Breaking News

2 ದಿನಗಳ ಗದ್ದಲಕ್ಕೆ ತೆರೆ ಎಳೆದ ಸಭಾಪತಿ: ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಬಗ್ಗೆ ಚರ್ಚೆ ಆರಂಭ

Spread the love

ಬೆಂಗಳೂರು: ಟೀಕಿಸುವ ಭರದಲ್ಲಿ ಅಸಂವಿಧಾನಿಕ ಹೇಳಿಕೆ ನೀಡಿದ್ದ ಸಂಬಂಧ ಕಾಂಗ್ರೆಸ್​ನ ವಿಧಾನಪರಿಷತ್​ ಸದಸ್ಯ ಬಿ.ಕೆ.ಹರಿಪ್ರಸಾದ್ ಅವರನ್ನು ಸದನದಿಂದ ಅಮಾನತು ಮಾಡಬೇಕೆಂಬ ಪ್ರತಿಪಕ್ಷದ ಒತ್ತಾಯಕ್ಕೆ ಸಭಾಪತಿ ಬಸವರಾಜ ಹೊರಟ್ಟಿ ಅವರು ರೂಲಿಂಗ್ ನೀಡುವ ಮೂಲಕ ಎರಡು ದಿನಗಳಿಂದ ನಡೆಯುತ್ತಿದ್ದ ಗದ್ದಲಕ್ಕೆ ತೆರೆ ಎಳೆದಿದ್ದಾರೆ.CHAIRMAN BASAVARAJ HORATTI

ಇಂದು ಸದನ ಆರಂಭವಾಗುತ್ತಿದ್ದಂತೆ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಆಕ್ಷೇಪಾರ್ಹ ಹೇಳಿಕೆ ನೀಡುವ ಮೂಲಕ ನಮ್ಮನ್ನು ನಿಂದಿಸಿರುವ ಹರಿಪ್ರಸಾದ್ ಅವರು ಕ್ಷಮೆಯಾಚಿಸಬೇಕೆಂಬುದು ನಮ್ಮ‌ ಒತ್ತಾಯವಾಗಿದೆ. ಹೀಗಾಗಿ, ಅವರನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿದರು.

ಈ ವೇಳೆ ಮಾತನಾಡಿದ ಹೊರಟ್ಟಿ, ಸದನದಲ್ಲಿ ಕೆಲ ಘಟನೆ ನಡೆದಿದೆ‌. ಈ ಬಗ್ಗೆ ಸರ್ಕಾರ ವಿಷಾದ ವ್ಯಕ್ತಪಡಿಸಿದೆ‌.‌ ಈ ಬಗ್ಗೆ ಇನ್ನು ಯಾರೂ ಮಾತನಾಡಬಾರದು ಎಂದು ರೂಲಿಂಗ್ ನೀಡಿದರು.

ಬಿಜೆಪಿ ಸದಸ್ಯ ಹೆಚ್.ವಿಶ್ವನಾಥ್ ಮಾತನಾಡಿ, ಮಾತಿನ ಭರದಲ್ಲಿ ಕೆಲ ಪದಗಳು ಬಳಕೆಯಾಗಿವೆ. ಇದನ್ನು ಮುಂದುವರೆಸುವುದು ಸರಿಯಲ್ಲ. ಈ ಹಿಂದೆ ಗುಂಡೂರಾವ್ ಮೂಖ್ಯಮಂತ್ರಿ ಆಗಿದ್ದಾಗ ಸಿ.ಎಂ.ಇಬ್ರಾಹಿಂ ಅವರು ದೇವರಾಜು ಅರಸು ಬಗ್ಗೆ ಕೆಟ್ಟದಾಗಿ ಮಾತನಾಡಿದ್ದರು. ಇಡೀ ಸದನ ಅದನ್ನು ಒಪ್ಪಿರಲಿಲ್ಲ. ಹೀಗಾಗಿ, ಇದನ್ನು ಇಲ್ಲಿಗೇ ಬಿಟ್ಟು ಬಿಡಿ ಎಂದು ಮನವಿ ಮಾಡಿದರು.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ