Breaking News

ಉದ್ಯಮಿ ಸಿಜೆ ರಾಯ್ ಮೊಬೈಲ್‌ನಲ್ಲಿದ್ಯಾ ಡೆತ್ ಸೀಕ್ರೆಟ್ – ರಿಕವರಿಗಾಗಿ ಸಿಐಡಿ ಸೈಬರ್ ಸೆಲ್‌ಗೆ ರವಾನೆ

Spread the love

ಬೆಂಗಳೂರು: ಉದ್ಯಮಿ ಸಿಜೆ ರಾಯ್  ಆತ್ಮಹತ್ಯೆಗೂ ಮುನ್ನ ಯಾರ ಜೊತೆಯಾದ್ರೂ ಮಾತನಾಡಿದ್ರಾ? ಅಥವಾ ಯಾರಿಗಾದರೂ ಮೆಸೇಜ್ ಕಳುಹಿಸಿದ್ರಾ? ಎಂದು ಪೊಲೀಸರು ಪರಿಶೀಲನೆ ನಡೆಸುತ್ತಿದ್ದು, ಮೊಬೈಲ್‌ನ್ನು ಸಿಐಟಿ ಸೈಬರ್ ಸೆಲ್‌ಗೆ ರಿಕವರಿಗಾಗಿ ಕಳುಹಿಸಿದ್ದಾರೆ.

ಕಾನ್ಫಿಡೆಂಟ್ ಗ್ರೂಪ್ ಮ್ಯಾನೇಜಿಂಗ್ ಡೈರೆಕ್ಟರ್ ದೂರಿನಲ್ಲಿ ತಿಳಿಸಿರುವಂತೆ ಆತ್ಮಹತ್ಯೆಗೂ ಮುನ್ನ ತಾಯಿ ಜೊತೆ ಮಾತನಾಡಬೇಕೆಂದು ರಾಯ್ ತಿಳಿಸಿದ್ದರು. ಜೊತೆಗೆ ಗನ್‌ಮ್ಯಾನ್ ಬಳಿ ಯಾರಿಗೂ ಒಳಗೆ ಬಿಡದಂತೆ ಹೇಳಿದ್ದರು. ಅದರಂತೆ ಆತ್ಮಹತ್ಯೆಗೂ ಮುನ್ನ ನಿಜಕ್ಕೂ ತಾಯಿ ಜೊತೆಗೆ ಮಾತನಾಡಿದ್ರಾ? ಅಥವಾ ಬೇರೆ ಇನ್ಯಾರ ಜೊತೆಯಾದ್ರೂ ಮಾತನಾಡಿದ್ರಾ? ಅಥವಾ ಮೆಸೇಜ್ ಕಳಿಸದ್ದಾರಾ? ಎಂಬ ಕೆಲ ಅನುಮಾನಗಳು ವ್ಯಕ್ತವಾಗಿದ್ದು, ಐಫೋನ್ ಮತ್ತು ಆ್ಯಂಡ್ರಾಯ್ಡ್ ಫೋನ್‌ಗಳನ್ನು ಪೊಲೀಸರ ವಶಕ್ಕೆ ಪಡೆದು, ಸಿಐಡಿಗೆ ರವಾನಿಸಿದ್ದಾರೆ.

ಎರಡು ಫೋನ್‌ಗೆ ಪಾಸ್‌ವಾರ್ಡ್ ಇರುವ ಕಾರಣ ಕೋರ್ಟ್ ಅನುಮತಿ ಪಡೆದು ಎಫ್‌ಎಸ್‌ಎಲ್‌ಗೆ ರವಾನೆ ಮಾಡಬೇಕು. ಹೀಗಾಗಿ ಸದ್ಯ ಸಿಐಡಿ ಸೈಬರ್ ಸೆಲ್‌ಗೆ ಮೊಬೈಲ್‌ನ್ನು ರವಾನೆ ಮಾಡಿದ್ದು, ಮೊಬೈಲ್‌ನಲ್ಲಿ ಇರುವ ಮಾಹಿತಿ ರಿಕವರಿ ಮಾಡಲಿದ್ದಾರೆ.

ಇನ್ನೂ ನಿನ್ನೆ (ಜ.31) ರಾತ್ರಿ ಕಾನ್ಫಿಡೆಂಟ್ ಕಚೇರಿಯಲ್ಲಿದ್ದ ರಾಯ್ ಅವರ ಡೈರಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಡೈರಿಯಲ್ಲಿ ಕೆಲ ನಟಿಯರು, ಮಾಡೆಲ್ ಹಾಗೂ ರಾಜಕಾರಣಿಗಳ ಹೆಸರುಗಳು ಪತ್ತೆಯಾಗಿದ್ದು, ಯಾವ ಕಾರಣಕ್ಕಾಗಿ ಬರೆದಿದ್ದಾರೆ. ಬರೀ ಈವೆಂಟ್ ವಿಚಾರಕ್ಕಾ? ಅಥವಾ ಬೇರೆ ವಿಷಯಾ ಇದೆಯಾ? ಎಂದು ಪೊಲೀಸರು ಇಂಚಿಂಚೂ ತನಿಖೆ ನಡೆಸುತ್ತಿದ್ದಾರೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ