News 24×7