Breaking News

ಸಕ್ಕರೆ ಸಾಗಣೆಯಲ್ಲಿ ವಂಚಿಸಿದ್ದ ಆರೋಪಿಗಳ ಬಂಧನ; 11.50 ಲಕ್ಷ ಮೌಲ್ಯದ ವಸ್ತು ವಶ ನಿರಾಣಿ ಕಾರ್ಖಾನೆ ಸಕ್ಕರೆ ಮಾರಾಟ ಮಾಡಿ ವಂಚನೆ

Spread the love

ಸಕ್ಕರೆ ಸಾಗಣೆಯಲ್ಲಿ ವಂಚಿಸಿದ್ದ ಆರೋಪಿಗಳ ಬಂಧನ; 11.50 ಲಕ್ಷ ಮೌಲ್ಯದ ವಸ್ತು ವಶ
ನಿರಾಣಿ ಕಾರ್ಖಾನೆ ಸಕ್ಕರೆ ಮಾರಾಟ ಮಾಡಿ ವಂಚನೆMay be an image of car and text
ಮುಧೋಳ ಪೊಲೀಸರ ಭರ್ಜರಿ ಕಾರ್ಯಾಚರಣೆಯಿಂದ ಯಶಸ್ಸು
ಬಾಗಲಕೋಟೆ ಜಿಲ್ಲೆಯ ಮುಧೋಳದ ನಿರಾಣಿ ಸಕ್ಕರೆ ಕಾರ್ಖಾನೆಯಿಂದ ಗುಜರಾತ್‌ನ ಅಹಮದಾಬಾದ್‌ಗೆ ಸಾಗಿಸಬೇಕಿದ್ದ ಸಕ್ಕರೆಯನ್ನು ಹಾದಿ ಮಧ್ಯದಲ್ಲೇ ಮಾರಾಟ ಮಾಡಿ ವಂಚಿಸಿದ್ದ ಪ್ರಕರಣವನ್ನು ಮುಧೋಳ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಸದ್ಯ ಪೊಲೀಸರು ಆರೋಪಿಗಳಿಂದ 9 ಲಕ್ಷ ರೂಪಾಯಿ ನಗದು ಹಾಗೂ ಕೃತ್ಯಕ್ಕೆ ಬಳಸಲಾದ ಕಾರನ್ನು ವಶಪಡಿಸಿಕೊಂಡಿದ್ದಾರೆ.May be an image of one or more people and text
2025ರ ನವೆಂಬರ್‌ನಲ್ಲಿ ಮಹೇಶ ಪಾಟೀಲ್‌ ಎಂಬುವವರು ನೀಡಿದ್ದ ದೂರಿನನ್ವಯ ತನಿಖೆ ಕೈಗೊಂಡಿದ್ದ ವಿಶೇಷ ಪೊಲೀಸ್ ತಂಡವು, ಜನವರಿ 15ರಂದು ಜೀರಗಾಳ ಬೈಪಾಸ್ ಬಳಿ ಇಬ್ಬರು ಆರೋಪಿಗಳನ್ನು ಬಂಧಿಸಿದೆ.
ಆರೋಪಿಗಳು 50 ಕೆ.ಜಿಯ 620 ಸಕ್ಕರೆ ಚೀಲಗಳನ್ನು ಲಾರಿಯಲ್ಲಿ ಸಾಗಿಸುವ ನೆಪದಲ್ಲಿ ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದ ವಿವಿಧೆಡೆ ಕಾನೂನುಬಾಹಿರವಾಗಿ ಮಾರಾಟ ಮಾಡಿರುವುದು ತನಿಖೆಯಲ್ಲಿ ದೃಢಪಟ್ಟಿದೆ.
ಬಂಧಿತ ಆರೋಪಿಗಳು ಸಕ್ಕರೆ ಮಾರಾಟದಿಂದ ಬಂದ ಸುಮಾರು 12.50 ಲಕ್ಷ ರೂಪಾಯಿ ಹಣದಲ್ಲಿ 2.50 ಲಕ್ಷ ರೂಪಾಯಿ ನೀಡಿ ಕಾರೊಂದನ್ನು ಖರೀದಿಸಿರುವುದಾಗಿ ಒಪ್ಪಿಕೊಂಡಿದ್ದಾರೆ.
ಉಳಿದ ಹಣದಲ್ಲಿ ಒಂದಷ್ಟು ಮೊತ್ತವನ್ನು ವೈಯಕ್ತಿಕ ಖರ್ಚಿಗೆ ಬಳಸಿಕೊಂಡಿದ್ದು, ಸದ್ಯ ಪೊಲೀಸರು ಆರೋಪಿಗಳಿಂದ 9 ಲಕ್ಷ ರೂಪಾಯಿ ನಗದು ಹಾಗೂ ಕೃತ್ಯಕ್ಕೆ ಬಳಸಲಾದ ಕಾರನ್ನು ವಶಪಡಿಸಿಕೊಂಡಿದ್ದಾರೆ. ಸಕ್ಕರೆ ಕಾರ್ಖಾನೆಯ ನಂಬಿಕೆಗೆ ದ್ರೋಹ ಬಗೆದು ಲಕ್ಷಾಂತರ ರೂಪಾಯಿ ವಂಚಿಸಿದ ಖದೀಮರನ್ನು ಜೈಲಿಗಟ್ಟುವಲ್ಲಿ ಮುಧೋಳ ಪೊಲೀಸರು ಯಶಸ್ವಿಯಾಗಿದ್ದಾರೆ.

Spread the love

About Laxminews 24x7

Check Also

ರೈತನ ಮಗಳ ಸಾಧನೆ, ಪಿಯು ಸೈನ್ಸ್ ಶೇ. 97.66 ಅಂಕ: ಪುತ್ರಿ ಸಾಧನೆಗೆ ತಂದೆ-ತಾಯಿ ಹರ್ಷ

Spread the loveರೈತನ ಮಗಳ ಸಾಧನೆ, ಪಿಯು ಸೈನ್ಸ್ ಶೇ. 97.66 ಅಂಕ: ಪುತ್ರಿ ಸಾಧನೆಗೆ ತಂದೆ-ತಾಯಿ ಹರ್ಷ ಬೆಳಗಾವಿ: …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ