ಬೆಳಗಾವಿ : ಬೆಳಗಾವಿ ತಾಲೂಕಿನ ಬೋಡಕೆನಟ್ಟಿ ಗ್ರಾಮದಲ್ಲಿ ಸಿಗರೇಟ್ ವಿಚಾರಕ್ಕೆ ನಾಲ್ವರು ಯುವಕರು ಅಂಗಡಿ ಮಾಲೀಕನನ್ನು ಥಳಿಸಿರುವುದರಿಂದ ಗಂಭೀರವಾಗಿ ಗಾಯಗೊಂಡ ಅಂಗಡಿ ಮಾಲೀಕ ಸಾವನ್ನಪ್ಪಿರುವ ಘಟನೆ ನಡೆದಿದೆ.
ಬೊಡಕೆನಟ್ಟಿ ಗ್ರಾಮದ ಯಲ್ಲಪ್ಪ ದುರ್ಗಪ್ಪ ನಾಯಿಕ (48) ಕೊಲೆಯಾದ ವ್ಯಕ್ತಿ. ಕಡೋಲಿ ಗ್ರಾಮದ ಪ್ರಜ್ವಲ್ ರಾಮಚಂದ್ರ ಪಾಟೀಲ್ (22) ನಿಖಿಲ್ ಮಹೇಶ್ ಚೌಗಲೆ (22) ವಿವೇಕ್ ರಾಜೇಂದ್ರ ಚೌಗುಲೆ (22) ಮತ್ತು ಶ್ರೀಧರ್ ರತನ ಪಾಟಿಲ್ (21) ಹಲ್ಲೆ ಮಾಡಿದ ಆರೋಪಿಗಳು.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ನಿನ್ನೆ ರಾತ್ರಿ ವೇಳೆ ಮೋಹನಗಾ ಜಾತ್ರೆ ಮುಗಿಸಿ ಬರುತ್ತಿದ್ದ ಈ ನಾಲ್ವರು ಮಧ್ಯದ ಅಮಲಿನಲ್ಲಿ ಮಧ್ಯರಾತ್ರಿ ಸಿಗರೇಟ್ ಸೇದೋದಕ್ಕಾಗಿ ಬೋಡಕೆನಟ್ಟಿ ಗ್ರಾಮದಲ್ಲಿ ಬೈಕ್ ನಿಲ್ಲಿಸಿದ್ದಾರೆ.
Laxmi News 24×7