ಬೆಂಗಳೂರು : ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ತಡರಾತ್ರಿ ಸುಖಾಸುಮ್ಮನೆ ಅಡ್ಡಾದಿಡ್ಡಿ ಓಡಾಡುವ ಯುವಕರ ವಿರುದ್ಧ ಕಾರ್ಯಾಚರಣೆ ಕೈಗೊಂಡಿರುವ ಸಿಸಿಬಿ ಪೊಲೀಸರು, ಆಪರೇಷನ್ ರೋಮಿಯೊ ಹೆಸರಿನಲ್ಲಿ 200ಕ್ಕೂ ಅಧಿಕ ಮಂದಿಯನ್ನು ಹಿಡಿದು ಎಚ್ಚರಿಕೆ ನೀಡಿ ಬಿಟ್ಟು ಕಳುಹಿಸಿದ್ದಾರೆ.
ಹೊಸ ವರ್ಷಾಚರಣೆ ವೇಳೆ ನಗರದ ನಾಗರೀಕರ ಸಂಭ್ರಮಕ್ಕೆ ಧಕ್ಕೆ ಉಂಟು ಮಾಡುವ ಹಾಗೂ ಅಡ್ಡಾದಿಡ್ಡಿ ಓಡಾಡುವ ಯುವಕರ ಮೇಲೆ ನಿಗಾವಹಿಸಲು ಮುಂದಾಗಿರುವ ಸಿಸಿಬಿ ಪೊಲೀಸರು, ಆಪರೇಷನ್ ರೋಮಿಯೋ ಹೆಸರಿನಲ್ಲಿ ಕಾರ್ಯಾಚರಣೆಗೆ ಇಳಿದಿದ್ಧಾರೆ. ಸೋಮವಾರ ರಾತ್ರಿ ಕೋರಮಂಗಲ ಸೇರಿದಂತೆ ವಿವಿಧ ಕಡೆಗಳಲ್ಲಿ ಸುಖಾಸುಮ್ಮನೆ ಅಲೆದಾಡುತ್ತಿರುವವರಿಗೆ ಬಿಸಿ ಮುಟ್ಟಿಸಿದ್ದಾರೆ.
ಮದ್ಯ ಸೇವಿಸಿ ಬೈಕ್ನಲ್ಲಿ ತೆರಳಿ ಕೂಗಾಡುವುದು, ರಸ್ತೆಯಲ್ಲಿ ಅನಗತ್ಯವಾಗಿ ಕಿರಿ ಕಿರಿ ಮಾಡುತ್ತಿದ್ದ ಯುವಕರನ್ನ ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕರ್ನಾಟಕ ಪೊಲೀಸ್ ಕಾಯ್ದೆ-92 ಅಡಿಯಲ್ಲಿ ವಶಕ್ಕೆ ಪಡೆದಿದ್ದ ಸುಮಾರು 200 ಮಂದಿಗೆ ದಂಡ ವಿಧಿಸಿ ನ್ಯಾಯಾಲಯದಲ್ಲಿ ದಂಡ ಪಾವತಿಸುವಂತೆ ಸೂಚಿಸಲಾಗಿದೆ. ಅಲ್ಲದೇ, ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದರೆ ಬಂಧಿಸುವುದಾಗಿ ಎಚ್ಚರಿಕೆ ನೀಡಿ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Laxmi News 24×7