Breaking News

ಮಾಹೇಶ್ವರಿ ಅಂಧ ಮಕ್ಕಳ ಶಾಲೆಯಲ್ಲಿ ಲೂಯಿ ಬ್ರೈಲ್ ಅವರ 217ನೇ ಜನ್ಮದಿನಾಚರಣೆ

Spread the love

ಮಾಹೇಶ್ವರಿ ಅಂಧ ಮಕ್ಕಳ ಶಾಲೆಯಲ್ಲಿ ಲೂಯಿ ಬ್ರೈಲ್ ಅವರ 217ನೇ ಜನ್ಮದಿನಾಚರಣೆ
ವೈಯಕ್ತಿಕ ಬದುಕಿಗಿಂತ ಸಮಾಜಕ್ಕಾಗಿ ದುಡಿದು ಮಹಾತ್ಮರೆನಿಸಿಕೊಂಡವರು “ ಲೂಯಿ ಬ್ರೈಲ್”; ರಮೇಶ್ ಸಂಕರೆಡ್ಡಿ
ವೈಯಕ್ತಿಕ ಬದುಕಿಗಿಂತ ಸಮಾಜಕ್ಕಾಗಿ ದುಡಿದವರು ಕೇಲವೇ ಕೆಲವು ಮಹಾತ್ಮಾರಿದ್ದಾರೆ. ಅವರಲ್ಲಿ ಲೂಯಿ ಬ್ರೈಲ್ ಅವರು ಸಮಾಜದ ಕಲ್ಯಾಣಕ್ಕಾಗಿ ತಮ್ಮ ಜೀವವನ್ನೇ ಮುಡಿಪಾಗಿಟ್ಟ ಮಹಾತ್ಮರು ಎಂದು ಪ್ರಾಧ್ಯಾಪಕ ರಮೇಶ್ ಸಂಕರೆಡ್ಡಿ ಅಭಿಪ್ರಾಯಪಟ್ಟರು.
ಬೆಳಗಾವಿಯ ಜಿಲ್ಲಾ ಅಂಧ ಸೇವಾ ಸಂಸ್ಥೆಯ ಮಾಹೇಶ್ವರಿ ಅಂಧ ಮಕ್ಕಳ ಶಾಲೆಯಲ್ಲಿ ಲೂಯಿ ಬ್ರೈಲ್ ಅವರ 217ನೇ ಜನ್ಮದಿನಾಚರಣೆ, ವಾರ್ಷೀಕ ಸ್ನೇಹ ಸಮ್ಮೇಳನ ಮತ್ತು ಎಸ್.ಎಸ್.ಎಲ್.ಸಿ ಬೀಳ್ಕೋಡುಗೆ ಸಮಾರಂಭವನ್ನು ಆಯೋಜಿಸಲಾಗಿತ್ತು.
ಮುಖ್ಯ ಅತಿಥಿಗಳಾಗಿ ಅವಿನಾಶ ಪೋತದಾರ, ಗೌರವಾನ್ವಿತ ಅತಿಥಿಗಳಾಗಿ ಎಂ.ಎನ್. ಚೇತನಕುಮಾರ್, ಅತಿಥಿಗಳಾಗಿ ನಾಮದೇವ ಬೀಲಕರ, ರಮೇಶ್ ಸಂಕರಡ್ಡಿ ಉಪಸ್ಥಿತರಿದ್ಧರು. ಚಿಂತಾಮಣಿ ಗ್ರಾಮೋಪಾಧ್ಯೆ ಅವರು ಅಧ್ಯಕ್ಷತೆಯನ್ನು ವಹಿಸಿದ್ದರು.
ಅತಿಥಿಗಳಾಗಿ ಆಗಮಿಸಿದ್ದ ಪ್ರಾಧ್ಯಾಪಕರಾದ ರಮೇಶ್ ಸಂಕರೆಡ್ಡಿ ಅವರು, ವೈಯಕ್ತಿಕ ಬದುಕಿಗಿಂತ ಸಮಾಜಕ್ಕಾಗಿ ದುಡಿದವರು ಕೇಲವೇ ಕೆಲವು ಮಹಾತ್ಮಾರಿದ್ದಾರೆ. ಅವರಲ್ಲಿ ಲೂಯಿ ಬ್ರೈಲ್ ಅವರು ಸಮಾಜದ ಕಲ್ಯಾಣಕ್ಕಾಗಿ ತಮ್ಮ ಜೀವವನ್ನೇ ಮುಡಿಪಾಗಿಟ್ಟ ಮಹಾತ್ಮರು. ತಾವು ಅಂಧರಾಗಿ ಸುಮ್ಮನೆ ಕೂರದೇ, ಇಡೀ ಅಂಧರ ಸಮಾಜದ ಏಳ್ಗೆಗೆ ಬ್ರೈನ್ ಲಿಪಿ ನಿರ್ಮಿಸಿ ಜ್ಞಾನದ ಬೆಳಕನ್ನು ಚೆಲ್ಲಿದರು ಎಂದರು.
ಇದಕ್ಕೂ ಮುನ್ನ ಮುಖ್ಯೋಪಾಧ್ಯಾಯರಾದ ಅನಿತಾ ಗಾವಡೆ ಅವರು ಶಾಲಾ ವಾರ್ಷಿಕ ವರದಿ ವಾಚನವನ್ನು ಮಾಡಿದರು.
ನಂತರ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಈ ಸಂದರ್ಭದಲ್ಲಿ ಶ್ರೀನಿವಾಸ ಶಿವಣಗಿ, ಪಮನ ಮೂಲಿಮನಿ, ಅಶೋಕ್ ಚಿಂಡಕ, ತೇಜಸ್ವಿನಿ ಬಾಗೇವಾಡಿ ಇನ್ನುಳಿದವರು ಕಾರ್ಯಕ್ರಮದ ಯಶಸ್ವಿಗೆ ಶ್ರಮಿಸಿದರು.

Spread the love

About Laxminews 24x7

Check Also

ಯುಗಾದಿ, ರಂಜಾನ್ – KSRTCಯಿಂದ ಹೆಚ್ಚುವರಿ ಬಸ್ ಸೇವೆ, ವಿಶೇಷ ರಿಯಾಯಿತಿ ಘೋಷಣೆ

Spread the loveಬೆಂಗಳೂರು: ಯಗಾದಿ  ಹಾಗೂ ರಂಜಾನ್  ಹಬ್ಬ ಒಟ್ಟಿಗೆ ಬಂದ ಹಿನ್ನೆಲೆ ಕೆಎಸ್‌ಆರ್‌ಟಿಸಿ  ಹೆಚ್ಚುವರಿ ಬಸ್‌ಗಳ ವ್ಯವಸ್ಥೆ ಮಾಡಿದ್ದು, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ