Breaking News

ಚೀನಾ, ಪಾಕ್‌, ಬಾಂಗ್ಲಾಗೆ ಹೋಲಿಸಿದ್ರೆ ಭಾರತಕ್ಕೆ ಈಗ ಕಡಿಮೆ ಸುಂಕ

Spread the love

ನವದೆಹಲಿ: ಯುರೋಪಿಯನ್‌ ಒಕ್ಕೂಟದ ಜೊತೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ  ಸಹಿ ಬಿದ್ದ ಬೆನ್ನಲ್ಲೇ ಅಮೆರಿಕ  ಭಾರತದ ಮೇಲೆ ವಿಧಿಸಿದ್ದ ಸುಂಕವನ್ನು ಕಡಿತ ಮಾಡಿದೆ.

ಟ್ರಂಪ್‌ ಅಧಿಕಾರಕ್ಕೆ ಏರಿದ ಬಳಿಕ ಪ್ರತಿ ತೆರಿಗೆ, ರಷ್ಯಾದಿಂದ ಕಚ್ಚಾ ತೈಲವನ್ನು ಆಮದು ಮಾಡುತ್ತಿರುವುದಾಗಿ ಪ್ರತಿಯಾಗಿ 25% ದಂಡ ಸೇರಿದಂತೆ ಭಾರತದ ವಸ್ತುಗಳಿಗೆ ಅಮೆರಿಕ 50% ಸುಂಕವನ್ನು ವಿಧಿಸಿತ್ತು. ಈ ಟ್ರಂಪ್‌ 18% ಮಾತ್ರ ತೆರಿಗೆ ವಿಧಿಸುವುದಾಗಿ ಹೇಳಿದ್ದಾರೆ.

ಟ್ರಂಪ್‌ ನಿರ್ಧಾರದಿಂದ ಚೀನಾ, ಪಾಕಿಸ್ತಾನ, ಬಾಂಗ್ಲಾದೇಶ, ಮಲೇಷ್ಯಾಕ್ಕೆ ಹೋಲಿಸಿದರೆ ಭಾರತದ ಮೇಲೆ ಕಡಿಮೆ ತೆರಿಗೆ ಬಿದ್ದಿದೆ.

ಹೆಚ್ಚಿನ ಸುಂಕ ಯಾವ ದೇಶಕ್ಕೆ
ಚೀನಾ: 37%
ಬ್ರೆಜಿಲ್: 50%
ದಕ್ಷಿಣ ಆಫ್ರಿಕಾ: 30%
ಮ್ಯಾನ್ಮಾರ್: 40%
ಲಾವೋಸ್: 40%

ಕಡಿಮೆ ಸುಂಕ ಯಾವ ದೇಶಕ್ಕೆ?
ಯುರೋಪಿಯನ್ ಯೂನಿಯನ್: 15%
ಜಪಾನ್: 15%
ದಕ್ಷಿಣ ಕೊರಿಯಾ: 15%
ಸ್ವಿಟ್ಜರ್ಲೆಂಡ್: 15%
ಯುನೈಟೆಡ್ ಕಿಂಗ್‌ಡಮ್: 10%

ಆಗ್ನೇಯ ಏಷ್ಯಾದಲ್ಲಿ ಯಾರಿಗೆ ಎಷ್ಟು?
ಬಾಂಗ್ಲಾದೇಶ: 20%
ವಿಯೆಟ್ನಾಂ: 20%
ಮಲೇಷ್ಯಾ: 19%
ಕಾಂಬೋಡಿಯಾ: 19%
ಥೈಲ್ಯಾಂಡ್: 19%
ಪಾಕಿಸ್ತಾನ: 19%

ಟ್ರಂಪ್ ಹಾಕಿದ್ದ ಸುಂಕಗಳು ಯಾವುದು?
10% ಮೂಲ ಸುಂಕ: ಏಪ್ರಿಲ್ 2025 ರಿಂದ ಬಹುತೇಕ ಎಲ್ಲಾ ಅಮೆರಿಕದ ಆಮದುಗಳಿಗೆ ಅನ್ವಯಿಸಲಾದ ಸಾಮಾನ್ಯ ಸುಂಕ.
15% ಪ್ರತಿ ಸುಂಕ: ಅಮೆರಿಕ ಉತ್ಪನ್ನಗಳ ಮೇಲೆ ಭಾರತವು ತನ್ನದೇ ಆದ ಹೆಚ್ಚಿನ ಸುಂಕ ಹಾಕಿದ್ದಕ್ಕೆ ವಿಧಿಸಿದ ಸುಂಕ.
25% ದಂಡ ಸುಂಕ: ಆಗಸ್ಟ್ 27, 2025 ರಂದು ಹೆಚ್ಚುವರಿ ಸುಂಕವನ್ನು ಹಾಕಲಾಗುತ್ತಿದೆ. ನಿರ್ದಿಷ್ಟವಾಗಿ ರಷ್ಯಾದ ತೈಲ ಆಮದುಗಳನ್ನು ನಿಲ್ಲಿಸಲು ಭಾರತ ನಿರಾಕರಿಸಿದ್ದಕ್ಕೆ ದಂಡದ ರೂಪದಲ್ಲಿ ಹಾಕಲಾಗುತ್ತಿದೆ. ಹೀಗಾಗಿ ಒಟ್ಟು 50% ಸುಂಕವನ್ನು ಅಮೆರಿಕ ಭಾರತದ ಕೆಲ ವಸ್ತುಗಳಿಗೆ ವಿಧಿಸಿತ್ತು.


Spread the love

About Laxminews 24x7

Check Also

ಇಂದು ಐತಿಹಾಸಿಕ ಭಾರತ-ಯುರೋಪ್ ಒಕ್ಕೂಟ ಮುಕ್ತ ವ್ಯಾಪಾರ ಒಪ್ಪಂದ

Spread the love ನವದೆಹಲಿ: ಭಾರತ ಮತ್ತು ಯುರೋಪಿಯನ್ ಒಕ್ಕೂಟ (EU) ಇಂದು ಐತಿಹಾಸಿಕ, ಮೆಗಾ ಮುಕ್ತ-ವ್ಯಾಪಾರ ಒಪ್ಪಂದವನ್ನು (FTA) …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ